ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

ಭಾರತದ ಹೊಸ ಸಂಸತ್​​ನಲ್ಲಿ ನಡೆದ ಕಲಾಪದ ಮೊದಲ ದಿನವಾದ ಇಂದು ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿದ್ದು, ಇದನ್ನು ನಾರಿ ಶಕ್ತಿ ವಂದನ್ ಅಧಿನಿಯಂ (Naari Shakti Vandan Adhiniyam) ಎಂದು ಕರೆಯಲಾಗುವುದು. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಇದು ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಗಳಿಗೆ ಸಾಕ್ಷಿಯಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ
ಅರ್ಜುನ್ ರಾಮ್ ಮೇಘವಾಲ್
Follow us
|

Updated on:Sep 19, 2023 | 3:12 PM

ದೆಹಲಿ ಸೆಪ್ಟೆಂಬರ್ 19:  ಮಹಿಳಾ ಮೀಸಲಾತಿ ಮಸೂದೆಗೆ (Women’s Reservation Bill) ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi)ಹೇಳಿದ್ದಾರೆ. ಭಾರತದ ಹೊಸ ಸಂಸತ್​​ನಲ್ಲಿ ನಡೆದ ಕಲಾಪದ ಮೊದಲ ದಿನವಾದ ಇಂದು (ಮಂಗಳವಾರ) ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿದೆ. ಇದನ್ನು ನಾರಿ ಶಕ್ತಿ ವಂದನ್ ಅಧಿನಿಯಮ್ (Naari Shakti Vandan Adhiniyam) ಎಂದು ಕರೆಯಲಾಗುವುದು. ಹೊಸ ಸಂಸತ್ ಭವನದಲ್ಲಿ  ಮಾಡಿದ  ತಮ್ಮ ಮೊದಲ ಭಾಷಣದಲ್ಲಿ ಪ್ರಧಾನಿ ಮೋದಿ ಮಹಿಳಾ ಮೀಸಲಾತಿ ಮಸೂದೆಯನ್ನು ಘೋಷಿಸಿದರು.ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿದೆ ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು.

ಹೊಸ ಸಂಸತ್ತಿನ ಕಟ್ಟಡದಲ್ಲಿ ಮಾಡಿದ ಮೊದಲ ಭಾಷಣದಲ್ಲಿ, ಪ್ರತಿ ದೇಶದ ಇತಿಹಾಸದಲ್ಲಿ “ಮೈಲುಗಲ್ಲುಗಳು” ಎಂದು ಪರಿಗಣಿಸಲಾದ ಕೆಲವು ದಿನಗಳಿವೆ ಎಂದು ಮೋದಿ ಹೇಳಿದರು. ಇಂದು ನಾವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೇವೆ ಎಂದು ಹೆಮ್ಮೆಯಿಂದ ಹೇಳುವಾಗ ಪ್ರತಿಯೊಂದು ದೇಶದ ಅಭಿವೃದ್ಧಿ ಪಯಣದಲ್ಲಿ ಇಂತಹ ಮೈಲುಗಲ್ಲುಗಳು ಬರುತ್ತವೆ. ಹೊಸ ಸದನದ ಮೊದಲ ಅಧಿವೇಶನದ ಮೊದಲ ಭಾಷಣದಲ್ಲಿ, ಇಂದಿನ ಕ್ಷಣ, ಇಂದಿನ ದಿನವು ಇತಿಹಾಸದಲ್ಲಿ ದಾಖಲಾಗಲಿದೆ ಎಂದು ನಾನು ಅತ್ಯಂತ ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.

ಅವರ ಭಾಷಣಕ್ಕೆ ಕೆಲವೇ ನಿಮಿಷಗಳ ಮೊದಲು, ಕೇಂದ್ರ ಸರ್ಕಾರವು ಸಂವಿಧಾನ (ನೂರಾ ಇಪ್ಪತ್ತೆಂಟನೇ ತಿದ್ದುಪಡಿ) ಮಸೂದೆ, 2023 ಅನ್ನು ಲೋಕಸಭೆಯಲ್ಲಿ ಮೇಘವಾಲ್ ಮಂಡಿಸಲು ಪಟ್ಟಿಮಾಡಿತು.

ನಾರಿಶಕ್ತಿ ವಂದನ್ ಅಧಿನಿಯಂ ಅನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಧಾನಿಯವರು ಎಲ್ಲಾ ಶಾಸಕರಲ್ಲಿ ಒಮ್ಮತವನ್ನು ಕೇಳಿದರು. ಮಹಿಳಾ ಮೀಸಲಾತಿ ಮಸೂದೆಗೆ ದೇವರು ಅವರನ್ನು ಆಯ್ಕೆ ಮಾಡಿದ್ದಾನೆ ಎಂದು ಮೋದಿ ಹೇಳಿದ್ದಾರೆ. ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅವರಿಗೆ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಹೆಚ್ಚಿನ ಮಹಿಳೆಯರು ಸಂಸತ್, ವಿಧಾನಸಭೆಗಳ ಸದಸ್ಯರಾಗುವುದನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಸೇರಬೇಕೆಂದು ನಾವು ಬಯಸುತ್ತೇವೆ. ದೇಶದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಪ್ರಕ್ರಿಯೆಯನ್ನು ಜಗತ್ತು ಗುರುತಿಸಿದೆ. ಇದು ಕ್ರೀಡೆಯಿಂದ ಸ್ಟಾರ್ಟ್‌ಅಪ್‌ಗಳವರೆಗೆ ಜೀವನದ ವಿವಿಧ ಆಯಾಮಗಳಲ್ಲಿ ಭಾರತೀಯ ಮಹಿಳೆಯರು ನೀಡಿದ ಕೊಡುಗೆಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಅರ್ಜುನ್ ರಾಮ್ ಮೇಘವಾಲ್ ವಿಧೇಯಕವನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರು ಮಸೂದೆಯ ಇತಿಹಾಸದ ಬಗ್ಗೆ ಪ್ರಶ್ನಿಸಿದ್ದು ಸಂಸತ್​​ನಲ್ಲಿ ಗದ್ದಲದ ನಡುವೆಯೇ ಮಹಿಳಾ ಮೀಸಲಾತಿ ಮಸೂದೆಯನ್ನು  ಮಂಡಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಚೌಧರಿ ಅವರ ಹೇಳಿಕೆಗಳನ್ನು ಖಂಡಿಸಿದ್ದು ಅವರ ವಾದಗಳಿಗೆ ಪುರಾವೆಗಳನ್ನು ಪ್ರಸ್ತುತಪಡಿಸಬೇಕು ಎಂದು ಹೇಳಿದರು.

ಮಸೂದೆ ಏನು ಹೇಳುತ್ತದೆ?

1) ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಮಹಿಳೆಯರಿಗೆ ಸೀಟುಗಳ ಮೀಸಲಾತಿಯನ್ನು ಮಸೂದೆಯು ಕಡ್ಡಾಯಗೊಳಿಸುತ್ತದೆ. ತಿದ್ದುಪಡಿಯ ಪ್ರಕಾರ, ಲೋಕಸಭೆಯಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿರುತ್ತದೆ. ಈ ಕ್ರಮವು ರಾಷ್ಟ್ರೀಯ ಶಾಸಕಾಂಗದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಪ್ರಯತ್ನವಾಗಿದೆ.

2) ಮಸೂದೆಯು ತನ್ನ ನಿಬಂಧನೆಗಳನ್ನು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಶಾಸಕಾಂಗ ಸಭೆಗೆ ವಿಸ್ತರಿಸುತ್ತದೆ. ದೆಹಲಿ ಅಸೆಂಬ್ಲಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾದ ಸ್ಥಾನಗಳಲ್ಲಿ ಮೂರನೇ ಒಂದು ಭಾಗವು ಮಹಿಳೆಯರಿಗೆ ಮೀಸಲಾಗಿದೆ ದೆಹಲಿ ಅಸೆಂಬ್ಲಿಯಲ್ಲಿ ನೇರ ಚುನಾವಣೆಯಿಂದ ತುಂಬಿದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು (ಪರಿಶಿಷ್ಟ ಜಾತಿಗಳಿಗೆ ಸೇರಿದ ಮಹಿಳೆಯರಿಗೆ ಮೀಸಲಾದವುಗಳು ಸೇರಿದಂತೆ) ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಮಸೂದೆ ಹೇಳುತ್ತದೆ.

3) ತಿದ್ದುಪಡಿಯು ಎಲ್ಲಾ ಭಾರತೀಯ ರಾಜ್ಯಗಳ ಶಾಸಕಾಂಗ ಸಭೆಗಳಿಗೆ ಅನ್ವಯಿಸುತ್ತದೆ. ಲೋಕಸಭೆ ಮತ್ತು ದೆಹಲಿ ಅಸೆಂಬ್ಲಿ ನಿಬಂಧನೆಗಳಂತೆಯೇ, ಅನ್ವಯವಾಗುವ ಷರತ್ತಿನ ಅಡಿಯಲ್ಲಿ ಮೀಸಲಾದ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲಿಡಬೇಕು, ಇದರಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಸೇರಿವೆ ಎಂದು ಅದು ಹೇಳಿದೆ.

4) ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸೀಟುಗಳ ಮೀಸಲಾತಿಗೆ ಸಂಬಂಧಿಸಿದ ನಿಬಂಧನೆಗಳು ಸೀಮಾ ನಿರ್ಣಯ ಕಾರ್ಯ (delimitation exercise)ನಡೆಸಿದ ನಂತರ ಜಾರಿಗೆ ಬರುತ್ತವೆ ಎಂದು ಮಸೂದೆಯು ನಿರ್ದಿಷ್ಟಪಡಿಸುತ್ತದೆ.

5) ಡಿಲಿಮಿಟೇಶನ್  ಪ್ರಕ್ರಿಯೆ ನಂತರ ಲೋಕಸಭೆ, ರಾಜ್ಯ ಅಸೆಂಬ್ಲಿಗಳು ಮತ್ತು ದೆಹಲಿ ಅಸೆಂಬ್ಲಿಯಲ್ಲಿ ಮಹಿಳೆಯರಿಗೆ ಮೀಸಲು ಸ್ಥಾನಗಳನ್ನು ಸರದಿಯಲ್ಲಿ ನೀಡುವುದಕ್ಕೂ  ಅವಕಾಶ ಕೊಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Tue, 19 September 23

ತಾಜಾ ಸುದ್ದಿ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್
ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಪುನಃ ಸೆಂಟ್ರಲ್ ಜೈಲ
ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಪುನಃ ಸೆಂಟ್ರಲ್ ಜೈಲ
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್
ಬೇರೆಯವರ ಮೇಲೆ ಗೂಬೆಕೂರಿಸುವುದು ದೇವೇಗೌಡ ಕುಟುಂಬದ ಅಭ್ಯಾಸ: ಡಿಕೆ ಸುರೇಶ್