AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DV Sadananda Gowda: ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡಿ ಹೆಜ್ಜೆ ಇಡ್ತೇವೆ -ಡಿ.ವಿ. ಸದಾನಂದಗೌಡ ಎಚ್ಚರಿಕೆ ಮಾತು

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ವಿ. ಸದಾನಂದಗೌಡ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿರೀಕ್ಷೆ ಮೀರಿ ಹಿನ್ನಡೆಯಾಗಿದೆ. ಹಲವು ದಿನಗಳಿಂದ ಬೇರೆ ರೀತಿಯ ಚರ್ಚೆ, ವಿಶ್ಲೇಷಣೆ ನಡೆದಿದೆ ಎಂದರು.

DV Sadananda Gowda: ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡಿ ಹೆಜ್ಜೆ ಇಡ್ತೇವೆ -ಡಿ.ವಿ. ಸದಾನಂದಗೌಡ ಎಚ್ಚರಿಕೆ ಮಾತು
ಡಿ.ವಿ. ಸದಾನಂದಗೌಡ
ಆಯೇಷಾ ಬಾನು
|

Updated on: Jun 06, 2023 | 1:45 PM

Share

ಬೆಂಗಳೂರು: ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡೋಣ. ಜನಾದೇಶದ ಆಡಳಿತ ವೈಖರಿಯನ್ನು ಕಂಡು ನಾವು ಕಾಲಿಡಬೇಕಿದೆ. ಆಡಳಿತ ವೈಖರಿ ನೋಡಿ ನಾವು ಹೆಜ್ಜೆ ಇಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ(DV Sadananda Gowda) ಕಾಂಗ್ರೆಸ್(Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋತ ಕಾರಣ ಬೇರೆ ಬೇರೆ ವ್ಯಕ್ತಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗಿದೆ. ಮೂರ್ನಾಲ್ಕು ಬಾರಿ ನನ್ನ ತೇಜೋವಧೆ ಮಾಡುವ ಕೆಲಸ ಆಗಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ವಿ. ಸದಾನಂದಗೌಡ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿರೀಕ್ಷೆ ಮೀರಿ ಹಿನ್ನಡೆಯಾಗಿದೆ. ಹಲವು ದಿನಗಳಿಂದ ಬೇರೆ ರೀತಿಯ ಚರ್ಚೆ, ವಿಶ್ಲೇಷಣೆ ನಡೆದಿದೆ. ಇದು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ. ನಾವು ಮಾಡಿಕೊಳ್ಳಬೇಕಾದದ್ದು ಆತ್ಮಾವಲೋಕನ ಅಲ್ಲ. ನಾವು ಸೋತ ಕಾರಣ ಹುಡುಕಿ, ಮುಂದಿನ ದಿನ ಪಕ್ಷ ತೀರ್ಮಾನ ಮಾಡಬೇಕು. ಚುನಾವಣೆ ಫಲಿತಾಂಶ ಬಳಿಕ ಕಾರ್ಯಕರ್ತರ ಮನೋಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. ಸೋಲು ಎಲ್ಲವೂ ಮುಗಿಯಿತು ಅಂತ ಅಂದುಕೊಳ್ಳುವುದಲ್ಲ. ಯಡಿಯೂರಪ್ಪ ಅವರಂತಹ ನಾಯಕ ಉಳಿದ ಕಾರಣ ಅಧಿಕಾರಕ್ಕೆ ಬಂದೆವು. ಸೋಲು ತಾತ್ಕಾಲಿಕ ಹಿನ್ನೆಡೆ ಅಷ್ಟೇ ಎಂದರು.

ಇದನ್ನೂ ಓದಿ: ಹೊರಗೆ ಟಫ್ ಆಗಿರೋ ಡಿಕೆಶಿ ಮನೆಯಲ್ಲಿ ಹೇಗಿರ್ತಾರೆ?; ವೀಕೆಂಡ್​ ವಿತ್ ರಮೇಶ್​ನಲ್ಲಿ ವಿವರಿಸಿದ ಮಗಳು ಐಶ್ವರ್ಯಾ

ಲೋಕಸಭಾ ಸದಸ್ಯನಾಗಿ, ಮಾಜಿ ಕೇಂದ್ರ ಸಚಿವ, ಮಾಜಿ ಸಿಎಂ ಆಗಿ ಹೇಳುತ್ತಿದ್ದೇನೆ ಧೃತಿಗೆಡುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಕಟ್ಟಬೇಕಾದ ಅವಶ್ಯಕತೆ ಇದೆ. ಸೋಲಿಗೆ ಕಾರಣಗಳನ್ನು ಹುಡುಕಿ ಸರಿಪಡಿಸಬೇಕಿದೆ. ಕಾರ್ಯಕರ್ತರಲ್ಲಿ ಧೈರ್ಯ, ಉತ್ಸಾಹ ತುಂಬಬೇಕಿದೆ. ಸೋಲು ನಮಗೆ ಹೊಸದಲ್ಲ. ಸೋಲು ಎಲ್ಲವನ್ನೂ ಮುಗಿಸಲ್ಲ. ಪಕ್ಷ ಸದೃಢ ಮಾಡುವ ಪ್ರಯತ್ನ ನಮ್ಮವರಿಂದ ಆಗಬೇಕಾಗಿದೆ, ಯಾರೂ ಧೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ವ್ಯತ್ಯಾಸಗಳು, ಸಾಂದರ್ಭಿಕ ತಪ್ಪುಗಳಾಗಿರಬಹುದು. ಸೋಲು ಅರಗಿಸಿಕೊಂಡು ಮತ್ತೆ ಎದ್ದೇಳುವ ಮಾಸ್ಟರ್ ಪ್ಲಾನ್ ಮಾಡಬೇಕು ಎಂದು ಡಿ.ವಿ. ಸದಾನಂದಗೌಡರು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರ ಬಗ್ಗೆ ಕಾದು ನೋಡೋಣ. ಜನಾದೇಶದ ಆಡಳಿತ ವೈಖರಿ ಕಂಡು ನಾವು ಕಾಲಿಡಬೇಕಿದೆ. ಆಡಳಿತ ವೈಖರಿ ನೋಡಿ ನಾವು ಹೆಜ್ಜೆ ಇಡುತ್ತೇವೆ. ಸೋಲು ಆದ ಕಾರಣ ಬೇರೆ ಬೇರೆ ವ್ಯಕ್ತಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತಿದೆ. ಕಳೆದ ಎರಡು ದಿನದ ಫೋನ್ ಕರೆಗಳಿಗೆ ಉತ್ತರ ಕೊಡಲಾಗದೇ ರಾಜ್ಯದ ಜನತೆಗೆ ಉತ್ತರ ಕೊಡಲು ಸುದ್ದಿ ಗೋಷ್ಠಿ ಮಾಡ್ತಿದ್ದೇನೆ. ಮೂರ್ನಾಲ್ಕು ಬಾರಿ ನನ್ನ ತೇಜೋವಧೆ ಮಾಡುವ ಕೆಲಸ ಆಗಿದೆ. ಗಂಭೀರ ಹೆಜ್ಜೆ ಇಡುವ ಕೆಲಸ ಮಾಡಬೇಕಿದೆ. ನಮ್ಮ ಫೋಟೋವನ್ನು ಚಂದವಾಗಿ ಅಚ್ಚು ಮಾಡಿ, ಅದರ ಕೆಳಗೆ ಮಸಿ ಬಳಿಯುವ ಕೆಲಸ ಮಾಡ್ತಿದ್ದಾರೆ. 15 ಜನ ಸಂಸದರಿಗೆ ಮಸಿ ಬಳಿಯುವ ಕೆಲಸ ಮಾಡಲಾಗ್ತಿದೆ. ಅವರಿಗೆ ಮುಂದೆ ಸೀಟುಗಳಿಲ್ಲ ಅಂತ ಹೇಳಲಾಗ್ತಿದೆ. ಆಯ್ಕೆ ಮಾಡಿದ ಮತದಾರರಿಗೆ ಅಪಮಾನ ಮಾಡಲಾಗ್ತಿದೆ. ಬಿಜೆಪಿಯಲ್ಲಿ 13 ಜನ ಅಯೋಗ್ಯರು ಅಂತ ಹೇಳ್ತಿದ್ದಾರೆ. ಈ ರೀತಿಗೆ ಕೌಂಟರ್ ಕೊಡುವುದು ನಮ್ಮಂತಹ ನಾಯಕರ ಜವಾಬ್ದಾರಿ ಎಂದು ಕಿಡಿಕಾರಿದರು.

ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ