ಗಾಜಾದಲ್ಲಿ 5 ಸಾವಿರ ಮಕ್ಕಳ ಹತ್ಯೆ ನಡೆದಿದೆ ಎಂದ ಪ್ರಿಯಾಂಕಾ ಗಾಂದಿ ವಾದ್ರಾ, ಕದನ ವಿರಾಮಕ್ಕೆ ಮನವಿ
ಗಾಜಾದಲ್ಲಿ 5 ಸಾವಿರ ಮಕ್ಕಳ ಹತ್ಯೆ ನಡೆದಿದೆ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆ ನೀಡಿದ್ದು, ಕದನ ವಿರಾಮಕ್ಕೆ ಮನವಿ ಮಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಜಗತ್ತನ್ನು ಬೆಚ್ಚಿಬೀಳಿಸಿದೆ. ಪತ್ರಿಕೆಗಳು ಮತ್ತು ಟಿವಿ ನ್ಯೂಸ್ ಚಾನೆಲ್‌ಗಳು ಎಲ್ಲಾ ಕಡೆಯೂ ಯುದ್ಧದ ಭೀಕರತೆಯ ಚಿತ್ರಗಳೇ ತುಂಬಿ ಹೋಗಿವೆ.

ಈ ಹತ್ಯಾಕಾಂಡವನ್ನು ತಡೆಯಲು ಎಲ್ಲಾ ಕಡೆಯಿಂದ ಮನವಿ ಮಾಡಲಾಗುತ್ತಿದೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಎರಡೂ ಕಡೆ ಹತ್ಯಾಕಾಂಡವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಈ ಯುದ್ಧಕ್ಕೆ ಕದನ ವಿರಾಮವೊಂದೇ ಪರಿಹಾರ, ಇಲ್ಲದಿದ್ದರೆ ಏನೂ ಉಳಿಯುವುದಿಲ್ಲ ಎಂದಿದ್ದಾರೆ.
ಗಾಜಾದಲ್ಲಿ 5000 ಕ್ಕೂ ಹೆಚ್ಚು ಮಕ್ಕಳು ಸೇರಿ ಸುಮಾರು 10,000 ಜನರನ್ನು ಹತ್ಯೆ ಮಾಡಲಾಗಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ, ಕುಟುಂಬಗಳು ನಾಶವಾಗಿವೆ.ಆಸ್ಪತ್ರೆಗಳು ಮತ್ತು ಆಂಬ್ಯುಲೆನ್ಸ್‌ಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಗಾಜಾದಲ್ಲಿ ಶಾಂತಿ ಕಾಪಾಡುವ ಕುರಿತು ಭಾರತ ಮತದಾನದಿಂದ ದೂರ ಉಳಿದಿರುವ ಬಗ್ಗೆ ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಮತ್ತಷ್ಟು ಓದಿ: ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 7 ಮಂದಿ ಒತ್ತೆಯಾಳುಗಳು ಸಾವು
ಭಾರತದ ಈ ವರ್ತನೆ ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿದ್ದರು. ಮತದಾನದಿಂದ ದೂರವಿರುವುದು ಭಾರತವು ಐತಿಹಾಸಿಕವಾಗಿ ಪ್ರತಿಪಾದಿಸಿದ ಅಹಿಂಸೆ, ನ್ಯಾಯ ಮತ್ತು ಶಾಂತಿಯ ತತ್ವಗಳ ನಿರಾಕರಣೆ ಎಂದೇ ಹೇಳಬಹುದು.
ಅಕ್ಟೋಬರ್ 7 ರಂದು, ಹಮಾಸ್ ಇಸ್ರೇಲ್ ಮೇಲೆ ಏಕಕಾಲದಲ್ಲಿ 5000 ರಾಕೆಟ್ಗಳನ್ನು ಹಾರಿಸಿತು ಮತ್ತು ಅದರ ಮೇಲೆ ದಾಳಿ ಮಾಡಿತು. ಇದಾದ ನಂತರ ಇಸ್ರೇಲ್ ಗಾಜಾದಲ್ಲಿ ದಾಳಿ ಆರಂಭಿಸಿತು. ಹಮಾಸ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, ಹಲವರು ಗಾಯಗೊಂಡಿದ್ದಾರೆ.
ಇಸ್ರೇಲ್ ದಾಳಿಗಳು ಗಾಜಾದಲ್ಲಿ ಭಾರಿ ವಿನಾಶವನ್ನು ಕಂಡಿದೆ.ಹೆಚ್ಚು ಕಡಿಮೆ 11 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಹಮಾಸ್ ಅನ್ನು ನಾಶಪಡಿಸುವವರೆಗೂ ದಾಳಿ ನಿಲ್ಲುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ