ಮಾಜಿ ನಾಯಕ ಅಮರ್ ಸಿಂಗ್ ವಿಧಿವಶ, ಅವರ ಕುರಿತಾದ ಒಂದು ವರದಿ ಇಲ್ಲಿದೆ..

|

Updated on: Aug 02, 2020 | 8:27 AM

ದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿನ್ನೆ ವಿಧಿವಶರಾಗಿದ್ದಾರೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌, ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾದರೆ ಹೇಗಿತ್ತು ಅಮರ್ ಸಿಂಗ್ ಸ್ನೇಹ ಹಾಗೂ ರಾಜಕೀಯ ಜೀವನ? ಈ ಕುರತಾದ ಒಂದು ವರದಿ ಇಲ್ಲಿದೆ. ರಾಷ್ಟ್ರ ರಾಜಕಾರಣದಲ್ಲಿ ಅಮರ್ ಸಿಂಗ್ ಚಿರಪರಿಚಿತ ಹೆಸರು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಹಾಗೂ ಹೆಚ್​ಡಿಡಿ ನಡುವೆ ಸಂವಹನದ ಕೊಂಡಿಯಾಗಿದ್ದ ಅಮರ್ ಸಿಂಗ್, ಕ್ಯಾತಿ ಪಡೆದಷ್ಟೇ ಬೇಗ […]

ಮಾಜಿ ನಾಯಕ ಅಮರ್ ಸಿಂಗ್ ವಿಧಿವಶ, ಅವರ ಕುರಿತಾದ ಒಂದು ವರದಿ ಇಲ್ಲಿದೆ..
Follow us on

ದೆಹಲಿ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ನಿನ್ನೆ ವಿಧಿವಶರಾಗಿದ್ದಾರೆ. ಹಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌, ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಹಾಗಾದರೆ ಹೇಗಿತ್ತು ಅಮರ್ ಸಿಂಗ್ ಸ್ನೇಹ ಹಾಗೂ ರಾಜಕೀಯ ಜೀವನ? ಈ ಕುರತಾದ ಒಂದು ವರದಿ ಇಲ್ಲಿದೆ.

ರಾಷ್ಟ್ರ ರಾಜಕಾರಣದಲ್ಲಿ ಅಮರ್ ಸಿಂಗ್ ಚಿರಪರಿಚಿತ ಹೆಸರು. ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಹಾಗೂ ಹೆಚ್​ಡಿಡಿ ನಡುವೆ ಸಂವಹನದ ಕೊಂಡಿಯಾಗಿದ್ದ ಅಮರ್ ಸಿಂಗ್, ಕ್ಯಾತಿ ಪಡೆದಷ್ಟೇ ಬೇಗ ಹಲವು ವಿವಾದಗಳಿಗೂ ಗುರಿಯಾಗಿದ್ದರು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ, ವಕ್ತಾರ ಸೇರಿದಂತೆ ಪ್ರಮುಖ ಹುದ್ದೆಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ್ದ ಅಮರ್ ಸ್ವಂತ ಪಕ್ಷ ಕಟ್ಟಿ ವಿಫಲರಾಗಿದ್ದೂ ನಿಜ. ಹೀಗೆ ರಾಷ್ಟ್ರರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಅಮರ್ ಸಿಂಗ್ ದೀರ್ಘ ಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಎರಡೂ ಕಿಡ್ನಿ ಕಸಿ ಮಾಡಿಸಿದ್ದ ಅಮರ್ ಸಿಂಗ್
V-2: ಅಂದಹಾಗೆ ಹಲವಾರು ವರ್ಷಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅಮರ್‌ ಸಿಂಗ್‌, ಎರಡೂ ಕಿಡ್ನಿಗಳ ಕಸಿ ಮಾಡಿಸಿಕೊಂಡಿದ್ದರು. ಆದರೆ ಇದರಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದರು. 7 ತಿಂಗಳಿಂದ ಸಿಂಗಾಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮರ್ ಸಿಂಗ್, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

‘ವೋಟಿಗಾಗಿ ನೋಟು’ ಕೊಟ್ಟಿತ್ತು ಪೆಟ್ಟು!
ಮುಲಾಯಂ ಸಿಂಗ್​ರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ಅಮರ್ ಸಿಂಗ್, ಅಮಿತಾಬ್ ಬಚ್ಚನ್​ರ ಕುಟುಂಬಕ್ಕೂ ಅತ್ಯಾಪ್ತರಾಗಿದ್ದರು. ಆದರೆ 2019ರ ಜುಲೈನಲ್ಲಿ ವಿವಾದಾತ್ಮಕವಾಗಿ ಟ್ವಿಟ್ ವಿಡಿಯೊ ಹಂಚಿಕೊಂಡಿದ್ದ ಅವರು, ಜಯಾ ಬಚ್ಚನ್ ಅವರನ್ನು ತೆಗಳಿದ್ದರು. ಅಲ್ಲದೆ ಅಮಿತಾಬ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಸಿನಿಮಾಗಳಲ್ಲಿ ಅಸಭ್ಯ ಪಾತ್ರ ಮಾಡಿದ್ದಾರೆ ಎಂದಿದ್ದರು. ಬಳಿಕ ಕ್ಷಮೆ ಕೋರಿದ್ದರು. ಹೀಗೆ ಬಿಗ್ ಬಿ ಕುಟುಂಬದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರೂ ವಿವಾದ ತಲೆ ಮೇಲೆ ಎಳೆದುಕೊಂಡಿದ್ದರು ಅಮರ್ ಸಿಂಗ್. ಅಲ್ಲದೆ ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಕಾರ ಉಳಿಸಲು ಹೋಗಿ, ವೋಟಿಗಾಗಿ ನೋಟು ಆರೋಪ ಹೊತ್ತಿದ್ದರು. ಇದು ಅಮರ್ ಸಿಂಗ್​ರ ರಾಜಕೀಯ ಬದುಕಿಗೆ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದಿತ್ತು.

ಒಟ್ನಲ್ಲಿ ಕ್ಯಾತರಾದಷ್ಟೇ ಹಲವು ವಿವಾದ ಮಾಡಿಕೊಂಡಿದ್ದ ಅಮರ್ ಸಿಂಗ್ ಎಲ್ಲರನ್ನೂ ತ್ಯಜಿಸಿ ಬರುದೂರಕ್ಕೆ ಸಾಗಿದ್ದಾರೆ. ಅಮರ್ ಸಿಂಗ್ ಅವರ ಅಗಲಿಕೆಗೆ ರಾಷ್ಟ್ರದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.