ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್ ಬಾಜ್ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್ ಟೈಗರ್ ಸೆರೆಯಾಗಿದೆ.
ಅಂದ ಹಾಗೆ, ಈ ಮೆಲನಿಸ್ಟಿಕ್ ಟೈಗರ್ ಎಂಬುದು ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ ಇರುವ ಕರಿ ಪಟ್ಟೆಗಳು ರಾಯಲ್ ಬೆಂಗಾಲ್ ಟೈಗರ್ ಹುಲಿಗಳಿಗಿಂತಾ ನಿಖರವಾಗಿವೆ. ಸದ್ಯ ಇವುಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು ಅಳಿವಿನಂಚು ತಲುಪಿದೆ. ಕಾಡಿನಲ್ಲಿ ತೀರಾ ವಿರಳವಾಗಿ ಕಾಣಸಿಗುವ ಈ ಕರಿಹುಲಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1993ರಲ್ಲಿ. ನಂತರ ಇದು ಮನುಷ್ಯರ ಕಣ್ಣಿಗೆ ಬಿದ್ದದ್ದು 2007ರಲ್ಲಿ ಮಾತ್ರ.
Published On - 5:43 pm, Thu, 5 November 20