ಯಜಮಾನ ಇಲ್ಲ ಎಂಬ ಅರಿವಿಲ್ಲ, ಆಸ್ಪತ್ರೆಯ ಶವಾಗಾರದ ಬಳಿ 4 ತಿಂಗಳಿಂದ ಕಾಯುತ್ತಿರುವ ಶ್ವಾನ
ಕೇರಳದ ಕಣ್ಣೂರು ಜಿಲ್ಲಾ ಆಸ್ಪತ್ರೆಯ ಶವಾಗಾರದ ಹೊರಗೆ ನಾಯಿಯೊಂದು ಸುಮಾರು ನಾಲ್ಕು ತಿಂಗಳಿನಿಂದ ತನ್ನ ಯಜಮಾನನ ಬರುವಿಕೆಗಾಗಿ ತಾಳ್ಮೆಯಿಂದ ಕಾಯುತ್ತಿದೆ. ಆದರೆ ತನ್ನ ಮಾಲೀಕ ಇಲ್ಲ ಎನ್ನುವ ಅರಿವು ಆ ನಾಯಿಗಿಲ್ಲ ಇದೇ ನೋಡಿ ಮುಗ್ದ ಪ್ರೀತಿ.
ಕೇರಳದ ಕಣ್ಣೂರು ಜಿಲ್ಲಾ ಆಸ್ಪತ್ರೆಯ ಶವಾಗಾರದ ಹೊರಗೆ ನಾಯಿಯೊಂದು ಸುಮಾರು ನಾಲ್ಕು ತಿಂಗಳಿನಿಂದ ತನ್ನ ಯಜಮಾನನ ಬರುವಿಕೆಗಾಗಿ ತಾಳ್ಮೆಯಿಂದ ಕಾಯುತ್ತಿದೆ. ಆದರೆ ತನ್ನ ಮಾಲೀಕ ಇಲ್ಲ ಎನ್ನುವ ಅರಿವು ಆ ನಾಯಿಗಿಲ್ಲ ಇದೇ ನೋಡಿ ಮುಗ್ದ ಪ್ರೀತಿ.
ಕಂದು ಮತ್ತು ಬಿಳಿ ನಾಯಿ ತನ್ನ ಮಾಲೀಕನಿಗಾಗಿ ಕಾದು ಕುಳಿತಿದೆ, ಆದರೆ ಮಾಲೀಕರು ಯಾರೆಂಬುದನ್ನು ಗುರುತಿಸಲು ಆಸ್ಪತ್ರೆಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ರೋಗಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಸ್ಪತ್ರೆಯ ಅಟೆಂಡೆಂಟ್ ರಾಜೇಶ್ ಕುಮಾರ್ ಕೆ ಅವರು ನಾಲ್ಕು ತಿಂಗಳ ಹಿಂದೆ ಶವಾಗಾರಕ್ಕೆ ಹೋಗುವ ರಾಂಪ್ ಮೇಲೆ ಸಾಕು ನಾಯಿ ಮಲಗಿರುವುದನ್ನು ಗಮನಿಸಿದರು.
ಮೊದಲಿಗೆ, ಅವರು ನಾಯಿಯನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಆದರೆ ನಾಲ್ಕು ತಿಂಗಳುಗಳ ಕಾಲ ಅಲ್ಲೇ ಇದ್ದಾಗ ಮತ್ತೆ ನಾಯಿಯ ಮೇಲೆ ಅವರ ಗಮನ ಹೋಗಿತ್ತು.
ಮತ್ತಷ್ಟು ಓದಿ: ‘ದರ್ಶನ್ ಸಾಕು ನಾಯಿ ಕಚ್ಚಿದರೂ ಅವರ ಮನೆಯವರು ಯಾರೂ ಸಹಾಯಕ್ಕೆ ಬಂದಿಲ್ಲ’; ಮಹಿಳೆಯ ಅಸಮಾಧಾನ
ಮಾಲೀಕರ ಗುರುತು ಪತ್ತೆಯಾಗದಿದ್ದರೂ, ರೋಗಿಯೊಂದಿಗೆ ಆಸ್ಪತ್ರೆಗೆ ಬಂದಿರುವ ವಿಚಾರ ತಿಳಿದುಬಂದಿದೆ. ಮೊದ ಮೊದಲು ನಾಯಿಗೆ ಏನೇ ಕೊಟ್ಟರೂ ತಿನ್ನುತ್ತಿರಲಿಲ್ಲ, ನಂತರ ಬಿಸ್ಕತ್ತು ಹಾಗೂ ಹಾಲನ್ನು ತಿನ್ನಲು ಶುರು ಮಾಡಿತ್ತು. ನಾಯಿಯು ಶವಾಗಾರಕ್ಕೆ ಹೋಗುವ ದಾರಿಯಲ್ಲೇ ಮಲಗಿರುತ್ತದೆ.
ನಾಯಿ ಬೆಳಗ್ಗೆ ಎಲ್ಲೇ ಹೋಗಿದ್ದರೂ ಸಂಜೆಯಾಗುವಷ್ಟರಲ್ಲಿ ಶವಾಗಾರದ ಬಳಿಗೆ ಮರಳುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆ ನಾಯಿಗೆ ರಾಮು ಎಂದು ಹೆಸರಿಡಲಾಗಿದ್ದು, ಮೊಟ್ಟೆ ಹಾಗೂ ಮೀನನ್ನು ಖುಷಿಯಿಂದ ತಿನ್ನುತ್ತದೆ, ಕಣ್ಣೂರಿನ ಮಹಿಳೆಯೊಬ್ಬರು ಈ ನಾಯಿಯನ್ನು ದತ್ತುಪಡೆಯಲು ಮುಂದಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ