Two Years of Pulwama Attack | ಪುಲ್ವಾಮಾ ದಾಳಿ ನೆನಪಿಸಿಕೊಂಡು ಕಂಬನಿ ಮಿಡಿದ ದೇಶ

| Updated By: ರಾಜೇಶ್ ದುಗ್ಗುಮನೆ

Updated on: Feb 14, 2021 | 1:32 PM

2019 Pulwama Terror Attack: ಟ್ವಿಟರ್​, ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ವಾಮಾ ದಾಳಿಯ ಪ್ರತಿರೋಧ ಕಾವೇರುತ್ತಿದೆ. ದೇಶದ ಹಲವು ರಾಜಕಾರಣಿಗಳು, ನಾಯಕರು, ನೆಟ್ಟಿಗರು ಪುಲ್ವಾಮಾದಲ್ಲಿ ಬಲಿಯಾದ ಹುತಾತ್ಮ ಯೋಧರನ್ನು ಸ್ಮರಿಸುತ್ತಿದ್ದಾರೆ.

Two Years of Pulwama Attack | ಪುಲ್ವಾಮಾ ದಾಳಿ ನೆನಪಿಸಿಕೊಂಡು ಕಂಬನಿ ಮಿಡಿದ ದೇಶ
ಪುಲ್ವಾಮಾ ದಾಳಿಯಲ್ಲಿ ಬಲಿಯಾದ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದ ದೃಶ್ಯ
Follow us on

ದೆಹಲಿ: 2019ರ ಇದೇ ದಿನ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹೆದ್ದಾರಿಯೊಂದರಲ್ಲಿ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮೇಲೆ ಪಾಕಿಸ್ತಾನಿ ಉಗ್ರನೋರ್ವ ಆತ್ಮಾಹುತಿ ದಾಳಿ ನಡೆಸಿದ ಭಾರತೀಯರು ಎಂದಿಗೂ ಮರೆಯದ ದಿನ. ಅಂದಿನ ಆ ಕೃತ್ಯದ ನೆನಪಾಗಿ ದೇಶದ ಜನರ ನೆತ್ತರು ಬಿಸಿಗೊಳ್ಳುತ್ತದೆ. ಟ್ವಿಟರ್​, ಫೇಸ್​ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ವಾಮಾ ದಾಳಿಯ ಪ್ರತಿರೋಧ ಕಾವೇರುತ್ತಿದೆ. ದೇಶದ ಹಲವು ರಾಜಕಾರಣಿಗಳು, ನಾಯಕರು, ನೆಟ್ಟಿಗರು ಪುಲ್ವಾಮಾದಲ್ಲಿ ಬಲಿಯಾದ ಹುತಾತ್ಮ ಯೋಧರನ್ನು ಸ್ಮರಿಸುತ್ತಿದ್ದಾರೆ.

ದೆಹಲಿ ಚಲೋ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಿಸಾನ್ ಏಕ್ತಾ ಮೋರ್ಚಾ ಹುತಾತ್ಮ ಸೈನಿಕರನ್ನು ಸ್ಮರಿಸಿದೆ. ದೇಶದ ವಿವಿಧೆಡೆ ಪ್ರತಿಭಟನಾ ನಿರತ ರೈತರು ಇಂದು ಪುಲ್ವಾಮಾ ದಾಳಿಯಲ್ಲಿ ಬಲಿಯಾದವರನ್ನು ಸ್ಮರಿಸಿ ಮೊಂಬತ್ತಿ ಬೆಳಗಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಿಸಾನ್ ಏಕ್ತಾ ಮೋರ್ಚಾ ತಿಳಿಸಿದೆ.

40 ಹುತಾತ್ಮ ಯೋಧರ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಪುಲ್ವಾಮಾ ಘಟನೆಯನ್ನು ಸ್ಮರಿಸಿದ್ದಾರೆ. ಎಲ್ಲ ಹುತಾತ್ಮರಿಗೂ ತಾವು ನಮಿಸುವುದಾಗಿ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಸಹ ದೇಶ ರಕ್ಷಣೆಯಲ್ಲಿ ಬಲಿಯಾದ ಯೋಧರನ್ನು ಸ್ಮರಿಸಿ ಟ್ವೀಟ್ ಮಾಡಿದ್ದು, ಎಲ್ಲ ಹುತಾತ್ಮರಿಗೂ ಗೌರವ ಸಲ್ಲಿಸುವುದು ನಾಗರಿಕರ ಕರ್ತವ್ಯವಾಗಿದ್ದು, ಅವರ ಬಲಿದಾನವನ್ನು ಸ್ಮರಿಸುವುದಾಗಿ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘ ಪುಲ್ವಾಮಾ ದಾಳಿಯಲ್ಲಿ ಬಲಿಯಾದ ಎಲ್ಲ ಯೋಧರ ಕುಟುಂಬದ ಜತೆ ಸರ್ಕಾರ ಎಂದಿಗೂ ಜತೆಯಾಗಿ ನಿಲ್ಲಲಿದೆ’ ಎಂದು ತಿಳಿಸಿದ್ದಾರೆ.

‘ಯೋಧರ ಬಲಿದಾನ ಸ್ಮರಿಸಿ ಭಾರತೀಯರೆಲ್ಲರ ಎದೆಯಲ್ಲಿ ಉರಿಯುತ್ತಿರುವ ಕಿಡಿಯೇ ನನ್ನಲ್ಲೂ ಹೊತ್ತಿದೆ’ಎಂದು ಪ್ರಧಾನಿ ನರೇಂದ್ರ ಮೋದಿ ಪುಲ್ವಾಮಾ ದಾಳಿಗೆ ಪ್ರತಿದಾಳಿಯ ಸುಳುಹು ನೀಡಿದ್ದರು. ಹಲವು ನೆಟ್ಟಿಗರು ಫೆಬ್ರವರಿ 14ನ್ನು ದುಃಖದ ದಿನ ಎಂದು ಆಚರಿಸುವುದಾಗಿ ಬರೆದುಕೊಂಡಿದ್ದಾರೆ. ಪುಲ್ವಾಮಾ ದಿನವನ್ನು ದೇಶ ಭವಿಷ್ಯದುದ್ದಕ್ಕೂ 40 ಯೋಧರ ಸ್ಮರಣೆ ಮಾಡಬೇಕಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಪುಲ್ವಾಮಾ ಯೋಧರ ಬಲಿದಾನವನ್ನು ಸ್ಮರಿಸಿದ್ದು, ಅವರ ಪರಮೋಚ್ಛ ಬಲಿದಾನವನ್ನು ಎಂದಿಗೂ ನೆನಪಲ್ಲಿಡುವುದಾಗಿ ಹೇಳಿದ್ದಾರೆ. ನಟ ಸುನೀಲ್ ಶೆಟ್ಟಿ ಸಹ ತಮ್ಮ ನಮನಗಳನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: Two Years of Pulwama Attack | ಪುಲ್ವಾಮಾ ದಾಳಿ ಕರಾಳ ದಿನಕ್ಕೆ 2 ವರ್ಷ.. ಅಂದು ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಸಲಾಂ

Published On - 12:35 pm, Sun, 14 February 21