ಸ್ವಾತಂತ್ರ್ಯ ಹೋರಾಟರನಿಗೆ ಪಿಂಚಣಿ ನೀಡದ ಸರ್ಕಾರಕ್ಕೆ ಕೋರ್ಟ್ ದಂಡ; 40 ವರ್ಷಗಳಿಂದ ಬಾಕಿ ಹಣ ಬಡ್ಡಿ ಸೇರಿಸಿ ಕೊಡುವಂತೆ ಆದೇಶ

Delhi HC Anguish: ಕಳೆದ ನಾಲ್ಕು ದಶಕದಿಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡದೇ ಸತಾಯಿಸುತ್ತಿದ್ದ ಸರ್ಕಾರಕ್ಕೆ ದೆಹಲಿ ಕೋರ್ಟ್ ದಂಡ ಹಾಕಿದೆ. ಅಷ್ಟೂ ವರ್ಷದ ಪಿಂಚಣಿ ಮೊತ್ತವನ್ನು ಬಡ್ಡಿಸಹಿತ ಕೊಡಬೇಕೆಂದು ಹೈಕೋರ್ಟ್ ಆದೇಶಿಸಿದೆ. ಸರ್ಕಾರ 1980ರಿಂದ ಇಲ್ಲಿಯವರೆಗೆ ಸಿಗಬೇಕಾದ ಪಿಂಚಣಿ ಮೊತ್ತವನ್ನು ವಾರ್ಷಿಕ ಶೇ. 6ರ ಬಡ್ಡಿ ಸೇರಿಸಿ 12 ವಾರದೊಳಗೆ ನೀಡಬೇಕು ಎಂದು ನ್ಯಾ| ಸುಬ್ರಮಣಿಯನ್ ಪ್ರಸಾದ್ ಆದೇಶಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟರನಿಗೆ ಪಿಂಚಣಿ ನೀಡದ ಸರ್ಕಾರಕ್ಕೆ ಕೋರ್ಟ್ ದಂಡ; 40 ವರ್ಷಗಳಿಂದ ಬಾಕಿ ಹಣ ಬಡ್ಡಿ ಸೇರಿಸಿ ಕೊಡುವಂತೆ ಆದೇಶ
ಕೋರ್ಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 05, 2023 | 2:52 PM

ನವದೆಹಲಿ, ನವೆಂಬರ್ 5: ಕಳೆದ ನಾಲ್ಕು ದಶಕದಿಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡದೇ ಸತಾಯಿಸುತ್ತಿದ್ದ ಸರ್ಕಾರಕ್ಕೆ ದೆಹಲಿ ಕೋರ್ಟ್ ದಂಡ ಹಾಕಿದೆ. ಅಷ್ಟೂ ವರ್ಷದ ಪಿಂಚಣಿ ಮೊತ್ತವನ್ನು (pension amount) ಬಡ್ಡಿಸಹಿತ ಕೊಡಬೇಕೆಂದು ಹೈಕೋರ್ಟ್ ಆದೇಶಿಸಿದೆ. ಸ್ವಾತಂತ್ರ್ಯ ಹೋರಾಟಗಾರರಾದ 96 ವರ್ಷದ ಉತ್ತಮ್ ಲಾಲ್ ಸಿಂಗ್ ಅವರ ಮನವಿಯನ್ನು ಪುರಸ್ಕರಿಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುಬ್ರಮಣಿಂ ಪ್ರಸಾದ್ (Delhi HC Judge Subramaniam Prasad), ಆಡಳಿತ ವ್ಯವಸ್ಥೆ ಬಗ್ಗೆ ಕಿಡಿಕಾರುತ್ತಾ ನವೆಂಬರ್ 2ರಂದು ಈ ಮೇಲಿನ ತೀರ್ಪು ನೀಡಿದ್ದಾರೆ.

‘ಈ ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಮತ್ತು ಬೆವರು ಹರಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಭಾರತ ಸರ್ಕಾರ ಸ್ವಾತಂತ್ರ್ಯ ಸೈನಿಕ್ ಸಮ್ಮಾನ್ ಪೆನ್ಷನ್ ಯೋಜನೆ (Swatantra Sainik samman Pension Scheme) ಪ್ರಕಟಿಸಿತು. ಆದರೆ, 96 ವರ್ಷದ ಸ್ವಾತಂತ್ರ್ಯ ಯೋಧರಿಗೆ ಸಿಗಬೇಕಾದ ಪಿಂಚಣಿ ನೀಡದೇ ಕಚೇರಿಗಳಿಗೆ ಅಲೆದಾಡುವಂತೆ ಮಾಡಲಾಗಿದೆ. ಇವರು ತಮ್ಮ ಪಿಂಚಣಿಗೆ 40ಕ್ಕೂ ಹೆಚ್ಚು ವರ್ಷ ಕಾಯಬೇಕಾಗಿ ಬಂತು. ಇದು ಆಡಳಿತ ವ್ಯವಸ್ಥೆ ಹೇಗಿದೆ ಎಂದು ತೋರಿಸುತ್ತದೆ,’ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್ ದಿನ ಏರ್ ಇಂಡಿಯಾ ವಿಮಾನ ಹಾರಾಡುವಂತಿಲ್ಲ: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್​ನಿಂದ ಎಚ್ಚರಿಕೆ

ಸರ್ಕಾರ 1980ರಿಂದ ಇಲ್ಲಿಯವರೆಗೆ ಸಿಗಬೇಕಾದ ಪಿಂಚಣಿ ಮೊತ್ತವನ್ನು ವಾರ್ಷಿಕ ಶೇ. 6ರ ಬಡ್ಡಿ ಸೇರಿಸಿ 12 ವಾರದೊಳಗೆ ನೀಡಬೇಕು ಎಂದು ನ್ಯಾ| ಸುಬ್ರಮಣಿಯನ್ ಪ್ರಸಾದ್ ಆದೇಶಿಸಿದ್ದಾರೆ. ಸರ್ಕಾರಕ್ಕೂ 20,000 ರೂ ದಂಡ ವಿಧಿಸಿದ್ದು, ಆರು ವಾರದೊಳಗೆ ದಂಡದ ಮೊತ್ತ ಕಟ್ಟುವಂತೆಯೂ ತಿಳಿಸಿದ್ದಾರೆ.

‘ಸ್ವಾತಂತ್ರ್ಯ ಹೋರಾಟಗಾರರನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿ ನೋಡಿದರೆ ನೋವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನಿರಾಕರಿಸುವುದು ಅವರಿಗೆ ಮಾಡಿದ ಅವಮಾನ. ಸರ್ಕಾರದ ಭಂಡತೆಯನ್ನು ಈ ಕೋರ್ಟ್ ಸಹಿಸುವುದಿಲ್ಲ,’ ಎಂದು ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ಗಾಳಿಯ ಗುಣಮಟ್ಟ ತೀರಾ ಕಳಪೆ, ನವೆಂಬರ್ 10ರವರೆಗೆ ಶಾಲೆಗಳು ಬಂದ್

96 ವರ್ಷದ ಉತ್ತಮ್ ಲಾಲ್ ಸಿಂಗ್ 1922ರಲ್ಲಿ ಜನಿಸಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಆಸ್ತಿಗಳನ್ನು ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದರು. ಇಂಥವರಿಗೆ ಸರ್ಕಾರ ಪಿಂಚಣಿ ನಿರಾಕರಿಸಿದೆ ಎಂದು ದೆಹಲಿ ಹೈಕೋರ್ಟ್ ಜಡ್ಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Sun, 5 November 23

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ