ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮನೆ ಮಾಲೀಕನ ಮೇಲೆ ಹಲ್ಲೆಗೆ ಯತ್ನ
ಬೆಂಗಳೂರಿನಲ್ಲಿ ನಡೆದ ಜಾತಿ ಗಣತಿ ಸಮಯದಲ್ಲಿ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ ಮೆರೆದಿದ್ದಾರೆ. ಮನೆ ಮಾಲೀಕರ ಮಾಹಿತಿ ಪಡೆಯದೇ ಸ್ಟಿಕ್ಕರ್ ಅಂಟಿಸಿದ್ದಕ್ಕೆ ಆಕ್ಷೇಪಿಸಿದ ಮನೆ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಪೊಲೀಸರು ದೂರು ದಾಖಲಿಸುವ ಬದಲು ರಾಜಿ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು, ಜುಲೈ 03: ಕಾಟಾಚಾರಕ್ಕೆ ಬಿಬಿಎಂಪಿ (BBMP) ಜಾತಿ ಸಮೀಕ್ಷೆ ನಡೆಸಿರುವುದು ಬಟಾಬಯಲಾಗಿದೆ. ಮನೆ ಬಳಿ ಬರುವ ಸಿಬ್ಬಂದಿ ಮಾಹಿತಿ ಪಡೆಯದೇ ಸೈಲೆಂಟ್ ಆಗಿ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕೂಡ ಸ್ಪಷ್ಟನೆ ನೀಡಿದೆ. ಈ ಮಧ್ಯೆ ಸರ್ವೆ ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕನಿಗೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ಮಾಡಲು ಯತ್ನಿಸಿರುವಂತಹ ಘಟನೆ ಬೆಂಗಳೂರಿನ ಸಾರ್ವಭೌಮನಗರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ನಂದೀಶ್ ಎಂಬುವವರ ಮೇಲೆ ಪಾಲಿಕೆ ಸಿಬ್ಬಂದಿ ಹಲ್ಲೆಗೆ ಮುಂದಾಗಿದ್ದಾರೆ. ಪಾಲಿಕೆ ಸಿಬ್ಬಂದಿಯ ಗೂಂಡಾವರ್ತನೆ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos