ಉದಯಪುರ, ಜುಲೈ 15: ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಜುಲೈ 14ರಂದು ರಾಜಸ್ಥಾನದ (Rajasthan) ಉದಯಪುರದ ಹೋಟೆಲ್‌ನಲ್ಲಿ ನಡೆದಿದೆ. ಇವರನ್ನು ಕಾಡಲು ಹೋದ ಮತ್ತಿಬ್ಬರು ಕಾರ್ಮಿಕರು ಮೂರ್ಛೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಜ್ಜನ್‌ಗಢ ರಸ್ತೆಯಲ್ಲಿರುವ ಹೋಟೆಲ್‌ನಲ್ಲಿ ಇಬ್ಬರು ಕಾರ್ಮಿಕರು ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಂದ್ರ ಛಪರ್ವಾಲ್ (27) ಮತ್ತು ವಿಜಯ್ ಕಲ್ಯಾಣ (33) ಅವರು ಟ್ಯಾಂಕ್‌ನಲ್ಲಿದ್ದ ವಿಷಾನಿಲದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ, ಅವರನ್ನು ರಕ್ಷಿಸಲು ಟ್ಯಾಂಕ್ ಒಳಗೆ ರಾಮಕರನ್ ಮತ್ತು ವಿನೋದ್ ನಕ್ವಾಲ್ ಹಾರಿದ್ದಾರೆ, ಆದರೆ ಅವರು ಕೂಡ ಅಲ್ಲಿಯೇ ಮೂರ್ಛೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಕರನ್ ಮತ್ತು ನಕ್ವಾಲ್ ಅವರನ್ನು ಎಂಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ದೇಹಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Rajasthan Crime: ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ, ಬಾವಿಯಲ್ಲಿ ಶವ ಪತ್ತೆ
ಇನ್ನೂ ಅವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ವಾಲ್ಮೀಕಿ ಸಮುದಾಯದ ಜನರು ಮತ್ತು ನೈರ್ಮಲ್ಯ ಕಾರ್ಮಿಕರಿಗೆ ಸಂಬಂಧಿಸಿದ ಸಂಘಟನೆಗಳು ಒತ್ತಾಯಿಸಿದೆ. ಅಖಿಲ ಭಾರತ ಸಫಾಯಿ ಕರ್ಮಚಾರಿ ಕಾಂಗ್ರೆಸ್ ಮುಖಂಡ ಬಾಬುಲಾಲ್ ಮಾತನಾಡಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಹೋಟೆಲ್ ನಿರ್ವಾಹಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Sat, 15 July 23