ಕಾಶ್ಮೀರದಲ್ಲಿ ಜನರು ತಮ್ಮ ಗೊಂದಲ ನೀತಿಗಳನ್ನು ಅಪ್ಪಿಕೊಂಡು ಸಾಯಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ: ಪಿ ಚಿದಂಬರಂ
ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ತಮ್ಮ ಗೊಂದಲದ ನೀತಿಗಳನ್ನು ಅಪ್ಪಿಕೊಂಡು ಸಾಯಲಿ ಎಂದು ಸರ್ಕಾರ ಬಯಸುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸರ್ಕಾರ ಒಂದು ಕ್ಷಣವನ್ನೂ ಮೀಸಲಿಡುತ್ತಿಲ್ಲ, ಕಾಶ್ಮೀರದಲ್ಲಿ ಸರ್ಕಾರದ ನೀತಿಗಳು ಗೊಂದಲಮಯವಾಗಿದೆ ಇವುಗಳನ್ನೇ ಅಪ್ಪಿಕೊಂಡು ಜನರು ಸಾಯಲಿ ಎಂದು ಸರ್ಕಾರ ಎದುರುನೋಡುತ್ತಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ(Jammu And Kashmir)ದಲ್ಲಿ ಜನರು ತಮ್ಮ ಗೊಂದಲದ ನೀತಿಗಳನ್ನು ಅಪ್ಪಿಕೊಂಡು ಸಾಯಲಿ ಎಂದು ಸರ್ಕಾರ ಬಯಸುತ್ತಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ ಚಿದಂಬರಂ(P Chidambaram) ವಾಗ್ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಈ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸರ್ಕಾರ ಒಂದು ಕ್ಷಣವನ್ನೂ ಮೀಸಲಿಡುತ್ತಿಲ್ಲ, ಕಾಶ್ಮೀರದಲ್ಲಿ ಸರ್ಕಾರದ ನೀತಿಗಳು ಗೊಂದಲಮಯವಾಗಿದೆ ಇವುಗಳನ್ನೇ ಅಪ್ಪಿಕೊಂಡು ಜನರು ಸಾಯಲಿ ಎಂದು ಸರ್ಕಾರ ಎದುರುನೋಡುತ್ತಿದೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯನ್ನು ಭಯೋತ್ಪಾದಕರು ಹತ್ಯೆ ಮಾಡಿದ ದಿನದಂದೇ ಬಿಜೆಪಿ ಜಿ20 ಶೃಂಗಸಭೆಯ ಯಶಸ್ವಿ ಸಂಭ್ರಮಾಚರಣೆಯನ್ನು ನಡೆಸಿದೆ ಎಂದು ಇಂಡಿಯಾ ಮೈತ್ರಿಕೂಟದ ಹಲವು ಪಕ್ಷಗಳು ಟೀಕೆ ಮಾಡಿವೆ.
ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಕರ್ನಲ್ ಮನ್ಪ್ರೀತ್ ಸಿಂಗ್, ಕಮಾಂಡಿಂಗ್ ಆಫೀಸರ್ ಮೇಜರ್ ಆಶಿಶ್ ಧೋಂಚಕ್, ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಮೇಜರ್ ಆಶಿಶ್ ಅವರ ಶೌರ್ಯಕ್ಕಾಗಿ ಈ ವರ್ಷದ ಆಗಸ್ಟ್ 15 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸೇನಾ ಪದಕ ಪಡೆದಿದ್ದರು. ಭಯೋತ್ಪಾದಕರ ವಿರುದ್ಧ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹುತಾತ್ಮ ಯೋಧ ಆಶಿಶ್ ಅವರ ಸೋದರ ಮಾವ ಸುರೇಶ್ ಹೇಳಿದ್ದಾರೆ.
ಮತ್ತಷ್ಟು ಓದಿ: ಅನಂತ್ನಾಗ್ನಲ್ಲಿ ಮುಂದುವರೆದ ಎನ್ಕೌಂಟರ್ನಲ್ಲಿ ಮತ್ತೋರ್ವ ಯೋಧ ಹುತಾತ್ಮ
ಪಾಣಿಪತ್ ನಲ್ಲಿ ಹೊಸ ಮನೆ ಕಟ್ಟಲಾಗಿದೆ. ಆಶಿಶ್ ರಜೆ ಪಡೆದು ಮನೆಗೆ ಮರಳಲು ಮುಂದಾಗಿದ್ದರು. ಅವರ ಹುಟ್ಟುಹಬ್ಬ ಅಕ್ಟೋಬರ್‌ನಲ್ಲಿಯೇ ಇತ್ತು. 23ರಂದು ಅವರ ಹುಟ್ಟುಹಬ್ಬ ಆಚರಿಸಿ, ಅದೇ ದಿನ ಹೊಸ ಮನೆಗೆ ತೆರಳಲು ಕುಟುಂಬಸ್ಥರು ನಿರ್ಧರಿಸಿದ್ದರು. ಆಶಿಶ್ 2012ರಲ್ಲಿ ಸೇನೆಗೆ ಸೇರಿದ್ದರು.
ಆಶಿಶ್ ಮೊದಲಿನಿಂದಲೂ ಸೇನೆಗೆ ಸೇರಲು ಬಯಸಿದ್ದರು, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು, ಸ್ನಾತಕೋತ್ತರ ಪದವಿವರೆಗೆ ಓದಿದ್ದರು. ಕುಟುಂಬ ಪಾಣಿಪತ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:14 pm, Fri, 15 September 23