ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಗೃಹ ಸಚಿವ ಡಾ ಜಿ ಪರಮೇಶ್ವರ್

‘ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ’ ಮಾಡುವುದಾಗಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಗೃಹ ಸಚಿವ ಡಾ ಜಿ ಪರಮೇಶ್ವರ್
ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್
Follow us
ಗಂಗಾಧರ​ ಬ. ಸಾಬೋಜಿ
|

Updated on:Jun 06, 2023 | 3:29 PM

ಮಂಗಳೂರು: ‘ನೈತಿಕ ಪೊಲೀಸ್​ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ’ ಮಾಡುವುದಾಗಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (Dr G Parameshwara) ಹೇಳಿದರು. ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ಹೊಸ ಘಟಕ ಆರಂಭಿಸ್ತೇವೆ ಎಂದರು. ಆ್ಯಂಟಿ ಕಮ್ಯುನಲ್ ವಿಂಗ್​ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಅಂತಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ನೈತಿಕ ಪೊಲೀಸ್​ಗಿರಿ ತಡೆಯದಿದ್ರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು

ಸಮಸ್ಯೆಗಳು ಸವಾಲುಗಳ ಬಗ್ಗೆ ವಿಚಾರಿಸಿದ್ದೇನೆ. ನನಗೆ ಇದು ಹೊಸದಲ್ಲ. ನಾನು ಮೂರನೇ ಭಾರೀ ಗೃಹ ಸಚಿವನಾಗಿದ್ದೇನೆ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್​ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್​ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಇದನ್ನೂ ಓದಿ: DV Sadananda Gowda: ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡಿ ಹೆಜ್ಜೆ ಇಡ್ತೇವೆ -ಡಿ.ವಿ. ಸದಾನಂದಗೌಡ ಎಚ್ಚರಿಕೆ ಮಾತು

ಕೋಮುದ್ವೇಷಕ್ಕೆ ಹತ್ಯೆಯಾ ದೀಪಕ್ ರಾವ್, ಫಾಜಿಲ್, ಜಲೀಲ್, ಮಸೂದ್​​ ಕುಟುಂಬಸ್ಥರಿಗೆ ನಮ್ಮ ಸರ್ಕಾರ ಪರಿಹಾರ ನೀಡಲಿದೆ. ಈ ಸಂಬಂಧ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನಾವು ಗ್ಯಾರಂಟಿ ಘೋಷಣೆ ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ

ರಾಜ್ಯದ ಜನ ಬಿಜೆಪಿ ಮೇಲಿನ ಆಕ್ರೋಶದಿಂದ ಮತ ಹಾಕಿದ್ದಾರೆ. ಕಾಂಗ್ರೆಸ್ ‌ಮತ್ತು ಅದರ ನಾಯಕತ್ವ ನಂಬಿ ನಮಗೆ 135 ಸೀಟ್ ಕೊಟ್ಟಿದ್ದಾರೆ. ಜ‌ನ ನಮ್ಮನ್ನ ವಿಶ್ವಾಸದಿಂದ ಉತ್ತಮ ಆಡಳಿತದ ಹಿನ್ನೆಲೆಯಲ್ಲಿ ಗೆಲ್ಲಿಸಿದ್ದಾರೆ. ನಾವು ಐದು ಗ್ಯಾರಂಟಿ ತಯಾರು ಮಾಡಿ ಕೊಟ್ಟಿದ್ದೆವು. ನಾವು ಗ್ಯಾರಂಟಿ ಘೋಷಣೆ ಬೇಕಾಬಿಟ್ಟಿ ತೀರ್ಮಾನಿಸಿರಲಿಲ್ಲ. ಹಣಕಾಸು ಖರ್ಚಿನ ಲೆಕ್ಕಾಚಾರ ಮಾಡಿ ಸಾದ್ಯತೆ ಬಳಿಕ ಪ್ರಕಟ ಮಾಡಿದ್ದು ಎಂದು ಹೇಳಿದರು.

ನಾವು ಯಾವುದೇ ಬೇಜವಾಬ್ದಾರಿಯಿಂದ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ದಿವಾಳಿ ಮಾಡುತ್ತೆ ಅಂತ ಬಿಜೆಪಿ ಮತ್ತು ಮೋದಿ ಹೇಳ್ತಾ ಇದಾರೆ. ಆದರೆ ನಾವು ಘೋಷಣೆ ಯಾವುದೇ ಬೇಜವಾಬ್ದಾರಿಯಿಂದ ಮಾಡಿಲ್ಲ. ಗೃಹ ಇಲಾಖೆ ನನಗೆ ಹ್ಯಾಟ್ರಿಕ್, ನಾನು ಸಿದ್ದರಾಮಯ್ಯರಿಗೆ ಹೇಳಿದೆ. ನಿಮಗೆ ಯಾಕೆ ಇಷ್ಟು ಪ್ರೀತಿ? ಜನರಿಗೆ ಸೇವೆ ಮಾಡಲು ಬೇರೆ ಖಾತೆ ಕೊಡಿ ಅಂದೆ. ಆದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯರಿಗೆ ನೀವೇ ಹೋಂ ಮಿನಿಸ್ಟರ್ ಆಗಬೇಕು ಅಂದ್ರು.

ಇದನ್ನೂ ಓದಿ: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ ಆರೋಪ: ಡಿಸಿಎಂ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳ ಅಮಾನತು

ಕೇಸರಿಕರಣ ಮಾಡಿದ್ರೋ ಮತ್ತೊಂದು ಈಗ ನನಗೆ ಅಗತ್ಯ ಇಲ್ಲ. ಆದರೆ‌ ಇನ್ನು ಮುಂದೆ ಪೊಲೀಸರು ಸರಿಯಾಗಿ ಕೆಲಸ ಮಾಡಬೇಕು. ಮಾಡದೇ ಇದ್ರೆ ನಮ್ಮ ಔಷಧಾಲಯದಲ್ಲಿ ಬೇರೆ ಔಷಧಿ ಇದೆ. ಮತ್ತೆ ಈ ಪೋಸ್ಟ್ ನನಗೇ ಸಿಕ್ಕಿದೆ, ನಾನು ಜಿಲ್ಲೆಯನ್ನ ಸರಿ ಮಾಡ್ತೇನೆ. ಇಲ್ಲಿ ಕಾಂಗ್ರೆಸ್ ಸೋತಿದೆ ಅನ್ನೋ ಭಾವನೆ ಬೇಡ. ಇವತ್ತು ಅಧಿಕಾರ ಸಿಕ್ಕಿದೆ, ಸರ್ಕಾರ ನಿಮ್ಮ ಸರ್ಕಾರ, ನಿಮ್ಮ ಜೊತೇಲಿ ಇದೆ. ಯಾವುದೇ ಸಚಿವರು ಇಲ್ಲಿಗೆ ಬರಬೇಕು ಅಂತ ಆದ್ರೆ ನಿಮ್ಮ ನಾಯಕರಿಗೆ ತಿಳಿಸಿ ಎಂದರು.

ಪೊಲೀಸ್ ಅಧಿಕಾರಿಗಳ ಜತೆ ಗೃಹಸಚಿವ ಡಾ.ಪರಮೇಶ್ವರ್​ ಸಭೆ

ಇದನ್ನೂ ಮುಂಚೆ ಮಂಗಳೂರಿನ ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಜತೆ ಗೃಹಸಚಿವ ಡಾ.ಪರಮೇಶ್ವರ್​ ಸಭೆ ಮಾಡಿದರು. ಕಳೆದ ಎರಡೂವರೆ ಗಂಟೆ ಸಭೆ ಮಾಡಿದ್ದು, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಡಾ.ಚಂದ್ರಗುಪ್ತ, ಆಯುಕ್ತ ಕುಲದೀಪ್ ಕುಮಾರ್ ಜೈನ್, ದಕ್ಷಿಣ ಕನ್ನಡ SP ಸಿ.ಬಿ.ರಿಷ್ಯಂತ್, ಉತ್ತರ ಕನ್ನಡ SP ವಿಷ್ಣುವರ್ಧನ್, ಉಡುಪಿ SP ಅಕ್ಷಯ್​ ಮತ್ತು ಚಿಕ್ಕಮಗಳೂರು SP ಉಮಾಪ್ರಶಾಂತ್ ಭಾಗಿ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:49 pm, Tue, 6 June 23