Sign In

By signing in or creating an account, you agree with Associated Broadcasting Company's Terms & Conditions and Privacy Policy.

Mizoram Assembly Elections: ಮಿಜೋರಾಂ ಜನತೆಗೆ ವಿಡಿಯೋ ಸಂದೇಶ ನೀಡಿದ ಪ್ರಧಾನಿ ಮೋದಿ

ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಿಜೋರಾಂನ ಜನರಿಗೆ ತಮ್ಮ ತಾಯ್ನಾಡು ಸೇವೆಗೆ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ದೆಹಲಿ ಮತ್ತು ಈಶಾನ್ಯ ರಾಜ್ಯಗಳ ನಡುವಿನ ಅಂತರವನ್ನು ತಗ್ಗಿಸುವುದಾಗಿ ಭರವಸೆ ನೀಡಿದ್ದಾರೆ.

Mizoram Assembly Elections: ಮಿಜೋರಾಂ ಜನತೆಗೆ ವಿಡಿಯೋ ಸಂದೇಶ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Nov 05, 2023 | 9:28 PM

ಈಶಾನ್ಯ ಭಾರತದ ಪುಟ್ಟ ರಾಜ್ಯ ಮಿಜೋರಾಂ (Mizoram) ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ಮಿಜೋರಾಂನ ಜನರಿಗೆ ತಮ್ಮ ತಾಯ್ನಾಡು ಸೇವೆಗೆ ಬೆಂಬಲ ಮತ್ತು ಆಶೀರ್ವಾದವನ್ನು ಕೋರಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದೆಹಲಿ ಮತ್ತು ಈಶಾನ್ಯ ರಾಜ್ಯಗಳ ನಡುವಿನ ದೈಹಿಕ ಮತ್ತು ಮಾನಸಿಕ ಅಂತರವನ್ನು ತಗ್ಗಿಸುವುದೇ ಸರ್ಕಾರದ ಬದ್ಧತೆ ಆಗಿದೆ ಎಂದು ಹೇಳಿದ್ದಾರೆ.

ಜಾಗತಿಕ ಪ್ರವಾಸಿ ತಾಣವಾಗಿ ಮಿಜೋರಾಂ ಸಾಮರ್ಥ್ಯ ಹೊಂದಿದ್ದು, ವ್ಯಾಪಾರ, ಪ್ರತಿಭೆ ಮತ್ತು ಪ್ರವಾಸೋದ್ಯಮದ ಮೇಲೆ ಮೂಲಸೌಕರ್ಯ ಅಭಿವೃದ್ಧಿಯ ಧನಾತ್ಮಕ ಪ್ರಭಾವವನ್ನು ಒತ್ತಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮಿಜೋರಾಂನ ಪ್ರದೇಶಗಳಲ್ಲಿ ಮಹತ್ವದ ಪರಿವರ್ತನೆ ಕುರಿತಾಗಿ ಮಾತನಾಡಿದ್ದು, ಅದ್ಭುತ ಮಿಜೋರಾಂ ನಿರ್ಮಾಣ ಮಾಡಲು ಭಾರತೀಯ ಜನತಾ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಝಲರ್‌ಪತನ್‌ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಸುಂಧರಾ ರಾಜೆ: ಸಚಿವ ಪ್ರಲ್ಹಾದ್​ ಜೋಶಿ ಭಾಗಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೆ, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಸುಧಾರಿಸಲು ಕ್ರಮಗಳನ್ನು ಕೈಗೊಂಡಿದೆ. ಮಿಜೋರಾಂನ ಶ್ರೀಮಂತ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಉಲ್ಲೇಖಿಸಿದ್ದು, ಜಾಗತಿಕ ಪ್ರವಾಸಿ ತಾಣವಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ 

ಈ ಹಿಂದಿನ ಮಿಜೋರಾಂ ಭೇಟಿಯಲ್ಲಿ ಸಾರಿಗೆ ವ್ಯವಸ್ಥೆಗೆ ಬಗ್ಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿ, ಇದೀಗ ಸಾರಿಗೆ ವ್ಯವಸ್ಥೆಯನ್ನು ಪರಿವರ್ತಿಸಿದ್ದು, ಅಂದಿನಿಂದ, ಬಿಜೆಪಿ ನೇತೃತ್ವದ ಸರ್ಕಾರವು ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆ: ಕ್ಷೇತ್ರ ಉಸ್ತುವಾರಿಗಳನ್ನಾಗಿ ರಾಜ್ಯ ನಾಯಕರನ್ನು ನೇಮಿಸಿದ ಎಐಸಿಸಿ

ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಾಗಾಗಿ ಜನರು ಚಿಕಿತ್ಸೆಗಾಗಿ ಬೇರೆ ಸ್ಥಳಗಳಿಗೆ ಹೋಗಬೇಕಾಗಿಲ್ಲ. ರೈತರು ರಾಜ್ಯದ ಅಭಿವೃದ್ಧಿಯ ಅಡಿಪಾಯ. ಕೇಂದ್ರ ಯೋಜನೆಯಡಿ 1.7 ಲಕ್ಷ ರೈತರು ತಮ್ಮ ಖಾತೆಗೆ ಹಣ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತದ ಕ್ರೀಡೆಗಳಲ್ಲಿ ಈಶಾನ್ಯವು ಪ್ರಮುಖ ಪಾತ್ರ ವಹಿಸಿದೆ ಮತ್ತು ಮಿಜೋರಾಂ ಸೇರಿದಂತೆ ಈ ಪ್ರದೇಶದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸಲು ಬಿಜೆಪಿ ಬದ್ಧವಾಗಿದೆ ಎಂದಿದ್ದಾರೆ.

ನವೆಂಬರ್ 7 ರಂದು 40 ಸ್ಥಾನಗಳ ವಿಧಾನಸಭೆ ಮತದಾನ ನಡೆಯಲಿದೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಮಿಜೋರಾಂ ಕೂಡ ಒಂದು. ಮುಖ್ಯಮಂತ್ರಿ ಝೋರಂತಂಗ ನೇತೃತ್ವದಲ್ಲಿ ಪ್ರಸ್ತುತ ಮಿಜೋರಾಂ ವಿಧಾನಸಭೆಯು ಡಿಸೆಂಬರ್ 17 ರಂದು ತನ್ನ ಅವಧಿ ಮುಕ್ತಾಯಗೊಳ್ಳಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:24 pm, Sun, 5 November 23