ವಿಶ್ವದ ದೊಡ್ಡಣ್ಣ ಅಮೆರಿಕದ ಆದಾಯ ಹೆಚ್ಚಳಕ್ಕೂ ಪಾಪ್ ಸಿಂಗರ್ ಟೇಲರ್ ಸ್ವಿಫ್ಟ್ಗೂ ಎಲ್ಲಿಯ ಸಂಬಂಧ? ಇಲ್ಲಿದೆ ಅಪರೂಪದ ಕಥೆ!
Taylor Swift Eras Tour: ಅಮೆರಿಕದ 17 ರಾಜ್ಯಗಳು ಮತ್ತು 5 ಖಂಡಗಳಲ್ಲಿ ವ್ಯಾಪಿಸಿರುವ 131 ಸಂಗೀತ ಕಚೇರಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಿದ ಗಾಯಕಿ ಟೇಲರ್ ಸ್ವಿಫ್ಟ್ ಎರಾಸ್ ಟೂರ್ - US ನಲ್ಲಿ ಈ ಗಾಯಕಿಯ ಸಂಗೀತ ಸಂಜೆಗಳು ಗಮನಾರ್ಹ ಆರ್ಥಿಕ ಪ್ರಭಾವ ಬೀರುದ್ದು, ಫೆಡರಲ್ ರಿಸರ್ವ್ ವರದಿಯಲ್ಲಿ ಉಲ್ಲೇಖವಾಗಿದೆ.
ದೆಹಲಿ: ಬುಧವಾರ ಪ್ರಕಟವಾದ ಯುಎಸ್ ಫೆಡರಲ್ ರಿಸರ್ವ್ (US Federal Reserve) ವರದಿಯು ಅನಿರೀಕ್ಷಿತ ಅಧ್ಯಾಯವೊಂದನ್ನು ಒಳಗೊಂಡಿತ್ತು – ಗ್ರ್ಯಾಮಿ ಪ್ರಶಸ್ತಿ ವಿಜೇತ ಪಾಪ್ ತಾರೆ ಟೇಲರ್ ಸ್ವಿಫ್ಟ್! ಅಮೆರಿಕದ 17 ರಾಜ್ಯಗಳು ಮತ್ತು 5 ಖಂಡಗಳಲ್ಲಿ ವ್ಯಾಪಿಸಿರುವ 131 ಸಂಗೀತ ಕಚೇರಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಿದ ಗಾಯಕಿ ಟೇಲರ್ ಸ್ವಿಫ್ಟ್ ಎರಾಸ್ ಟೂರ್ (Taylor Swift Eras Tour) – US ನಲ್ಲಿ ಈ ಗಾಯಕಿಯ ಸಂಗೀತ ಸಂಜೆಗಳು ಗಮನಾರ್ಹ ಆರ್ಥಿಕ ಪ್ರಭಾವ ಬೀರುದ್ದು, ಫೆಡರಲ್ ರಿಸರ್ವ್ ವರದಿಯಲ್ಲಿ ಉಲ್ಲೇಖವಾಗಿದೆ.
US ಫೆಡರಲ್ ರಿಸರ್ವ್ ಇತ್ತೀಚೆಗೆ ತನ್ನ ಬೀಗ್ ಬುಕ್ (Beige Book) ಅಥವಾ ಪ್ರಸ್ತುತ ಆರ್ಥಿಕ ಪರಿಸ್ಥಿತಿಗಳ ವ್ಯಾಖ್ಯಾನದ ಸಾರಾಂಶವನ್ನು ಪ್ರಕಟಿಸಿತು, ಇದನ್ನು ವರ್ಷಕ್ಕೆ ಎಂಟು ಬಾರಿ ಪ್ರಕಟಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ರೋಗದ ಆರಂಭದಿಂದಲೂ ಫಿಲಡೆಲ್ಫಿಯಾದಲ್ಲಿ ಹೋಟೆಲ್ ಬುಕಿಂಗ್ ಅತ್ಯಧಿಕ ಮಟ್ಟಕ್ಕೆ ಏರಿದೆ ಎಂಬ ಆಶಾದಾಯಕ ವರದಿಯಲ್ಲಿ ಹೇಳಿದೆ. ನಗರದಲ್ಲಿ ಸ್ವಿಫ್ಟ್ ಅವರ ಸಂಗೀತ ಕಾರ್ಯಕ್ರಮಗಳು ಈ ಬೆಳವಣಿಗೆಗೆ ಕಾರಣವೆಂದು ವರದಿ ಹೇಳಿದೆ.
ಒಟ್ಟಾರೆಯಾಗಿ ವಿಶ್ವದ ಈ ಭಾಗದಲ್ಲಿ ಪ್ರವಾಸೋದ್ಯಮದ ನಿಧಾನಗತಿಯ ಚೇತರಿಕೆ ಕಂಡಿದೆ. ಇದರ ಹೊರತಾಗಿಯೂ, ಸಾಂಕ್ರಾಮಿಕ ರೋಗ ಪ್ರಾರಂಭ ಆದಾಗಿನಿಂದಲೂ ಫಿಲಡೆಲ್ಫಿಯಾದಲ್ಲಿ ಹೋಟೆಲ್ ಆದಾಯಕ್ಕೆ ಮೇ ಧನಾತ್ಮಕ ತಿಂಗಳು ಎಂದು ವರದಿ ಹೈಲೈಟ್ ಮಾಡಿದೆ. ಹೆಚ್ಚಿನ ಭಾಗದಲ್ಲಿ ನಗರದಲ್ಲಿ ಟೇಲರ್ ಸ್ವಿಫ್ಟ್ ಸಂಗೀತ ಕಚೇರಿಗಳಿಗೆ ಅತಿಥಿಗಳ ಒಳಹರಿವು ಹೆಚ್ಚಳ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಪ್ ತಾರೆ ಸ್ವಿಫ್ಟ್ ಈ ವರ್ಷ ಮೇ 12, 13 ಮತ್ತು 14 ರಂದು ಫಿಲಡೆಲ್ಫಿಯಾದಲ್ಲಿ 67,000 ಆಸನಗಳ ಫುಟ್‌ಬಾಲ್ ಸ್ಟೇಡಿಯಂ, ಖ್ಯಾತ ಲಿಂಕ್ ಫೈನಾನ್ಶಿಯಲ್ ಫೀಲ್ಡ್‌ನಲ್ಲಿ ಮೂರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ಮತ್ತೆ, ಜೂನ್ ಮಧ್ಯ ಭಾಗದಲ್ಲಿ ಪೆನ್ಸಿಲ್ವೇನಿಯಾ ರಾಜ್ಯಕ್ಕೂ ಭೇಟಿ ಕೊಟ್ಟಿದ್ದರು.
ಹಾಗಾಗಿ ಸ್ಥಳೀಯ ಆರ್ಥಿಕತೆಗಾಗಿ ಪ್ರಮುಖ ಆರ್ಥಿಕ ಉತ್ತೇಜನ ದೊರಕಲು ಗಾಯಕಿ ಸ್ವಿಫ್ಟ್ ಕಾರಣವೆಂದು US ಸರ್ಕಾರದ ಸಂಸ್ಥೆಯೊಂದು ಉಲ್ಲೇಖಿಸಿರುವುದು ಇದೇನೂ ಮೊದಲಲ್ಲ. ಕಳೆದ ತಿಂಗಳು, ಚಿಕಾಗೋದ ಅಧಿಕೃತ ಪ್ರವಾಸೋದ್ಯಮ ಮತ್ತು ಮಾರುಕಟ್ಟೆ ಸಂಸ್ಥೆಯಾದ ಚೂಸ್ ಚಿಕಾಗೋ, ಜೂನ್ ಮೊದಲ ವಾರಾಂತ್ಯವು ಹೋಟೆಲ್ಗೆ ಬಂದ ಪ್ರವಾಸಿಗರ ಸಂಖ್ಯೆ ಎಲ್ಲ ದಾಖಲೆಗಳನ್ನು ಮುರಿದಿವೆ ಎಂದು ಘೋಷಿಸಿದೆ. ಇದಕ್ಕೆ ಒಂದಷ್ಟು ಧನ್ಯವಾದಗಳು ಗಾಯಕಿ ಸ್ವಿಫ್ಟ್‌ಳ ಪ್ರದರ್ಶನಗಳು ಕಾರಣೀಭೂತವಾಗಿವೆ.
This just in! ?
Chicago set its new all-time record for total hotel rooms occupied!
Thanks to three nights of Taylor Swift, the ASCO Annual Meeting, the James Beard Awards and more.
This isn’t just post-pandemic–we had more rooms filled than ever in Chicago’s history! pic.twitter.com/OqEGB3ZB2C
— Choose Chicago (@ChooseChicago) June 7, 2023
ಟೇಲರ್ ಸ್ವಿಫ್ಟ್, ಬೆಯೋನ್ಸ್ (Beyonce) ಮತ್ತು ಇತರ ಪ್ರಮುಖ ತಾರೆಗಳ ಸಂಗೀತಾ ಪ್ರವಾಸಗಳ ಅಲೆಯು ಸಾಂಕ್ರಾಮಿಕ-ಸಂಬಂಧಿತ ನಷ್ಟಗಳನ್ನು ಸರಿದೂಗಿಸಿ, ಲೈವ್ ಮನರಂಜನಾ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿದೆ.
ನಾನೇ ಆಗಲಿ ಒಂದೇ ಸಮಯದಲ್ಲಿ, ಒಂದೇ ಜಾಗದಲ್ಲಿ ಹೀಗೆ ಅನೇಕ ಕಲಾವಿದರನ್ನು ನೋಡಿರಲಿಲ್ಲ ಎಂದು ಸಂಗೀತದ ವ್ಯವಹಾರವನ್ನು ಅಧ್ಯಯನ ಮಾಡುವ ಅಮೇರಿಕನ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸ್ಟೇಸಿ ಮೆರಿಡಾ ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ವಿದ್ಯಮಾನಗಳಿಂದಾಗಿ ಮೇ ತಿಂಗಳಲ್ಲಿ ಸ್ವೀಡಿಷ್ ಹಣದುಬ್ಬರವು 9.7% ಕ್ಕೆ ಇಳಿದಿದೆ. ಸ್ಟಾಕ್‌ಹೋಮ್‌ನಲ್ಲಿ ಬೆಯೋನ್ಸ್ ನಡೆಸಿಕೊಟ್ಟ ಎರಡು ಸಂಗೀತ ಕಚೇರಿಗಳು ಪರಿಸ್ಥಿತಿಯನ್ನು ಮಾರ್ಪಾಡುಗೊಳಿಸಿತು ಎಂದು ಕೆಲವು ವಿಶ್ಲೇಷಕರು ಅಂದಾಜಿಸಿದ್ದಾರೆ.
33 ವರ್ಷದ ಸ್ವಿಫ್ಟ್ ಈಗ ಬಿಲಿಯನ್ ಡಾಲರ್ ಗಡಿ ಬಳಿ ಬಂದುನಿಂತಿದ್ದಾರೆ. ಅವರ “ಎರಾಸ್” ಪ್ರವಾಸದಲ್ಲಿ (Eras tour) ಪ್ರಸ್ತುತ ಇನ್ನೂ 106 ದಿನಾಂಕಗಳು ಬಾಕಿಯಿವೆ ಎಂದು AFP ಹೇಳಿದೆ. ಇವೆಲ್ಲಾ ಸಾಧ್ಯವಾದರೆ 2018 ರಲ್ಲಿ ಪ್ರಾರಂಭವಾದ ಎಲ್ಟನ್ ಜಾನ್ ಸಾಧನೆಯ “ಫೇರ್‌ವೆಲ್ ಯೆಲ್ಲೋ ಬ್ರಿಕ್ ರೋಡ್” ಪ್ರವಾಸಕ್ಕಿಂತ ($ 910 ಮಿಲಿಯನ್) ಹೆಚ್ಚು ಆದಾಯ ಗಳಿಸಿದಂತಾಗುತ್ತದೆ.