ಮಾಜಿ ಪ್ರಧಾನಿ ರಾಜೀವ್ ಗಾಂಧಿ(Rajiv Gandhi) ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಮೂವರು ಭಾರತ ತೊರೆದಿದ್ದಾರೆ. ಮುರುಗನ್, ರಾಬರ್ಟ್ ಪಯಸ್ ಹಾಗೂ ಜಯಕುಮಾರ್ ಅವರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಶಿಫಾರಸು ಮಾಡಿತ್ತು. ಇ ಸುಪ್ರೀಂಕೋರ್ಟ್ 2022ರಲ್ಲಿ ಒಟ್ಟು ಆರು ಮಂದಿಯನ್ನು ಬಿಡುಗಡೆ ಮಾಡಿತ್ತು ಅವರಲ್ಲಿ ಈ ಮೂವರು ಕೂಡ ಸೇರಿದ್ದಾರೆ. ದೀಗ ಈ ಮೂವರು ಕೊಲಂಬೋಗೆ ತೆರಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಬಂಧಿಸಲಾಗಿದ್ದ ತಿರುಚಿರಾಪಳ್ಳಿಯ ವಿಶೇಷ ಶಿಬಿರದಿಂದ ಇಂದು ಮುಂಜಾನೆ ಪೊಲೀಸ್ ಅಧಿಕಾರಿಗಳ ತಂಡ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಲ್ಲಾ ಮೂವರು ಪುರುಷರನ್ನು ಕರೆದೊಯ್ಯಲಾಯಿತು. ಈ ಮೂವರು ಶ್ರೀಲಂಕಾ ಪ್ರಜೆಗಳು ಎಂದು ಹೇಳಲಾಗಿದ್ದು, ಪಾಸ್ಟ್ಪೋರ್ಟ್ ದೊರೆತಿದೆ.
ಆರು ಮಂದಿಯಲ್ಲಿ ಒಬ್ಬರು ಮುರುಗನ್ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ 2022 ರಲ್ಲಿ ಬಿಡುಗಡೆಯಾದ ಆರು ಮಂದಿಯಲ್ಲಿ ಒಬ್ಬರಾಗಿದ್ದು ಭಾರತೀಯ ಪ್ರಜೆಯಾದ ನಳಿನಿ ಅವರನ್ನು ವಿವಾಹವಾಗಿದ್ದರು. ನಳಿನಿ ತನ್ನ ಪತಿಯೊಂದಿಗೆ ವಿಮಾನ ನಿಲ್ದಾಣಕ್ಕೆ ಹೋಗಿದ್ದಾಳೆ, ಟರ್ಮಿನಲ್‌ಗೆ ಕರೆದೊಯ್ಯುವ ಮೊದಲು ಅವಳು ಗಂಡನೊಂದಿಗೆ ಕೆಲ ಸಮಯ ಕಳೆದಿರುವ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ಓದಿ: Rajiv Gandhi Assassination Case: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು
ಮೂರು ದಶಕಗಳ ಹಿಂದೆ ಸೋನಿಯಾ ಅವರ ಮಧ್ಯಸ್ಥಿಕೆಯಲ್ಲಿ ನಳಿನಿ ಜೀವ ಉಳಿದಿತ್ತು, ಕೆಲವು ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು, ಆಗ ನಳಿನಿ ಗರ್ಭಿಣಿಯಾಗಿದ್ದಳು, ಈಗ ಯುಕೆಯಲ್ಲಿ ಮಗಳು ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ. ನಳಿನಿ ತನ್ನ ಮಗಳೊಂದಿಗೆ ಪುನರ್ಮಿಲನಕ್ಕಾಗಿ ವೀಸಾವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾಳೆ ಎಂಬುದು ತಿಳಿದುಬಂದಿದೆ. ಮುರುಗನ್ ಕೂಡ ಕೊಲಂಬೊದಿಂದ ಅದನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಆರು ಮಂದಿಯಲ್ಲಿ ಇನ್ನೊಬ್ಬರು – ಸಂತನ್ – ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಯಕೃತ್ತಿನ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರೂ ಶ್ರೀಲಂಕಾ ಪ್ರಜೆಯಾಗಿದ್ದರು.
ಬಿಡುಗಡೆಯಾದ ಅಪರಾಧಿಗಳಲ್ಲಿ ಮೊದಲನೆಯವರು ಭಾರತೀಯ ಪ್ರಜೆಯಾದ ಪೆರಾರಿವಾಲನ್. ಅವರನ್ನು ಮೇ 2022 ರಲ್ಲಿ ಬಿಡುಗಡೆ ಮಾಡಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ