ಅನಂತಪುರ ಜಿಲ್ಲೆಯ ಯಾಡಿಕಿ ಮಂಡಲದ ರಾಯಲ ಚೆರುವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಅಟೆಂಡರ್ ಹಿಡನ್ ಕ್ಯಾಮೆರಾ (Hidden Camera) ಹಾಕಿರುವ ಪ್ರಸಂಗ ನಡೆದಿದೆ. ಹೌದು ಮಹಿಳೆಯರು ಎಷ್ಟೇ ಎಚ್ಚರಿಕೆ ವಹಿಸಿದರೂ ಎಲ್ಲೋ ಒಂದು ಕಡೆ ಹುಚ್ಚರಿಗೆ ಬಲಿಯಾಗುವುದು ಸಾಮಾನ್ಯವಾಗಿದೆ. ಅನಂತಪುರ (Anantapur) ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ -PHC) ನಡೆದಿರುವ ಘಟನೆ ಮಹಿಳಾ (Women) ಸಿಬ್ಬಂದಿಯನ್ನು ಆತಂಕಕ್ಕೆ ದೂಡಿದೆ. ಇತ್ತೀಚೆಗಷ್ಟೇ ಯಾಡಿಕಿ ಮಂಡಲದ ರಾಯಲ ಚೆರುವು ಪಿಎಚ್‌ಸಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಅಟೆಂಡರ್ ಒಬ್ಬ ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಡ್ಬೋರ್ಡ್ ಬಾಕ್ಸ್‌ಗೆ ಸೆಲ್ ಫೋನ್ ಇಟ್ಟು ವಿಡಿಯೋ ಮಾಡಲಾಗುತ್ತಿತ್ತು ಎಂಬ ಆರೋಪವಿದೆ.
ಮಹಿಳಾ ಸಿಬ್ಬಂದಿಯ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಗುಪ್ತವಾಗಿ ಸೆಲ್‌ಫೋನ್ ಅಳವಡಿಸಿ ಕೆಲ ದಿನಗಳಿಂದ ನರೇಂದ್ರ ಈ ದುಷ್ಕೃತ್ಯ ನಡೆಸುತ್ತಿದ್ದಾನೆ ಎಂದು 40 ಮಹಿಳಾ ಸಿಬ್ಬಂದಿ ದೂರಿದಾಗ ವಿಷಯ ಬೆಳಕಿಗೆ ಬಂದಿದೆ. ಇನ್ನು, ಯಾರದೆಲ್ಲಾ ವಿಡಿಯೋಗಳು ಇವೆ ಎಂಬುದು ತಿಳಿಯದ ಕಾರಣ ಮಹಿಳಾ ಉದ್ಯೋಗಿಗಳು ಒಬ್ಬೊಬ್ಬರಾಗಿ ಕಂಗಾಲಾಗಿದ್ದಾರೆ.
Also Read:
ಈ ಘಟನೆಯನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ತಕ್ಷಣ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣವನ್ನು ಮಹಿಳಾ ವಿಶೇಷ ತಂಡದ ಶಿ ಟೀಮ್‌ಗೆ (SHE Team) ಹಸ್ತಾಂತರಿಸುವ ಸಾಧ್ಯತೆಗಳಿವೆ. ಮಹಿಳಾ ಸಿಬ್ಬಂದಿ ಆತನ ಫೋನನ್ನು ವಶಕ್ಕೆ ಪಡೆದು ಮಹಿಳಾ ಉದ್ಯೋಗಿಗಳ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಆ ವಿಡಿಯೋಗಳು ಅವನ ಬಳಿಯೇ ಇದ್ದವಾ? ಅಥವಾ ಯಾರೊಂದಿಗಾದರೂ ಅವನು ಹಂಚಿಕೊಂಡಿದ್ದಾನಾ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:06 pm, Wed, 15 February 23