‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಗ್ಗೆ ನಿರ್ಮಾಪಕ ಬಿಸಿ ಪಾಟೀಲ್ ಮಾತು
BC Patil: ಮಾಜಿ ಸಚಿವ ಬಿಸಿ ಪಾಟೀಲ್, 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ತಮ್ಮ ನಿರ್ಮಾಣದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಬಿಸಿ ಪಾಟೀಲ್ (BC Patil), ಮಾಜಿ ಸಚಿವ ಆಗುತ್ತಿದ್ದಂತೆ ಮತ್ತೆ ಸಿನಿಮಾ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದಂತಿದೆ. ಸಚಿವರಾಗಿದ್ದಗಲೇ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಬಿಸಿ ಪಾಟೀಲ್, ಗರಡಿ ಹೆಸರಿನ ಸಿನಿಮಾಕ್ಕೆ ಬಂಡವಾಳ ಹೂಡಿ, ನಟನೆಯನ್ನೂ ಮಾಡಿದ್ದರು, ಅದರ ಜೊತೆಗೆ ‘ಕೌಸಲ್ಯ ಸುಪ್ರಜಾ ರಾಮ‘ (Kausalya Supraja Rama) ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಶಶಾಂಕ್ ನಿರ್ದೇಶಿಸಿ, ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್, ಮಿಲನಾ ನಾಗರಾಜ್ ನಟಿಸಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಬಿಸಿ ಪಾಟೀಲ್ ಮಾತನಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

