AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು; ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊ ಟ್ವೀಟ್ ಮಾಡಿದ ಪ್ರಧಾನಿ ಮೋದಿ

ಫ್ರಾನ್ಸ್ ಭೇಟಿ ಸ್ಮರಣೀಯವಾಗಿದೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಅದು ಮತ್ತಷ್ಟು ವಿಶೇಷವಾಗಿದೆ. ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಹೆಮ್ಮೆಯೆನಿಸಿತು ಎಂದು ಮೋದಿ ಹೇಳಿದ್ದಾರೆ.

ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು; ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊ ಟ್ವೀಟ್ ಮಾಡಿದ ಪ್ರಧಾನಿ ಮೋದಿ
ಫ್ರಾನ್ಸ್​ನಲ್ಲಿ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Jul 15, 2023 | 2:30 PM

Share

ಪ್ಯಾರಿಸ್: ತಮ್ಮ ಫ್ರಾನ್ಸ್ ಭೇಟಿ ನೆನಪಿನಲ್ಲಿ ಉಳಿಯುವಂತದ್ದು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಬಾಸ್ಟಿಲ್ ಡೇ ಪರೇಡ್‌ನಲ್ಲಿ (Bastille Day parade) ಭಾರತೀಯ ತುಕಡಿಗೆ ಸ್ಥಾನ ಸಿಕ್ಕಿರುವುದು ಪ್ರಶಸಂನೀಯ ಎಂದು ಹೇಳಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron )ಅವರ ಆಹ್ವಾನದ ಮೇರೆಗೆ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಫ್ರಾನ್ಸ್‌ಗೆ ತೆರಳಿದ್ದರು. ಈ ಫ್ರಾನ್ಸ್ ಭೇಟಿ ಸ್ಮರಣೀಯವಾಗಿದೆ. ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿದ್ದರಿಂದ ಅದು ಮತ್ತಷ್ಟು ವಿಶೇಷವಾಗಿದೆ. ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಹೆಮ್ಮೆಯೆನಿಸಿತು. ಆತ್ಮೀಯ ಆತಿಥ್ಯಕ್ಕಾಗಿ ನಾನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಫ್ರೆಂಚ್ ಜನರಿಗೆ ಕೃತಜ್ಞನಾಗಿದ್ದೇನೆ. ಭಾರತ-ಫ್ರಾನ್ಸ್ ಸ್ನೇಹ ಮತ್ತಷ್ಟು ಗಾಢವಾಗವಿ ಎಂದು ಮೆರವಣಿಗೆಯ ಫೋಟೊಗಳನ್ನು ಮೋದಿ ಟ್ವೀಟ್ ಶುಕ್ರವಾರ ಮಾಡಿದ್ದಾರೆ.

ಇಂದು (ಶನಿವಾರ) ಬಾಸ್ಟಿಲ್ ಡೇ ಪರೇಡ್‌ನ ವಿಡಿಯೊವನ್ನೂ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಮೋದಿ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಈ ಪರೇಡ್ ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಫೈಟರ್ ಜೆಟ್‌ಗಳು ಸಹ ಫ್ರೆಂಚ್ ಜೆಟ್‌ಗಳೊಂದಿಗೆ ಫ್ಲೈಪಾಸ್ಟ್‌ಗೆ ಮಾಡಿತ್ತು. ಶುಕ್ರವಾರ ರಾತ್ರಿ, ಮ್ಯಾಕ್ರನ್ ಅವರು ಇಲ್ಲಿನ ಲೌವ್ರೆ ಮ್ಯೂಸಿಯಂನಲ್ಲಿ ಪ್ರಧಾನ ಮಂತ್ರಿಗಾಗಿ ಔತಣಕೂಟವನ್ನು ಏರ್ಪಡಿಸಿದರು. ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಮ್ಯೂಸಿಯಂನಲ್ಲಿ ಮೋದಿ ಅವರನ್ನು ಬರಮಾಡಿಕೊಂಡರು.

ಮೋದಿ ಮತ್ತು ಮ್ಯಾಕ್ರನ್ ಅವರು ಸಿಇಒಗಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲಿ ಪ್ರಧಾನಿ ಭಾರತದಲ್ಲಿ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳನ್ನು ಎತ್ತಿ ತೋರಿಸಿದರು ಮತ್ತು ದೇಶವು ನೀಡುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಫ್ರೆಂಚ್ ಉದ್ಯಮಿಗಳನ್ನು ಒತ್ತಾಯಿಸಿದರು.

ಇದನ್ನೂ ಓದಿ: ಫ್ರಾನ್ಸ್​​ನಲ್ಲಿ ಮೋದಿಗೆ ವಿಶೇಷ ಗೌರವ: ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ, ತ್ರಿವರ್ಣ ಧ್ವಜಕ್ಕೂ ಆದ್ಯತೆ

ಈ ವೇದಿಕೆಯಲ್ಲಿ ವಾಯುಯಾನ, ಉತ್ಪಾದನೆ, ರಕ್ಷಣೆ, ತಂತ್ರಜ್ಞಾನ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಫ್ರೆಂಚ್ ಕಡೆಯಿಂದ 16 ಮತ್ತು ಭಾರತದ ಕಡೆಯಿಂದ 24 ಸಿಇಒಗಳು ಇದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ