ಆಮ್ಲೆಟ್​ ತಿಂದ್ರು, ಜ್ಯೂಸ್​ ಕುಡ್ದ್ರು, ಕಾಸು ಕೇಳಿದ್ರೆ ಕೊಡಲ್ಲ ಅಂದ್ರು: ಮಹಿಳಾ ಸಬ್​ಇನ್​ಸ್ಪೆಕ್ಟರ್​ ಜತೆ ಮೂವರು ಕಾನ್​ಸ್ಟೆಬಲ್​ಗಳು ಸಸ್ಪೆಂಡ್

|

Updated on: Jun 07, 2023 | 3:03 PM

ಎಲ್ಲಾ ಇಲಾಖೆಗಳಂತೆ ಪೊಲೀಸ್ ಇಲಾಖೆಯಲ್ಲಿ ಕೂಡ ನಿಷ್ಠ ಅಧಿಕಾರಿಗಳಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ.

ಆಮ್ಲೆಟ್​ ತಿಂದ್ರು, ಜ್ಯೂಸ್​ ಕುಡ್ದ್ರು, ಕಾಸು ಕೇಳಿದ್ರೆ ಕೊಡಲ್ಲ ಅಂದ್ರು: ಮಹಿಳಾ ಸಬ್​ಇನ್​ಸ್ಪೆಕ್ಟರ್​ ಜತೆ ಮೂವರು ಕಾನ್​ಸ್ಟೆಬಲ್​ಗಳು ಸಸ್ಪೆಂಡ್
ಪೊಲೀಸ್
Image Credit source: India Today
Follow us on

ಎಲ್ಲಾ ಇಲಾಖೆಗಳಂತೆ ಪೊಲೀಸ್ ಇಲಾಖೆಯಲ್ಲಿ ಕೂಡ ನಿಷ್ಠ ಅಧಿಕಾರಿಗಳಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಕೆಲವರು ಸಾರ್ವಜನಿಕರ ಸೇವೆಗಾಗಿಯೇ ತಮ್ಮನ್ನು ಮೀಸಲಿಟ್ಟಿದ್ದರೆ ಇನ್ನೂ ಕೆಲವರು ಸಣ್ಣ ಪುಟ್ಟ ಗೂಡಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುವವರ ಬಳಿಯೂ ಹಣ ವಸೂಲಿ ಮಾಡುತ್ತಿದ್ದಾರೆ. ಅಂಥಹ ಒಂದು ಘಟನೆ ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದಿದೆ.

ಮಹಿಳಾ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಹಾಗೂ ಮೂವರು ಕಾನ್​ಸ್ಟೆಬಲ್​ಗಳು ಅಂಗಡಿಯೊಂದಕ್ಕೆ ಬಂದು, ಬ್ರೆಡ್​ ಆಮ್ಲೆಟ್​ ತಿಂದು, ಜ್ಯೂಸ್ ಕುಡಿದು, ನೀರಿನ ಬಾಟಲಿ ಖರೀದಿಸಿದ್ದರು, ಹಣ ಕೇಳಿದ್ದಕ್ಕೆ ಕೊಡೋಕಾಗಲ್ಲ ಹೋಗು, ಹೆಚ್ಚು ಮಾತಾಡಿದ್ರೆ ಲೈಸೆನ್ಸ್​ ಕ್ಯಾನ್ಸಲ್​ ಮಾಡಿಸ್ತೀನಿ ಎಂದು ಧಮ್ಕಿ ಹಾಕಿದ್ದರು ಎನ್ನಲಾಗಿದೆ.

ಸಬ್ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ವಿಜಯಲಕ್ಷ್ಮಿ ಎಂಬವರು ಕಾನ್‌ಸ್ಟೆಬಲ್‌ಗಳ ಜೊತೆ ಇತ್ತೀಚೆಗೆ ಠಾಣೆ ಬಳಿಯಿರುವ ಜ್ಯೂಸ್ ಸೆಂಟರ್‌ಗೆ ಭೇಟಿ ನೀಡಿದ್ದರು.

ಮತ್ತಷ್ಟು ಓದಿ: ಅರೆಸ್ಟ್​ ಮಾಡಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಫೈರಿಂಗ್‌ ಮಾಡಿ ಆರೋಪಿಯ ಬಂಧನ

ಅಂಗಡಿ ಮಾಲೀಕ ಮಣಿಮಂಗಲಂ ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಲಾಗಿದೆ. ಇದೇ ವೇಳೆ ತಾಂಬರಂ ಕಮಿಷನರ್ ಅಮಲರಾಜ್ ಸಬ್ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಇತರ ಮೂವರು ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದಾರೆ. ತನಿಖೆ ಇನ್ನೂ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ