Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯೇ ವಿಜಯ್ ಅನ್ನು ಕಣಕ್ಕಿಳಿಸಿದೆಯೇ? ತಮಿಳುನಾಡು ರಾಜಕೀಯದಲ್ಲಿ ಹೀಗೊಂದು ಚರ್ಚೆ

Vijay: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವಿಜಯ್ ರಾಜಕೀಯಕ್ಕೆ ಬರಲು ರೆಡಿಯಾಗಿದ್ದು, ವಿಜಯ್​ರ ರಾಜಕೀಯ ಪ್ರವೇಶದ ಹಿಂದೆ ಬಿಜೆಪಿ ಇದೆ ಎಂಬ ಚರ್ಚೆ ನಡೆಯುತ್ತಿದೆ.

ಬಿಜೆಪಿಯೇ ವಿಜಯ್ ಅನ್ನು ಕಣಕ್ಕಿಳಿಸಿದೆಯೇ? ತಮಿಳುನಾಡು ರಾಜಕೀಯದಲ್ಲಿ ಹೀಗೊಂದು ಚರ್ಚೆ
ವಿಜಯ್
Follow us
ಮಂಜುನಾಥ ಸಿ.
|

Updated on: Jul 14, 2023 | 10:58 PM

ತಮಿಳಿನ ಸ್ಟಾರ್ ನಟ ವಿಜಯ್ (Vijay) ರಾಜಕೀಯ ಪ್ರವೇಶಿಸುವುದು ಬಹುತೇಕ ಖಾತ್ರಿಯಾಗಿದ್ದು, ತಮಿಳುನಾಡು (Tamil Nadu) ರಾಜಕೀಯದಲ್ಲಿ (Politics) ಈ ಸುದ್ದಿ ಸಂಚಲನ ಮೂಡಿಸಿದೆ. ವಿಜಯ್​ರಿಗೆ ತಮಿಳುನಾಡಿನಲ್ಲಿರುವ ಭಾರಿ ಜನಪ್ರೀತಿಯ ಬಗ್ಗೆ ಅರಿವಿರುವ ರಾಜಕೀಯ ಪಕ್ಷಗಳು ಈಗಲೇ ತಮ್ಮ ಲೆಕ್ಕಾಚಾರಗಳನ್ನು ಶುರುವಿಟ್ಟುಕೊಂಡಿದ್ದಾರೆ. ಸುದ್ದಿವಾಹಿನಿಗಳಲ್ಲಿ ಪ್ರತಿದಿನವೂ ಇದೇ ಚರ್ಚೆ ಜಾರಿಯಲ್ಲಿದೆ. ಈ ನಡುವೆ ವಿಜಯ್​ರ ರಾಜಕೀಯ ಪ್ರವೇಶದ ಬಗ್ಗೆ ಕೆಲವು ಸುದ್ದಿಗಳೂ ಸಹ ಹರಿದಾಡುತ್ತಿದ್ದು, ವಿಜಯ್​ರನ್ನು ಕಣಕ್ಕೆ ಇಳಿಸಿರುವುದು ಬಿಜೆಪಿ ಎಂಬ ಮಾತುಗಳೂ ಸಹ ಅಲ್ಲಲ್ಲಿ ಕೇಳಿ ಬರುತ್ತಿವೆ.

ವಿಜಯ್ ಇನ್ನು ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯಿದ್ದು ಅದನ್ನು ಗಮನದಲ್ಲಿಟ್ಟುಕೊಂಡೇ ವಿಜಯ್ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಎನ್ನಲಾಗುತ್ತಿದೆ. ವಿಜಯ್​ರ ರಾಜಕೀಯ ಪ್ರವೇಶದ ಬಗ್ಗೆ ವಿಶ್ಲೇಷಿಸಿರುವ ತಮಿಳುನಾಡಿನ ಹಿರಿಯ ಪತ್ರಕರ್ತ ಪ್ರಕಾಶ್ ದಾಮೋದರನ್, ”ವಿಜಯ್​ ಕಣ್ಣಿರುವುದು 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಆದರೆ ವಿಜಯ್ 2024ರ ಲೋಕಸಭೆ ಚುನಾವಣೆಯನ್ನು ಪರೀಕ್ಷಾ ಕಣವಾಗಿ ಅಷ್ಟೆ ಬಳಸಿಕೊಳ್ಳಲಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ:Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್​ ದೇವರಕೊಂಡ

”2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ತಮ್ಮ ಶಕ್ತಿ, ಜನಬೆಂಬಲವನ್ನು ಪರೀಕ್ಷಿಸಿ, ಅದರ ಫಲಿತಾಂಶದ ಆಧಾರದ ಮೇಲೆ 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ವಿಜಯ್ ತಯಾರಾಗಲಿದ್ದಾರೆ” ಎಂದಿರುವ ಪ್ರಕಾಶ್ ದಾಮೋದರನ್, ”ವಿಜಯ್​ರನ್ನು ಚುನಾವಣಾ ಕಣಕ್ಕೆ ಇಳಿಸುತ್ತಿರುವುದೇ ಬಿಜೆಪಿ. ಈ ಹಿಂದೆ ರಜನೀಕಾಂತ್ ಅನ್ನು ಕಣಕ್ಕೆ ಇಳಿಸಿ ಡಿಎಂಕೆಯ ಶಕ್ತಿಯ ತಗ್ಗಿಸುವ ಪ್ರಯತ್ನ ಮಾಡಿದರು. ಆದರೆ ಅನಾರೋಗ್ಯ ಹಾಗೂ ಕೋವಿಡ್ ಕಾರಣದಿಂದ ರಜನೀಕಾಂತ್ ಹಿಂದೆ ಸರಿದರು. ಈಗ ವಿಜಯ್ ಮೂಲಕ ಡಿಎಂಕೆಯನ್ನು ಮಣಿಸಲು ಮುಂದಾಗಿದ್ದಾರೆ” ಎಂದಿದ್ದಾರೆ.

”ಬಿಜೆಪಿಯು ತಮಿಳುನಾಡಿನಲ್ಲಿ ಡಿಎಂಕೆಯ ಶಕ್ತಿಯನ್ನು ತಗ್ಗಿಸಲು ನೋಡುತ್ತಿದೆ. ಡಿಎಂಕೆಯನ್ನು ಆಡಳಿತದಿಂದ ಪಕ್ಕಕ್ಕೆ ಸರಿಸುವುದು ಅಥವಾ ಡಿಎಂಕೆಯ ಶಕ್ತಿಯನ್ನು ತಗ್ಗಿಸುವುದು ಬಿಜೆಪಿಯ ಉದ್ದೇಶ. ಒಂದೊಮ್ಮೆ ವಿಜಯ್ ರಾಜಕೀಯಕ್ಕೆ ಬಂದರೆ ಡಿಎಂಕೆಯ ಮತಗಳು ವಿಭಜನೆಯಾಗುತ್ತವೆ, ಅದರಲ್ಲಿಯೂ ಡಿಎಂಕೆಯ ಯುವಮತದಾರರು ವಿಜಯ್ ಕಡೆಗೆ ವಾಲುತ್ತಾರೆ. ಮೋದಿ ವಿರೋಧಿಗಳ ಮತಗಳು ಸಹ ವಿಭಜನೆಯಾಗುತ್ತವೆ. ಆ ಮೂಲಕ ಬಿಜೆಪಿಗೆ ಉತ್ತಮ ಅವಕಾಶ ಲಭ್ಯವಾಗುತ್ತದೆ. ಇದೇ ಕಾರಣಕ್ಕೆ ವಿಜಯ್ ಅನ್ನು ದಾಳವಾಗಿ ಬಿಜೆಪಿ ಬಳಸಿಕೊಳ್ಳುತ್ತಿದೆ” ಎಂದಿದ್ದಾರೆ.

ಮತ್ತೊಂದು ವಾದದ ಪ್ರಕಾರ, ವಿಜಯ್ ರಾಜಕೀಯಕ್ಕೆ ಪ್ರವೇಶಿಸುವುದಕ್ಕೆ ಬಿಜೆಪಿಯೇ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ವಿಜಯ್​ರ ಮರ್ಸೆಲ್​ ಸಿನಿಮಾ ಬಿಡುಗಡೆ ಆದಾಗ ಸಿನಿಮಾದಲ್ಲಿ ವಿಜಯ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಆಗ ಅವರ ಮೇಲೆ ವಿಪರೀತವಾಗಿ ಟ್ರೋಲ್ ದಾಳಿ ನಡೆದಿತ್ತು ಮಾತ್ರವಲ್ಲದೆ ಅವರ ಮನೆಯ ಮೇಲೆ ಐಟಿ ದಾಳಿಯೂ ನಡೆಯಿತು. ಆಗ ಅನುಭವಿಸಿದ ಹಿನ್ನೆಡೆಯಿಂದಲೇ ವಿಜಯ್ ಸಿಡಿದು ಈಗ ರಾಜಕೀಯ ಪ್ರವೇಶಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!