ಜೈಪುರದಲ್ಲಿ ಕೋಲಾರದವರ ಹೈಪ್ರೊಫೈಲ್ ಪಾರ್ಟಿ ಪ್ರಕರಣ: ವಿಚಾರಣೆ ವೇಳೆ ಸಿಕ್ತು ನೇಪಾಳ ಲಿಂಕು!

| Updated By: ಆಯೇಷಾ ಬಾನು

Updated on: Aug 23, 2022 | 6:23 PM

ಕ್ಯಾಸಿನೊ, ಡ್ರಗ್ಸ್ ಮತ್ತು ಬಾರ್ ಡ್ಯಾನ್ಸ್ ಅನ್ನು ಇಷ್ಟಪಡುವ ಜನರಿಗಾಗಿ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಆಯೋಜಕರು ದೇಶದ ವಿವಿಧೆಡೆಯಿಂದ ಗ್ರಾಹಕರನ್ನು ಕರೆಸಿದ್ದರು. ಪಾರ್ಟಿಗೆ ಬರುವ ಪ್ರತಿಯೊಬ್ಬರಿಗೆ ಪ್ರವೇಶ ಶುಲ್ಕ 2 ಲಕ್ಷ ರೂ. ನಿಗದಿ ಆಗಿತ್ತು.

ಜೈಪುರದಲ್ಲಿ ಕೋಲಾರದವರ ಹೈಪ್ರೊಫೈಲ್ ಪಾರ್ಟಿ ಪ್ರಕರಣ: ವಿಚಾರಣೆ ವೇಳೆ ಸಿಕ್ತು ನೇಪಾಳ ಲಿಂಕು!
ಜೈಪುರದಲ್ಲಿ ಕೋಲಾರದವರ ಹೈಪ್ರೊಫೈಲ್ ಪಾರ್ಟಿ ಪ್ರಕರಣ: ವಿಚಾರಣೆ ವೇಳೆ ಸಿಕ್ತು ನೇಪಾಳ ಲಿಂಕು!
Follow us on

ರಾಜಸ್ಥಾನ: ರಾಜಸ್ಥಾನದ ಜೈಪುರದಲ್ಲಿ ಹೈಪ್ರೊಫೈಲ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿ ಕೋಲಾರದ 5 ಜನ ಸೇರಿ ಕರ್ನಾಟಕದ ಒಟ್ಟು ಏಳು ಜನ ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಿಕ್ಕಿ ಬಿದ್ದಿದ್ದರು. ಆರೋಪಿಗಳ ವಿಚಾರಣೆ ವೇಳೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಜೈಪುರದ ಹೈಪ್ರೊಫೈಲ್ ಪಾರ್ಟಿಗೆ ನೇಪಾಳದ ಲಿಂಕ್ ಇದೆ ಎಂಬ ಮಾಹಿತಿ ಸಿಕ್ಕಿದೆ.

ಕ್ಯಾಸಿನೊ, ಡ್ರಗ್ಸ್ ಮತ್ತು ಅಶ್ಲೀಲ ನೃತ್ಯವನ್ನು ಇಷ್ಟಪಡುವ ಜನರಿಗಾಗಿ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಆಯೋಜಕರು ದೇಶದ ವಿವಿಧೆಡೆಯಿಂದ ಗ್ರಾಹಕರನ್ನು ಕರೆಸಿದ್ದರು. ಪಾರ್ಟಿಗೆ ಬರುವ ಪ್ರತಿಯೊಬ್ಬರಿಗೆ ಪ್ರವೇಶ ಶುಲ್ಕ 2 ಲಕ್ಷ ರೂ. ನಿಗದಿ ಆಗಿತ್ತು. ದೆಹಲಿ ಮತ್ತು ನೇಪಾಳದಿಂದ 13 ಹುಡುಗಿಯರನ್ನು 2 ದಿನಕ್ಕೆ 5 ಲಕ್ಷದ ಪ್ಯಾಕೇಜ್‌ನಲ್ಲಿ ಕರೆಸಲಾಗಿತ್ತು. ಇಲೆಕ್ಟ್ರಾನಿಕ್ ಸಾಧನದ ಮೂಲಕ ಜೂಜಾಟ ನಡೆಸಿ ಗ್ರಾಹಕರನ್ನು ಸೋಲಿಸಲು ಹುಡುಗಿಯರು ಕೆಲಸ ಮಾಡುತ್ತಿದ್ದರು. ಪಾರ್ಟಿಯ ಪ್ಲಾನ್ 2 ತಿಂಗಳ ಹಿಂದೆಯೇ ಮಾಡಲಾಗಿತ್ತು. ಮೀರತ್ ನಿವಾಸಿ ಮನೀಶ್ ಶರ್ಮಾ ಪಾರ್ಟಿಯ ಮಾಸ್ಟರ್ ಮೈಂಡ್ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು 2 ತಿಂಗಳ ಹಿಂದೆಯೂ ಆರೋಪಿಗಳು ಜೈಪುರದ ಟೋಂಕ್ ರಸ್ತೆಯಲ್ಲಿ ಹೈ ಪ್ರೊಫೈಲ್ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.

ಕ್ಯಾಸಿನೊ, ಡ್ರಗ್ಸ್ ಮತ್ತು ಬಾರ್ ಡ್ಯಾನ್ಸ್ ಇಷ್ಟಪಡುವ ಜನರು ದೇಶದಿಂದ ಹೊರಗೆ ನೇಪಾಳಕ್ಕೆ ಹೋಗುತ್ತಾರೆ ಎಂದು ಡಿಸಿಪಿ (ಅಪರಾಧ) ಸುಲೇಶ್ ಚೌಧರಿ ಮಾಹಿತಿ ನೀಡಿದ್ದಾರೆ. ನೇಪಾಳದ ಕ್ಯಾಸಿನೋಗಳಲ್ಲಿ ಜೂಜಾಟದಲ್ಲಿ ಸಿಕ್ಕಿಬಿದ್ದ ಹೆಚ್ಚಿನ ಜನರು ಮೀರತ್ ನಿವಾಸಿ ಮನೀಶ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದರು. ನೇಪಾಳದ ಮೂಲಕ, ಆರೋಪಿಗಳು ವಿವಿಧ ರಾಜ್ಯಗಳಿಂದ ಮನೀಶ್ ಶರ್ಮಾ ಅವರ ಹೈ ಪ್ರೊಫೈಲ್ ಜೂಜುಕೋರರ ಸಂಪರ್ಕದಲ್ಲಿ ಭಾಗಿಯಾಗಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

ಅಪರಾಧ ವಿಭಾಗದ ಹೆಡ್ ಕಾನ್ ಸ್ಟೇಬಲ್ ಮಹಿಪಾಲ್ ಸಿಂಗ್ ಅವರ ಮಾಹಿತಿ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಸಿಐ ಖಲೀಲ್ ಅಹ್ಮದ್ ತಿಳಿಸಿದ್ದಾರೆ. ದೆಹಲಿ ನಿವಾಸಿ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್ ಅಲಿಯಾಸ್ ಬಬ್ಲು ಮತ್ತು ಅವರ ಮಗ ಮಾನ್ವೇಶ್ ಈಗಾಗಲೇ ಹೈ ಪ್ರೊಫೈಲ್ ಪಾರ್ಟಿಗಳನ್ನು ಆಯೋಜಿಸಿದ್ದಾರೆ. ತಂದೆ ಮತ್ತು ಮಗ ನೇಪಾಳದಲ್ಲಿ ಕುಳಿತಿದ್ದ ಮನೀಶ್ ಶರ್ಮಾ ಅವರನ್ನು ಸಂಪರ್ಕಿಸಿ ಜೈಪುರದಲ್ಲಿ ಪಾರ್ಟಿ ಏರ್ಪಡಿಸುವಂತೆ ಕೇಳಿಕೊಂಡರು. ಯೋಜನೆಯಂತೆ ಜೈಸಿಂಗಪುರ ಖೋರ್‌ನಲ್ಲಿರುವ ಸಾಯಿಪುರ ಬಾಗ್ ರೆಸಾರ್ಟ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಮೋತಿ ಡುಂಗ್ರಿ ನಿವಾಸಿ ಕಿಶನ್ ಅವರಿಗೆ ಊಟೋಪಚಾರದ ಜವಾಬ್ದಾರಿ ನೀಡಲಾಗಿತ್ತು. ಮನೀಶ್ ಅವರು ಹರ್ಯಾಣ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಜನರ ಕರೆಗಳು, ಮೇಲ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Published On - 5:20 pm, Tue, 23 August 22