ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ

Mahadev Online Betting Scam: ಯುಎಇಯಲ್ಲಿ ನಡೆದ ಒಂದು ಅದ್ದೂರಿ ಮದುವೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಹವಾಲ ಜಾಲಗಳನ್ನು ಬೆಳಕಿಗೆ ತರುವಂತೆ ಮಾಡಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್ ಮತ್ತದರ ಮಾಲೀಕರ ತನಿಖೆ ನಡೆಸಿದಂತೆಲ್ಲಾ ಇಡಿ ಅಧಿಕಾರಿಗಳಿಗೆ ಗಂಭೀರ ಸಂಗತಿಗಳು ಗೋಚರಿಸುತ್ತಿವೆ. ಅಂತಾರಾಷ್ಟ್ರೀಯ ಮನಿ ಲಾಂಡರಿಂಗ್ ನಿಗ್ರಹ ಸಂಸ್ಥೆಗಳ ನೆರವನ್ನು ಬಳಸಿಕೊಳ್ಳಲು ಇಡಿ ಪ್ರಯತ್ನಿಸುತ್ತಿದೆ. ಆ್ಯಪ್ ಮಾಲೀಕನ ಮದುವೆಗೆ ಹೋಗಿದ್ದ 17 ಬಾಲಿವುಡ್ ಸೆಲಬ್ರಿಟಿಗಳ ಮೇಲೂ ತನಿಖಾಧಿಕಾರಿಗಳ ಕಣ್ಣುಬಿದ್ದಿದೆ.

ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ
ಮಹದೇವ್ ಆನ್ಲೈನ್ ಬೆಟ್ಟಿಂಗ್
Follow us
|

Updated on: Sep 19, 2023 | 3:29 PM

ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ (Mahadev Online Betting Scam) ಬೆಚ್ಚಿಬೀಳಿಸುವ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ನ್ಯೂಸ್18ನಲ್ಲಿ ಬಂದಿರುವ ವರದಿ ಪ್ರಕಾರ ಮಹದೇವ್ ಬೆಟ್ಟಿಂಗ್ ಆ್ಯಪ್​ನ ಮಾಲೀಕರಿಗೆ ಪಾಕಿಸ್ತಾನದ ನಂಟಿದೆಯಂತೆ. ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಮೂಲಗಳಿಂದ ಸಿಕ್ಕ ಮಾಹಿತಿ ಉಲ್ಲೇಖಿಸಿ ನ್ಯೂಸ್18 ಇದರ ವರದಿ ಮಾಡಿದೆ. ಜಾಗತಿಕ ಹಣ ಅಕ್ರಮ ವರ್ಗಾವಣೆ ನಿಗ್ರಹ ಸಂಸ್ಥೆಗಳೊಂದಿಗೆ ಇಡಿ ಸಂಪರ್ಕದಲ್ಲಿದ್ದು ಅವುಗಳಿಂದ ತನಿಖೆಗೆ ಸಹಕಾರ ಯಾಚಿಸಿದೆ. ಈ ಮೂಲಕ ಪ್ರಕರಣದ ಬೇರಿನ ಆಳಕ್ಕೆ ಇಳಿಯಲು ಜಾರಿ ನಿರ್ದೇಶನಾಲಯ ಹೊರಟಿದೆ. ಪ್ರಾಥಮಿಕ ಅಂದಾಜು ಪ್ರಕಾರ ಈ ಪ್ರಕರಣ 5,000 ರೂ ಕೋಟಿ ರೂನದ್ದಾಗಿದೆ.

250 ಕೋಟಿ ರೂ ವೆಚ್ಚದ ಮದುವೆಯಿಂದ ಶುರು…

ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ್ ಅವರು ಮಹದೇವ್ ಬೆಟ್ಟಿಂಗ್ ಆ್ಯಪ್​ನ ಮಾಲೀಕರು. ದುಬೈನಲ್ಲಿ 28 ವರ್ಷದ ಸೌರಭ್ ಚಂದ್ರಾಕರ್ ಮದುವೆಗೆ ಬರೋಬ್ಬರಿ 250 ಕೋಟಿ ರೂ ಖರ್ಚಾಗಿತ್ತು. ಇದು ತನಿಖಾ ಸಂಸ್ಥೆಗಳ ಕಣ್ಣಿಬಿದ್ದಿತ್ತು. ಒಂದೊಂದೇ ಹವಾಲ ಕಾರ್ಯಾಚರಣೆಗಳು ಬೆಳಕಿಗೆ ಬರತೊಡಗಿದ್ದವು.

ಸೌರಭ್ ಚಂದ್ರಾಕರ್ ಮತ್ತು ರವಿ ಉಪ್ಪಳ್ ಅವರಿಬ್ಬರೂ ದುಬೈನಿಂದಲೇ ಮಹದೇವ್ ಬೆಟ್ಟಿಂಗ್ ಆ್ಯಪ್​ನ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು. ವಿವಿಧ ಬೇನಾಮಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಅಕ್ರಮ ಹಣ ವರ್ಗಾವಣೆ (Money Laundering) ನಡೆಸುತ್ತಿದ್ದರು. ಇದಕ್ಕಾಗಿ 70 ಶೆಲ್ ಕಂಪನಿಗಳನ್ನು ಬಳಸಲಾಗುತ್ತಿತ್ತು. ಭಾರತದಲ್ಲಿ ನಡೆಯುತ್ತಿದ್ದ ಹವಾಲ ಕಾರ್ಯಾಚರಣೆಗಳು ಯುಎಇ ಮತ್ತು ಪಾಕಿಸ್ತಾನಕ್ಕೆ ನಂಟಿರುವುದನ್ನು ತನಿಖಾ ಸಂಸ್ಥೆಗಳು ಗಮನಿಸಿದ್ದವು.

ಇದನ್ನೂ ಓದಿ: ನೂಹ್ ಹಿಂಸಾಚಾರ; ಹರ್ಯಾಣದ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ 14 ದಿನ ಜುಡಿಷಿಯಲ್ ಕಸ್ಟಡಿಗೆ

ಮದುವೆಗೆ ಹೋದ ಬಾಲಿವುಡ್ ಸೆಲಬ್ರಿಟಿಗಳ ಮೇಲೆ ಕಣ್ಣು

ಫೆಬ್ರುವರಿಯಲ್ಲಿ ನಡೆದಿದ್ದ ಸೌರಭ್ ಚಂದ್ರಾಕರ್ ಅವರ ಧಾಂ ಧೂಮ್ ಮದುವೆಗೆ ಉದಾರವಾಗಿ ಬಾಲಿವಡ್ ಸೆಲಬ್ರಿಟಿಗಳನ್ನು ಕರೆಸಲಾಗಿತ್ತು. ಶ್ರದ್ಧಾ ಕಪೂರ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ ಸೇರಿದಂತೆ 17 ಬಾಲಿವುಡ್ ಸೆಲಬ್ರಿಟಿಗಳು ಹೋಗಿದ್ದುದು ಕಾರ್ಯಕ್ರಮದ ವಿಡಿಯೋಗಳಿಂದ ಗೊತ್ತಾಗಿದೆ.

‘ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮತ್ತು ಶೋ ನೀಡಲು ಸೆಲಬ್ರಿಟಿಗಳಿಗೆ ದೊಡ್ಡ ಪ್ರಮಾಣದಲ್ಲಿ ಸಂಭಾವನೆ ಕೊಡಲಾಗಿತ್ತು. ಅಪರಾಧದಿಂದ ಗಳಿಸಿದ ಹಣವಾಗಿತ್ತು’ ಎಂದು ಇಡಿಯಲ್ಲಿರುವ ಹಿರಿಯ ವ್ಯಕ್ತಿಯೊಬ್ಬರು ತಮಗೆ ತಿಳಿಸಿದರೆಂದು ನ್ಯೂಸ್18 ವರದಿಯಲ್ಲಿ ಹೇಳಲಾಗಿದೆ.

ಭಾರತದ ವಿವಿಧ ನಗರಗಳಲ್ಲಿರುವ ಹವಾಲ ಆಪರೇಟರುಗಳಿಗೆ ಸಂಬಂಧಿಸಿದ ಸ್ಥಳಗಳ ಮೆಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 417 ಕೋಟಿ ರೂ ಮೊತ್ತದ ಆಸ್ತಿಯನ್ನು ಜಫ್ತಿ ಮಾಡಿಕೊಂಡಿದ್ದಾರೆ. ಒಬ್ಬೊಬ್ಬ ಹವಾಲ ಆಪರೇಟರ್ ಕೂಡ 500 ಕ್ಕೂ ಹೆಚ್ಚು ಡಮ್ಮಿ ಅಕೌಂಟ್​ಗಳನ್ನು ನಿರ್ವಹಿಸುತ್ತಿದ್ದನಂತೆ.

ಇದನ್ನೂ ಓದಿ: ಮುಳ್ಳಿಗೆ ಮುಳ್ಳು; ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಭಾರತ; 5 ದಿನದಲ್ಲಿ ಹಿಂದಿರುಗುವಂತೆ ಸೂಚನೆ

ಹವಾಮಾನಕ್ಕೂ ಬೆಟ್ಟಿಂಗ್? ಏನುಂಟು ಏನಿಲ್ಲ ಮಾದೇವ..!

ಮಹದೇವ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಎಂಬುದು ಬೆಟ್ಟಿಂಗ್ ಬ್ರಹ್ಮಾಂಡವಾಗಿದೆ. ಇದರಲ್ಲಿ ವಿವಿಧ ಗೇಮ್​ಗಳು, ಲಾಟರಿ, ಬೆಟ್ಟಿಂಗ್ ಎಲ್ಲವೂ ಇವೆ. ಬೆಟ್ಟಿಂಗ್​ನಲ್ಲಂತೂ ಇದರಲ್ಲಿ ಏನಿಲ್ಲ ಎಂದು ದುರ್ಬೀನು ಹಾಕಿ ಹುಡುಕಬೇಕು. ಕ್ರೀಡಾ ಪಂದ್ಯಗಳು, ಚುನಾವಣೆಗಳ ಮೇಲೆ ಬೆಟ್ಟಿಂಗ್ ಕಟ್ಟುವುದನ್ನು ಕಂಡಿದ್ದೇವೆ. ಇದರಲ್ಲಿ ಇಂಥ ಬೆಟ್ಟಿಂಗ್ ಜೊತೆಗೆ ಹವಾಮಾನದ ಬಗ್ಗೆಯೂ ಬೆಟ್ಟಿಂಗ್ ಇರುತ್ತಿತ್ತು. ಕಳೆದ 4 ವರ್ಷಗಳಿಂದ ಅಸ್ತಿತ್ವದಲ್ಲಿರುವ ಈ ಬೆಟ್ಟಿಂಗ್ ಆ್ಯಪ್​ನಲ್ಲಿ ಅಮಾಯಕ ಗ್ರಾಹಕರನ್ನು ವಂಚಿಸಲಾಗುತ್ತಿತ್ತು. ಬೆಟ್ಟಿಂಗ್ ಆಡುವವರಲ್ಲಿ ಬಹುತೇಕರಿಗೆ ಸೋಲಾಗುವ ರೀತಿಯಲ್ಲಿ ಆ್ಯಪ್​ನಲ್ಲಿ ಮೋಸ ಎಸಗಲಾಗುತ್ತಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಮುಂಗಾರು ಮಳೆಗೆ ಚಾರ್ಮಾಡಿ ಘಾಟ್​ನಲ್ಲಿ ಜಲವೈಭವ; ನೂರಾರು ಜಲಪಾತಗಳ ಸೃಷ್ಟಿ
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸತತ ಮಳೆ; ಜಿಗಣೆ ಕಾಟಕ್ಕೆ ಹೈರಾಣಾದ ಪ್ರವಾಹ ತಂಡದ ಅಧಿಕಾರಿಗಳು
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಸುಧಾಕರ್ ಅಭಿನಂದನಾ ಕಾರ್ಯಕ್ರಮದಲ್ಲಿ ಬಾಡೂಟ: ಡ್ರಿಂಕ್ಸ್​​ಗೆ ಮುಗಿಬಿದ್ದ ಜನ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಜಲಾವೃತವಾದ ಸೇತುವೆ ಮೇಲೆ ಸಂಚಾರ;ನೀರು ರಭಸವಾಗಿ ಹರಿಯುತ್ತಿದ್ದರೂ ಡೋಂಟ್​ಕೇರ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಗೋಕಾಕ್ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ; ಸ್ವಲ್ಪ ಯಾಮಾರಿದ್ರು ಅಪಾಯ ಖಚಿತ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
ಸಂಸದ ಡಾ.ಕೆ ಸುಧಾಕರ್​ ಕಾರ್ಯಕ್ರಮದಲ್ಲಿ ಭರ್ಜರಿ ಬಾಡೂಟ ಜೊತೆ ಮದ್ಯ ಆಯೋಜನೆ
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಕಿರಿದಾದ ಸೇತುವೆ ಮೇಲೆ ಹೆಣ ಹೊತ್ತು ಸಾಗಿದ ಗ್ರಾಮಸ್ಥರು, ವಿಡಿಯೋ ವೈರಲ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಧೋನಿ ಹುಟ್ದಬ್ಬ... ಬರೋಬ್ಬರಿ 100 ಅಡಿ ಕಟೌಟ್ ನಿಲ್ಲಿಸಿದ ಫ್ಯಾನ್ಸ್
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ