ಅಯೋಧ್ಯೆಯಲ್ಲಿ ವೇಗ ಪಡೆದುಕೊಂಡ ರಾಮಮಂದಿರದ ಕೆಲಸ; ಕಾರ್ಮಿಕರ ಸಂಖ್ಯೆ ಹೆಚ್ಚಿಸಿದ ಟ್ರಸ್ಟ್

|

Updated on: Jul 10, 2023 | 1:06 PM

ಸದ್ಯ, ಡಿಸೆಂಬರ್‌ನೊಳಗೆ ನೆಲಮಹಡಿಯ ಕೆಲಸ ಪೂರ್ಣಗೊಳಿಸಿ 'ಪ್ರಾಣ ಪ್ರತಿಷ್ಠಾ'ಕ್ಕೆ ಸಿದ್ಧಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಮೊದಲ ಅಂತಸ್ತಿನ ಕಾಮಗಾರಿಯೂ ಜುಲೈ 1 ರಂದು ಆರಂಭವಾಗಿದ್ದು, ಸ್ಲ್ಯಾಬ್‌ಗಳು ಮತ್ತು ಪಿಲ್ಲರ್‌ಗಳು ಸೇರಿದಂತೆ ಅದರ ಪ್ರಮುಖ ರಚನೆಗಳು ಜನವರಿ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಟ್ರಸ್ಟ್ ಹೇಳಿದೆ.

ಅಯೋಧ್ಯೆಯಲ್ಲಿ ವೇಗ ಪಡೆದುಕೊಂಡ ರಾಮಮಂದಿರದ ಕೆಲಸ; ಕಾರ್ಮಿಕರ ಸಂಖ್ಯೆ ಹೆಚ್ಚಿಸಿದ ಟ್ರಸ್ಟ್
ಅಯೋಧ್ಯೆಯಲ್ಲಿನ ರಾಮಮಂದಿಕ
Follow us on

ಇತ್ತೀಚಿನ ವಾರಗಳಲ್ಲಿ ಅಯೋಧ್ಯೆಯಲ್ಲಿ (Ayodhya) ರಾಮ ಮಂದಿರದ (Ram Temple) ಕೆಲಸ ವೇಗವನ್ನು ಪಡೆದುಕೊಂಡಿದ್ದು, 2024 ರ ಜನವರಿಯಲ್ಲಿ ದೇಗುಲದ ಕಾರ್ಯ ಪೂರ್ಣಗೊಳಿಸಿ ಭಕ್ತರಿಗೆ ಪ್ರವೇಶ ನೀಡುವುದಕ್ಕಾಗಿ ಕಾರ್ಮಿಕರ ಸಂಖ್ಯೆಯನ್ನು 550 ರಿಂದ 1,600 ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ 18 ಗಂಟೆಗಳ ಪಾಳಿಯಲ್ಲಿ ನಡೆಯುತ್ತಿದ್ದ ಕೆಲಸ ಈಗ ಹಗಲು-ರಾತ್ರಿ ನಡೆಯುತ್ತಿದೆ. ಮುಂದಿನ ವರ್ಷ ಜನವರಿಯಲ್ಲಿ ‘ಪ್ರಾಣ ಪ್ರತಿಷ್ಠಾ’ (ದೇವತೆಯ ಪ್ರತಿಷ್ಠಾಪನೆಯ ಸಮಾರಂಭ) ಮಾಡುವುದಕ್ಕಾಗಿ ಬಹುತೇಕ ಕೆಲಸ ಪೂರ್ಣಗೊಂಡಿದ್ದು ಭಗವಾನ್ ರಾಮನ ವಿಗ್ರಹವನ್ನು ಸ್ಥಾಪಿಸುವ ಗರ್ಭಗುಡಿಯ ಸಂಕೀರ್ಣದ ನೆಲದ ಕೆಲಸ ಮತ್ತು ಮತ್ತು ವಿದ್ಯುತ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ.ದೇವಸ್ಥಾನದ  ನೆಲ ಮತ್ತು ಮೊದಲ ಮಹಡಿಗಳೆರಡನ್ನೂ ಜನವರಿ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಯೋಜನಾ ವ್ಯವಸ್ಥಾಪಕ ಜಗದೀಶ್ ಅಫಲೆ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಸದ್ಯ, ಡಿಸೆಂಬರ್‌ನೊಳಗೆ ನೆಲಮಹಡಿಯ ಕೆಲಸ ಪೂರ್ಣಗೊಳಿಸಿ ‘ಪ್ರಾಣ ಪ್ರತಿಷ್ಠಾ’ಕ್ಕೆ ಸಿದ್ಧಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಮೊದಲ ಅಂತಸ್ತಿನ ಕಾಮಗಾರಿಯೂ ಜುಲೈ 1 ರಂದು ಆರಂಭವಾಗಿದ್ದು, ಸ್ಲ್ಯಾಬ್‌ಗಳು ಮತ್ತು ಪಿಲ್ಲರ್‌ಗಳು ಸೇರಿದಂತೆ ಅದರ ಪ್ರಮುಖ ರಚನೆಗಳು ಜನವರಿ ವೇಳೆಗೆ ಪೂರ್ಣಗೊಳ್ಳಲಿವೆ. ಇದಾದ ನಂತರ ಭಕ್ತರು ದೇಗುಲಕ್ಕೆ ಭೇಟಿ ನೀಡಬಹುದಾಗಿದೆ. ಆದರೆ ಮಾರ್ಚ್ 2024 ರವರೆಗೆ ಮೊದಲ ಮಹಡಿಯಲ್ಲಿ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ. ಅಲ್ಲಿ ಕೆಲಸ ಇನ್ನೂ ಬಾಕಿ ಇದೆ ಎಂದು ಅವರು ಹೇಳಿದ್ದಾರೆ.


ಮೂರು ಅಂತಸ್ತಿನ ಕಟ್ಟಡ ಮತ್ತು ‘ಪರ್ಕೋಟಾ’ (ಸಂಕೀರ್ಣದ ಹೊರ ಗೋಡೆ) ಪೂರ್ಣಗೊಳಿಸಲು ಸುಮಾರು ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ ಎಂದು ಅಫಲೆ ಹೇಳಿದ್ದಾರೆ.

‘ಪಾರ್ಕೋಟಾ’ ಕಾಮಗಾರಿಗೆ ಆಗಾಗ್ಗೆ ಮಳೆ ಅಡ್ಡಿಯಾಗುತ್ತದೆ. ಆದರೆ ಮಳೆ ಬಂದರೂ ಒಳಾಂಗಣ ಕೆಲಸಗಳು ನಡೆಯುತ್ತಿವೆ. 24 ಗಂಟೆಯೂ ನಡೆಯುತ್ತಿರುವುದರಿಂದ ಕಾಮಗಾರಿ ವೇಗ ಪಡೆದುಕೊಂಡಿದೆ. ಅಯೋಧ್ಯೆಯ ಹೊರಗಿನ ಎಂಜಿನಿಯರ್‌ಗಳು, ಮೇಲ್ವಿಚಾರಣಾ ಸಿಬ್ಬಂದಿ ಮತ್ತು ದಿನಗೂಲಿಗಳು ಸೇರಿದಂತೆ ಸುಮಾರು 1,200 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Satyendar Jain: ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರ ಮಧ್ಯಂತರ ಜಾಮೀನು ಅವಧಿ ಜುಲೈ 24ರವರೆಗೆ ವಿಸ್ತರಣೆ

ಸೂರ್ಯಾಸ್ತದ ನಂತರ ಕೆತ್ತನೆ ಸಂಬಂಧಿತ ಕೆಲಸಗಳನ್ನು ಮಾತ್ರ ನಿಲ್ಲಿಸಲಾಗುತ್ತದೆ ಮತ್ತು ಇತರ ಕೆಲಸಗಳು ಅಡೆತಡೆಯಿಲ್ಲದೆ ನಡೆಯುತ್ತವೆ ಎಂದು ಯೋಜನಾ ಅಧಿಕಾರಿ ರಾಧೆ ಜೋಶಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ