ಪುಣೆ ಬಳಿ‌ ಶಂಕಿತ ಐಸಿಸ್ ಉಗ್ರರ ಬಂಧನ ಕೇಸ್​; ಕರ್ನಾಟಕದಲ್ಲೂ‌ ಸ್ಫೋಟಕ್ಕೆ ಪ್ಲ್ಯಾನ್​

ಎನ್​ಐಎ ಚಾರ್ಜ್ ಶೀಟ್​ನಲ್ಲಿ ಕರ್ನಾಟಕದಲ್ಲಿ ಸ್ಫೋಟಕ್ಕೆ ಸ್ಥಳ ಗುರ್ತಿಸಿದ್ದರ ಬಗ್ಗೆ ಉಲ್ಲೇಖವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ತೆಲಂಗಾಣ ಹಾಗೂ ಇತರೆಡೆ ಪ್ಯಾಬ್ರಿಕೇಟೆಡ್ ಐಇಡಿ ಪ್ಲಾಂಟ್ ಮಾಡಿ ಶಂಕಿತರು ಸ್ಪೋಟಕ್ಕೆ ಸಂಚು ಮಾಡಿದ್ದರು. ಈ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಯತ್ನಿಸಿದ್ದರು ಎಂಬುದು ಬೆಳಕಿಗೆ ಬಂದಿದೆ.

ಪುಣೆ ಬಳಿ‌ ಶಂಕಿತ ಐಸಿಸ್ ಉಗ್ರರ ಬಂಧನ ಕೇಸ್​; ಕರ್ನಾಟಕದಲ್ಲೂ‌ ಸ್ಫೋಟಕ್ಕೆ ಪ್ಲ್ಯಾನ್​
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 05, 2023 | 9:35 PM

ಮಹಾರಾಷ್ಟ್ರ, ನ.05: ಕಳೆದ ಜುಲೈನಲ್ಲಿ ಪುಣೆ(Pune) ಬಳಿ‌ ಶಂಕಿತ ಐಸಿಸ್ ಉಗ್ರರ(ISIS Terrorist) ಬಂಧನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಹೌದು, ಪುಣೆಯಿಂದ ಕರ್ನಾಟಕಕ್ಕೂ ಶಂಕಿತರ ಲಿಂಕ್ ಬೆಸೆದಿದ್ದು, ಕರ್ನಾಟಕದಲ್ಲೂ‌ ಸಹ ಸ್ಫೋಟಕ್ಕೆ ಪ್ಲಾನ್ ಮಾಡಿದ್ದರೆಂದು ಎನ್​ಐಎ(NIA) ತನಿಖೆಯಿಂದ ಬಯಲಾಗಿದೆ.  ಈ ಹಿನ್ನಲೆ ರಾಷ್ಟ್ರೀಯ ತನಿಖಾ ತಂಡದಿಂದ 7 ಶಂಕಿತ ಉಗ್ರರ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದೆ.

ವಿವಿಧ ರಾಜ್ಯಗಳಲ್ಲಿ ಸ್ಫೋಟಕ್ಕೆ ಸ್ಥಳ ಗುರ್ತಿಸಿದ್ದ ಬಗ್ಗೆ ಉಲ್ಲೇಖ

ಎನ್​ಐಎ ಚಾರ್ಜ್ ಶೀಟ್​ನಲ್ಲಿ ಕರ್ನಾಟಕದಲ್ಲಿ ಸ್ಫೋಟಕ್ಕೆ ಸ್ಥಳ ಗುರ್ತಿಸಿದ್ದರ ಬಗ್ಗೆ ಉಲ್ಲೇಖವಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ, ತೆಲಂಗಾಣ ಹಾಗೂ ಇತರೆಡೆ ಪ್ಯಾಬ್ರಿಕೇಟೆಡ್ ಐಇಡಿ ಪ್ಲಾಂಟ್ ಮಾಡಿ ಶಂಕಿತರು ಸ್ಪೋಟಕ್ಕೆ ಸಂಚು ಮಾಡಿದ್ದರು. ಈ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಯತ್ನಿಸಿದ್ದರು. ಕಳೆದ ಜುಲೈನಲ್ಲಿ ಮಹಾರಾಷ್ಟ್ರ ಪೊಲೀಸರು ಪುಣೆ ಬಳಿ ಶಂಕಿತರನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಎನ್​ಐಎ ತನಿಖೆ ಪೂರ್ಣಗೊಳಿಸಿ ಮುಂಬೈ ಎನ್​ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

ಇದನ್ನೂ ಓದಿ:Shivamogga police: ಐಸಿಸ್ ಉಗ್ರರ ಜೊತೆ ಸಂಪರ್ಕ ಆರೋಪ, ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ, ಒಬ್ಬ ಪರಾರಿ

ಇನ್ನು ಜುಲೈ 18, 2023 ರಂದು ಪುಣೆ ಪೊಲೀಸರು ಮೋಟಾರ್ ಸೈಕಲ್ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವಾಗ ಇಬ್ಬರನ್ನು ಬಂಧಿಸಿದ್ದರು. ಈ ಘಟನೆಯಲ್ಲಿ ಬಂಧಿತರಾಗಿದ್ದ ಇಬ್ಬರು ಆರೋಪಿಗಳು ಉಗ್ರರು ಎಂದು ತಿಳಿದುಬಂದಿದೆ. ಮುಹಮ್ಮದ್ ಇಮ್ರಾನ್, ಮುಹಮ್ಮದ್ ಯೂಸುಫ್ ಖಾನ್ ಅಲಿಯಾಸ್ ಅಮೀರ್ ಅಬ್ದುಲ್ ಹಮೀದ್ ಖಾನ್ ಮತ್ತು ಮುಹಮ್ಮದ್ ಯೂನಸ್ ಮುಹಮ್ಮದ್ ಯಾಕೂಬ್ ಸಾಕಿ ಬಂಧಿತರು. ಆ ವೇಳೆ ಆತನ ಮೂರನೇ ಸಹಚರ ಮೊಹಮ್ಮದ್ ಶಹನವಾಜ್ ಆಲಂ ತಲೆಮರೆಸಿಕೊಂಡಿದ್ದ. ಪುಣೆ ಐಸಿಸ್ ಮಾಡ್ಯೂಲ್ ಪ್ರಕರಣದಲ್ಲಿ ಇದು ಎಂಟನೇ ಬಂಧನವಾಗಿದೆ. ಅವರ ವಿಚಾರಣೆಯಿಂದ ಮಹತ್ವದ ಮಾಹಿತಿ ಸಿಗುವ ಸಾಧ್ಯತೆಯಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:21 pm, Sun, 5 November 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್