ಭಾರತದಲ್ಲಿ ಆಶ್ರಯ ಪಡೆಯಲು ರಾಮೇಶ್ವರಂ ತಲುಪಿದ 8 ಶ್ರೀಲಂಕಾ ತಮಿಳರು; ಹೀಗೆ ಆಶ್ರಯ ಪಡೆದವರ ಸಂಖ್ಯೆ 265
ಬಡತನದ ಕಾರಣದಿಂದ ತಮಿಳುನಾಡಿಗೆ ಬಂದಿರುವುದಾಗಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ದ್ವೀಪದಲ್ಲಿ ವಾಸಿಸಲು ದಾರಿಯಿಲ್ಲ ಎಂದು ಶ್ರೀಲಂಕಾದ ತಮಿಳರು ಪೊಲೀಸರಿಗೆ ತಿಳಿಸಿದ್ದಾರೆ.
ರಾಮಂತಪುರಂ ಜುಲೈ 15: ಜಾಫ್ನಾ ಮೂಲದ ಐದು ಮಕ್ಕಳು ಸೇರಿದಂತೆ ಎಂಟು ಶ್ರೀಲಂಕಾ ತಮಿಳರ (Sri Lankan Tamils)ಎರಡು ಕುಟುಂಬಗಳು ಶನಿವಾರ ಭಾರತದಲ್ಲಿ ಆಶ್ರಯ ಪಡೆಯಲು ತಮಿಳುನಾಡಿನ (Tamil Nadu) ರಾಮನಾಥಪುರಂ ಜಿಲ್ಲೆಯ ಧನುಷ್ಕೋಡಿಗೆ(Dhanushkodi) ಆಗಮಿಸಿವೆ. ಇದರೊಂದಿಗೆ ಮಾರ್ಚ್ 2022 ರಿಂದ ಭಾರತಕ್ಕೆ ಆಗಮಿಸಿದ ಒಟ್ಟು ಶ್ರೀಲಂಕಾ ತಮಿಳರ ಸಂಖ್ಯೆ 265 ಕ್ಕೆ ತಲುಪಿದೆ. ಶನಿವಾರ ಬೆಳಗ್ಗೆ ರಾಮೇಶ್ವರಂ ಪಕ್ಕದ ಧನುಷ್ಕೋಡಿ ಕರಾವಳಿ ಪ್ರದೇಶಕ್ಕೆ ಶ್ರೀಲಂಕಾ ನಿರಾಶ್ರಿತರು ಆಗಮಿಸಿರುವ ಬಗ್ಗೆ ಅರುಚಲ್ ಮುನೈ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಾಮೇಶ್ವರಂ ಕೋಸ್ಟಲ್ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅರುಚಲ್ ಮುನೈ ಪಾಯಿಂಟ್ ಪ್ರದೇಶದಲ್ಲಿದ್ದ 8 ಜನರನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ನಿರಾಶ್ರಿತರು ಎರಡು ಕುಟುಂಬಗಳಿದ್ದು, ತಮ್ಮನ್ನು ಮರಿಯಾ (35) ಮತ್ತು ಅವರ ಮಕ್ಕಳಾದ ಅಭಿಲಾಷ್ (16), ಅಭಿನಾಷ್ (14) ಮತ್ತು ಸೋತಾನೈ (8) ಗಣೇಶಮೂರ್ತಿ (50) ಅವರ ಪತ್ನಿ ದರ್ಶಿಕಾ (34) ಮಕ್ಕಳಾದ ಆಸ್ನಾಥ್ ( 15) ಮತ್ತು ಯೋಗೇಶ್ (11) ಎಂದು ಗುರುತಿಸಲಾಗಿದೆ.
ಬಡತನದ ಕಾರಣದಿಂದ ತಮಿಳುನಾಡಿಗೆ ಬಂದಿರುವುದಾಗಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ದ್ವೀಪದಲ್ಲಿ ವಾಸಿಸಲು ಬೇರೆ ದಾರಿಯಿಲ್ಲ ಎಂದು ಶ್ರೀಲಂಕಾದ ತಮಿಳರು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: PM Modi UAE Visit: ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಕ್ರೌನ್ ಪ್ರಿನ್ಸ್
ಶ್ರೀಲಂಕಾದ ಜಾಫ್ನಾ ಕರಾವಳಿಯಿಂದ ಫೈಬರ್ ಬೋಟ್ ರಾಮೇಶ್ವರಂ ತಲುಪುವ ವೇಳೆ ಬೋಟ್ ಮ್ಯಾನ್ ಗೆ ಎರಡು ಲಕ್ಷ ರೂ ನೀಡಿ ಅವರು ನಿನ್ನೆ ಸಂಜೆ ಜಾಫ್ನಾ ಕರಾವಳಿಯಿಂದ ಹೊರಟರು. ಇಂದು ಬೆಳಿಗ್ಗೆ ಬೋಟ್‌ಮನ್ ಅವರನ್ನು ಧನುಷ್ಕೋಡಿ ಕರಾವಳಿಯಲ್ಲಿ ಇಳಿಸಿದ್ದಾರೆ ಎಂದು ನ್ಯೂಸ್ 9 ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sat, 15 July 23