ಉತ್ತರ ಪ್ರದೇಶ ಸೇರಿ ಒಟ್ಟು 5 ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಾಗ್ದಾಳಿ-ಪ್ರತಿವಾಗ್ದಾಳಿಗಳೆಲ್ಲ ಸಾಮಾನ್ಯ. ಹೀಗಿರುವಾಗ ಉತ್ತರ ಪ್ರದೇಶಲ್ಲಿ ರಾಜಯಕೀಯ ಪಕ್ಷಗಳ ನಡುವೆ ಗಾಯನ ಸಮರ ಶುರುವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕ, ಸಂಸದ ರವಿ ಕಿಶನ್ ಅವರು ಉತ್ತರಪ್ರದೇಶ ಸರ್ಕಾರ, ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿ ಒಂದು ಹಾಡು ಹಾಡಿದ್ದರು. ಭೋಜಪುರಿ ನಟ, ಗಾಯಕರೂ ಆಗಿರುವ ರವಿ ಕಿಶನ್ ಯುಪಿ ಮೆ ಸಬ್ ಬಾ (ಉತ್ತರಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಹಾಡಿದ್ದರು. ಅದರಲ್ಲಿ, ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಉಲ್ಲೇಖವಿದೆ. ಇತ್ತೀಚೆಗೆ ಉದ್ಘಾಟನೆಯಾದ ಕುಶಿನಗರ ಏರ್ಪೋರ್ಟ್ ಮತ್ತು ಜಾವರ್ ಏರ್ಪೋರ್ಟ್ಗಳ ಉಲ್ಲೇಖವೂ ಇದೆ. ಅಷ್ಟೇ ಅಲ್ಲ, ಉತ್ತರಪ್ರದೇಶ ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ, ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ ರೀತಿಯಯನ್ನೂ ರವಿ ಕಿಶನ್ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ.
#UpMeinSabBa Full song out now click the link below to watch.
https://t.co/5tPzG0euEn pic.twitter.com/7oTpPOH21n
— Ravi Kishan (@ravikishann) January 15, 2022
ರವಿ ಕಿಶನ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬರು ಭೋಜಪುರಿ ಗಾಯಕ ನೇಹಾ ರಾಥೋಡ್ ಈ ಹಾಡಿಗೆ ಪ್ರತಿಯಾಗಿ ಒಂದು ಹಾಡು ಹಾಡಿದ್ದಾರೆ. ತಮ್ಮ ಹಾಡಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೆಗಳಿದ್ದಾರೆ. ಸದ್ಯ ಪ್ರತಿಪಕ್ಷಗಳು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಯಾವೆಲ್ಲ ಆರೋಪ ಮಾಡುತ್ತಿವೆಯೋ, ಅದೆಲ್ಲವನ್ನೂ ಸೇರಿಸಿ ನೇಹಾ ಹಾಡು ಹಾಡಿದ್ದಾರೆ.
23 ವರ್ಷದ ನೇಹಾ ರಾಥೋಡ್ ಇದೀಗ ಯುಪಿ ಮೆ ಕಾ ಬಾ (ಏನಿದೆ ಉತ್ತರಪ್ರದೇಶದಲ್ಲಿ) ಎಂಬ ಹಾಡನ್ನು ಟ್ವಿಟರ್, ಯೂಟ್ಯೂಬ್ನಲ್ಲಿ ಹರಿಬಿಟ್ಟಿದ್ದಾರೆ. ಕೊವಿಡ್ 19 ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ಸಿಕ್ಕ ಬಗ್ಗೆ, ಹತ್ರಾಸ್ ಅತ್ಯಾಚಾರ ಪ್ರಕರಣ ಮತ್ತು ಲಖಿಂಪುರದಲ್ಲಿ ರೈತರ ಕೊಲೆಯಾದ ಬಗ್ಗೆ ತಮ್ಮ ಹಾಡಿನ ಮೂಲಕವೇ ಸರ್ಕಾರವನ್ನು ಚುಚ್ಚಿದ್ದಾರೆ. ಈ ಹಾಡನ್ನು ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
यू पी में का बा..!#नेहासिंहराठौर #UPMEKABA #UPELECTION2022#विधानसभाचुनाव2022 https://t.co/TWMAiW3gqH pic.twitter.com/bf4mej4mMy
— Neha Singh Rathore (@nehafolksinger) January 16, 2022
ಅಂದಹಾಗೇ, ಈ ಹಾಡಿನ ಸಮರ ಇಲ್ಲಿಗೇ ಮುಗಿದಿಲ್ಲ. ಬಿಜೆಪಿಯ ಮತ್ತೊಬ್ಬರು ಸಂಸದರಾದ ಮನೋಜ್ ತಿವಾರಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ಮಂದಿರ್ ಅಬ್ ಬನಾನೆ ಎಂಬ ಹಾಡಿದು. ಅಂದರೆ ಮಂದಿರ (ಅಯೋಧ್ಯೆ ರಾಮಮಂದಿರ) ನಿರ್ಮಾಣ ಶುರುವಾಗಿದೆ, ಎಲ್ಲೆಲ್ಲೂ ಕೇಸರಿ ಎಂಬ ಅರ್ಥ ಸೂಸುವ ಹಾಡು. ಫೆ.10ರಿಂದ ಶುರುವಾಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹಾಡಿನ ಮೂಲಕ ಸಮರ ಶುರುವಾಗಿದೆ.
ಇದನ್ನೂ ಓದಿ: ಮದುವೆಯ ಬಳಿಕವೂ ಸಂಬಂಧಿಕನ ಜೊತೆ ಪ್ರೀತಿ; ಬಾಡಿಗೆ ಮನೆಯಲ್ಲಿ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಮಹಿಳೆ