ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ಆರೋಪಿ ವಿಕ್ರಂ ಭಾವೆಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಎಸ್.ಎಸ್ ಶಿಂಧೆ ಮತ್ತು ಮನೀಶ್ ಪಿತಾಳೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು ₹1 ಲಕ್ಷದ ನಗದು ಶ್ಯೂರಿಟಿ ಬರೆಸಿಕೊಂಡು ಭಾವೆಗೆ ಜಾಮೀನು ಅನುಮತಿ ನೀಡಿದ್ದಾರೆ. ಭಾವೆ ಸದ್ಯ ಯೆರವಡಾ ಸೆಂಟ್ರಲ್ ಜೈಲಿನಲ್ಲಿದ್ದು , ಶ್ಯೂರಿಟಿ ನೀಡಿದ ನಂತರವೇ ಬಿಡುಗಡೆ ಮಾಡಲಾಗುವುದು.
2013ರ ಆಗಸ್ಟ್ 20ರಂದು ಪುಣೆಯಲ್ಲಿ ನರೇಂದ್ರ ದಾಭೋಲ್ಕರ್ ಹತ್ಯೆಯಾಗಿತ್ತು. ಇತರ ಇಬ್ಬರು ಆರೋಪಿಗಳಾದ ಸಚಿನ್ ಅಧೂರೆ, ಶರದ್ ಕಲಸ್ಕರ್‌ರಿಗೆ ನೆರವಾಗಿದ್ದ ಆರೋಪದ ಅಡಿಯಲ್ಲಿ ಭಾವೆಯನ್ನು ಪೊಲೀಸರು ಬಂಧಿಸಿದ್ದರು.
ಜಾಮೀನು ಪಡೆದ ನಂತರ ಭಾವೆ ಮೊದಲ ತಿಂಗಳಿನಲ್ಲಿ ಪ್ರತಿ ದಿನ ಮತ್ತು ಎರಡನೇ ತಿಂಗಳಿನಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ಪುಣೆಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹಾಜರಾಗುವಂತೆ ನ್ಯಾಯಪೀಠ ಸೂಚಿಸಿದೆ. ಅದೇ ವೇಳೆ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮತ್ತು ಯಾವುದೇ ಪುರಾವೆಗಳು ನಾಶ ಮಾಡದಂತೆ ನಿರ್ದೇಶನ ನೀಡಿದೆ.
#Breaking – Bombay High Court grants bail to Vikaram Bhave, accused in the murder of rationalist Dr #NarendraDabholkar.
He was arrested on 25th May 2019. CBI accused him of helping the alleged sharp shooters in reccee in August 2013.
— Live Law (@LiveLawIndia) May 6, 2021
ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದ ನಂತರ ಭಾವೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಸಿಬಿಐ ಕೋರಿಕೆಯನ್ನು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ.
ಸಿಬಿಐ ಪ್ರಕಾರ, ಬಂಧಿತ ಆರೋಪಿ ಸಚಿನ್ ಅಧೂರೆ ಮತ್ತು ಶರದ್ ಕಲಾಸ್ಕರ್ 2013 ರ ಆಗಸ್ಟ್ 20 ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿಯ ವಿ ಆರ್ ಶಿಂಧೆ ಸೇತುವೆಯ ಮೇಲೆ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಾಗ ದಾಬೋಲ್ಕರ್ ಮೇಲೆ ಗುಂಡು ಹಾರಿಸಿದ್ದರು.
ಇದನ್ನೂ ಓದಿ: ದಾಭೋಲ್ಕರ್ ಪ್ರಕರಣದಂತೆ ಸುಶಾಂತ್ ಸಾವು ಪ್ರಕರಣ ಹಳ್ಳ ಹಿಡಿಯಬಾರದು: ಶರದ್ ಪವಾರ್
(Rationalist Narendra Dabholkar murder case Bombay HC grants bail to Vikram Bhave)