AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛಾಯಾಗ್ರಾಹಕನಿಗೆ ಹೊಡೆದ ವರ: ಕೊನೆಗೂ ಬಯಲಾಯ್ತು ಅಸಲಿ ವಿಚಾರ

ಈ ಘಟನೆ ನಂತರ ಮದುವೆ ಹುಡುಗಿ ಬಿದ್ದು ಬಿದ್ದು ನಕ್ಕಿದ್ದಳು. ಅಷ್ಟೇ ಅಲ್ಲ, ಛಾಯಾಗ್ರಾಹಕನ ಮುಖದಲ್ಲಿ ಸಣ್ಣದಾದ ನಗು ಇತ್ತು. ಇದನ್ನು ನೋಡಿದ ಅನೇಕರು ಇದು ಯಾರೋ ಹೇಳಿ ಮಾಡಿಸಿದ ವಿಡಿಯೋ ಏಂದು ಹೇಳಿಕೊಂಡಿದ್ದರು.

ಛಾಯಾಗ್ರಾಹಕನಿಗೆ ಹೊಡೆದ ವರ: ಕೊನೆಗೂ ಬಯಲಾಯ್ತು ಅಸಲಿ ವಿಚಾರ
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Feb 14, 2021 | 1:38 PM

Share

ಕೆಲ ದಿನಗಳ ಹಿಂದಿನ ಮಾತು. ವಾಟ್ಸಾಪ್​ ಸ್ಟೇಟಸ್​ಗಳಲ್ಲಿ, ಗ್ರೂಪ್​ಗಳಲ್ಲಿ ಬರುವ ವಿಡಿಯೋಗಳಲ್ಲಿ, ಫೇಸ್​ಬುಕ್​ನಲ್ಲಿ, ಇನ್​ಸ್ಟಾಗ್ರಾಂನಲ್ಲಿ….ಕೊನೆಗೆ ಟ್ವಿಟ್ಟರ್​ನಲ್ಲೂ ಅದೇ ವಿಡಿಯೋ. ಆ ವಿಡಿಯೋ ಬೇರೆ ಯಾವುದೂ ಅಲ್ಲ. ಫೋಟೋಗ್ರಾಫರ್​ ಓರ್ವ ವಧುವಿನ ಫೋಟೋ ತೆಗೆಯಲು ಹೋಗಿ ವರನಿಂದ ಹೊಡೆತ ತಿಂದಿದ್ದು. ಈ ವಿಡಿಯೋದ ಅಸಲಿ ಸತ್ಯ ಈಗ ಬಯಲಾಗಿದೆ.

ಈ ಘಟನೆಯನ್ನು ಒಮ್ಮೆ ಮೆಲುಕು ಹಾಕೋದಾದರೆ, ಮದುವೆ ದಿನ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್​ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ. ಕೆಲವೊಂದು ಹತ್ತಿರದ ಶಾಟ್​ಗಳನ್ನು ತೆಗೆದರೆ, ಇನ್ನೂ ಕೆಲವು ದೂರದ ಶಾಟ್​ಗಳನ್ನು ತೆಗೆಯುತ್ತಿದ್ದ. ಆದರೆ, ಹುಡುಗಿ ಪಕ್ಕ ನಿಂತ ಮದುವೆ ಗಂಡಿನ ಒಂದೇ ಒಂದು ಫೋಟೋವನ್ನು ಛಾಯಾಗ್ರಾಹಕ ತೆಗೆದಿರಲಿಲ್ಲ.

ವೇದಿಕೆಯ ಮೇಲೆ ಹುಡುಗಿ ಮಾತ್ರ ಇದ್ದಾಳೆ ಎಂಬಂತಿತ್ತು ಛಾಯಾಗ್ರಾಹಕನ ವರ್ತನೆ. ಮದುವೆ ಗಂಡು ಕೂಡ ತುಂಬಾನೇ ತಾಳ್ಮೆಯಿಂದ ಇದನ್ನು ನೋಡುತ್ತಲೇ ಇದ್ದ. ಸಮಯ ಕಳೆದಂತೆ ಹುಡುಗಿ ಸಮೀಪ ಹೋಗುತ್ತಿದ್ದದ್ದನ್ನು ನೋಡಿ ಮದುವೆ ಗಂಡಿನ ಪಿತ್ತ ನೆತ್ತಿಗೇರಿತ್ತು. ತಡ ಮಾಡದೆ, ಛಾಯಾಗ್ರಾಹಕನ ತಲೆಗೆ ಹೊಡೆದೇ ಬಿಟ್ಟ ಮದುಮಗ.

ಈ ಘಟನೆ ನಂತರ ಮದುವೆ ಹುಡುಗಿ ಬಿದ್ದು ಬಿದ್ದು ನಕ್ಕಿದ್ದಳು. ಅಷ್ಟೇ ಅಲ್ಲ, ಛಾಯಾಗ್ರಾಹಕನ ಮುಖದಲ್ಲಿ ಸಣ್ಣದಾದ ನಗು ಇತ್ತು. ಇದನ್ನು ನೋಡಿದ ಅನೇಕರು ಇದು ಯಾರೋ ಹೇಳಿ ಮಾಡಿಸಿದ ವಿಡಿಯೋ ಏಂದು ಹೇಳಿಕೊಂಡಿದ್ದರು. ಈ ವಿಡಿಯೋದ ಅಸಲಿ ವಿಚಾರ ಕೊನೆಗೂ ಬಯಲಾಗಿದೆ. ವಿಡಿಯೋದಲ್ಲಿದ್ದ ಹುಡುಗಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿರುವವರು ಛತ್ತೀಸ್​​ಗಢದ ನಟಿ ಅನಿಕೃತಿ ಚೌಹಾಣ್​​. ಇದೊಂದು ಸಿನಿಮಾದ ಶೂಟಿಂಗ್​ ದೃಶ್ಯವಂತೆ. ಈ ಬಗ್ಗೆ ಬರೆದುಕೊಂಡಿರುವ ನಟಿ, ಇದು ನನ್ನ ಸಿನಿಮಾ ‘ಡಾರ್ಲಿಂಗ್​ ಪ್ಯಾರ್ ಜುಕ್ತಾ ನಹಿ’ ವೀಡಿಯೊ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್​ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More