ವಧುವಿನ ಫೋಟೋ ತೆಗೆಯಹೋದ ಫೋಟೋಗ್ರಾಫರ್ ಬುರುಡೆ ಕಳಚಿ ಬೀಳುವಂತೆ ಹೊಡೆದ ಮದುಮಗ: ವಿಡಿಯೋ ವೈರಲ್
ಮದುವೆ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ.
ಮದುವೆ ಸಂದರ್ಭದಲ್ಲಿ ಫೋಟೋಗ್ರಾಫರ್ ಇರಲೇಬೇಕು ಎಂಬುದು ಇತ್ತೀಚೆಗೆ ನಿಯಮವೇ ಆದಂತಿದೆ. ಯಾವುದೇ ಮದುವೆಯಾದರೂ ಛಾಯಾಗ್ರಾಹಕ ಇಲ್ಲದೆ ಪೂರ್ಣಗೊಳ್ಳುವುದೇ ಇಲ್ಲ ಎನ್ನುವ ಸ್ಥಿತಿಗೆ ಬಂದೊದಗಿದೆ. ಫೋಟೋಗ್ರಾಫರ್ಗಳು ಕೂಡ ಅಷ್ಟೇ, ಕೊಟ್ಟ ಹಣಕ್ಕೆ ಮೋಸ ಮಾಡಬಾರದು ಎಂದು ಅತ್ಯುತ್ತಮ ಫೋಟೋವನ್ನೇ ತೆಗೆಯಲು ಪ್ರಯತ್ನಿಸುತ್ತಾರೆ. ಹೀಗೆ ಮಾಡಲು ಹೋಗಿ ಫೋಟೋಗ್ರಾಫರ್ ಓರ್ವ ಹೊಡೆತ ತಿಂದಿದ್ದಾನೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಮದುವೆ ದಿನ ಗಂಡು ಹೆಣ್ಣು ವೇದಿಕೆ ಮೇಲೆ ನಿಂತಿದ್ದರು. ವೇದಿಕೆಯನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮದುವೆ ಹುಡುಗಿಯ ಎದುರು ಬಂದ ಫೋಟೋಗ್ರಾಫರ್ ಫೋಟೋ ಕ್ಲಿಕ್ಕಿಸಲು ಆರಂಭಿಸಿದ್ದ. ಕೆಲವೊಂದು ಹತ್ತಿರದ ಶಾಟ್ಗಳನ್ನು ತೆಗೆದರೆ, ಇನ್ನೂ ಕೆಲವು ದೂರದ ಶಾಟ್ಗಳನ್ನು ತೆಗೆಯುತ್ತಿದ್ದ.
ಆದರೆ, ಹುಡುಗಿ ಪಕ್ಕ ನಿಂತ ಮದುವೆ ಗಂಡಿನ ಒಂದೇ ಒಂದು ಫೋಟೋವನ್ನು ಛಾಯಾಗ್ರಾಹಕ ತೆಗೆದಿರಲಿಲ್ಲ. ವೇದಿಕೆಯ ಮೇಲೆ ಹುಡುಗಿ ಮಾತ್ರ ಇದ್ದಾಳೆ ಎಂಬಂತಿತ್ತು ಛಾಯಾಗ್ರಾಹಕನ ವರ್ತನೆ. ಮದುವೆ ಗಂಡು ಕೂಡ ತುಂಬಾನೇ ತಾಳ್ಮೆಯಿಂದ ಇದನ್ನು ನೋಡುತ್ತಲೇ ಇದ್ದ. ಸಮಯ ಕಳೆದಂತೆ ಹುಡುಗಿ ಸಮೀಪ ಹೋಗುತ್ತಿದ್ದದ್ದನ್ನು ನೋಡಿ ಮದುವೆ ಗಂಡಿನ ಪಿತ್ತ ನೆತ್ತಿಗೇರಿತ್ತು. ತಡ ಮಾಡದೆ, ಛಾಯಾಗ್ರಾಹಕನ ತಲೆಗೆ ಹೊಡೆದೇ ಬಿಟ್ಟ ಮದುಮಗ!
ಇದನ್ನು ನೋಡಿದ ಹುಡುಗಿ ಬಿದ್ದು, ಬಿದ್ದು ನಕ್ಕಿದ್ದಾಳೆ. ಛಾಯಾಗ್ರಾಹಕ ಮಾತ್ರ ತನ್ನಿಂದ ಆದ ತಪ್ಪಾದರೂ ಏನು ಎನ್ನುವಂತೆ ಗಂಡಿನ ಮುಖ ನೋಡಿದ್ದ. ನಂತರ ವೇದಿಕೆಯಿಂದ ಕೆಳಗಿಳಿದು ಬಂದಿದ್ದ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ವೈರಲ್ ವಿಡಿಯೋ: ವಿಷಕಾರಿ ಹಾವಿನೆದುರು ಕಾಳಗಕ್ಕಿಳಿದು ಗೆದ್ದ ಸಣ್ಣ ಜೇಡ..!
Published On - 6:13 pm, Sat, 6 February 21