RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​

RRB NTPC Recruitment 2021 ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು.

RRB NTPC Recruitment 2021 ಅಭ್ಯರ್ಥಿಗಳಿಗಾಗಿ ಮಾಹಿತಿ ಲಿಂಕ್ ಆ್ಯಕ್ಟಿವೇಟ್ ಮಾಡಿದ ಆರ್​ಆರ್​ಬಿ​
ಆರ್​ಆರ್​ಬಿ ಎನ್​ಟಿಪಿಸಿ ಪರೀಕ್ಷೆ ಮಾಹಿತಿ ಪಡೆಯುವ ಲಿಂಕ್​
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Feb 06, 2021 | 6:13 PM

RRB (ರೈಲ್ವೆ ನೇಮಕಾತಿ ಮಂಡಳಿ) NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆಯ ದಿನಾಂಕಗಳು, ನಡೆಯುವ ನಗರಗಳು, ಶಿಫ್ಟ್​ ಸಮಯ, ಪ್ರವೇಶ ಪತ್ರ ಮತ್ತು ಮಾಕ್​ ಟೆಸ್ಟ್ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ನೇಮಕಾತಿ ಮಂಡಳಿ ಲಿಂಕ್​​​ ಸಕ್ರಿಯಗೊಳಿಸಿದೆ. ಆರ್​ಆರ್​ಬಿ ಎನ್​ಟಿಪಿಸಿ 2021ರ ಮೊದಲ ಸ್ಟೇಜ್​​ನ ಸಿಬಿಟಿ ನಾಲ್ಕನೇ ಹಂತದ ಪರೀಕ್ಷೆ ಬರೆಯಲಿಚ್ಛಿಸುವ ಪರೀಕ್ಷಾರ್ಥಿಗಳು ಆರ್​ಆರ್​ಬಿಯ  ಈ ಲಿಂಕ್ಮೂಲಕ ವೆಬ್​​ಸೈಟ್​ಗೆ ಭೇಟಿ ಕೊಟ್ಟು, ವಿವರಗಳನ್ನು ಪಡೆಯಬಹುದು.

ಇನ್ನು RRB NTPC 2020ರ ಅಡ್ಮಿಟ್ ಕಾರ್ಡ್​ಗಳನ್ನು ರೈಲ್ವೆ ನೇಮಕಾತಿ ಮಂಡಳಿ ಈಗಾಗಲೇ ಬಿಡುಗಡೆ ಮಾಡಿದ್ದು, ಈ ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್​ 3ರವರೆಗೆ ನಡೆಯಲಿದೆ. ಒಟ್ಟು 15 ಲಕ್ಷ ಜನರು ಪರೀಕ್ಷೆ ಬರೆಯಲಿದ್ದಾರೆ. ಹಾಗೇ 2021ರ NTPC 2021ರ ಮೊದಲ ಸ್ಟೇಜ್​, 4ನೇ ಹಂತದ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಲು ಇದೀಗ ಲಿಂಕ್​ ಸಕ್ರಿಯಗೊಳಿಸಲಾಗಿದ್ದು, ಪರೀಕ್ಷಾರ್ಥಿಗಳು ಈ ಲಿಂಕ್ ಮೂಲಕ ಹೋಗಿ ಆರ್​ಆರ್​ಬಿ ವೆಬ್​ಸೈಟ್​ಗೆ ಲಾಗಿನ್​ ಆಗಬೇಕು. ಯಾವುದೇ ಕ್ಷಣದಲ್ಲಾದರೂ ದಿನಾಂಕ ಪ್ರಕಟವಾಗಬಹುದು. ಹಾಗೇ ಪ್ರವೇಶ ಪತ್ರ ವಿತರಣೆಯೂ ಶುರುವಾಗಬಹುದಾಗಿದೆ.

ಇನ್ನು ಪ್ರವೇಶ ಪತ್ರ ಸಿಗುತ್ತಿದ್ದಂತೆ ಅದನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಎಂದು ಪರೀಕ್ಷಾರ್ಥಿಗಳಿಗೆ ಆರ್​ಆರ್​ಬಿ ಸಲಹೆ ನೀಡಿದೆ. ಹಾಗೇ ಅದರ ಮೇಲೊಂದು ಪಾಸ್​ಪೋರ್ಟ್ ಸೈಜ್​ನ ಫೋಟೋ ಅಂಟಿಸಬೇಕು. ಇನ್ನು ಪರೀಕ್ಷೆಗೆ ಹೋಗುವಾಗ ಪ್ರವೇಶ ಪತ್ರದೊಂದಿಗೆ ಒರಿಜಿನಲ್​ ಗುರುತುಪತ್ರ, ಮತ್ತೊಂದು ಫೋಟೋ ಕಾಪಿಯನ್ನೂ ಕೊಂಡೊಯ್ಯಬೇಕು.

ಹಾಗೇ, ಅಭ್ಯರ್ಥಿಗಳು ಮಾಸ್ಕ್ ಧರಿಸಿಯೇ ಪರೀಕ್ಷೆ ಬರೆಯವುದು ಕಡ್ಡಾಯವಾಗಿದೆ. ಇನ್ನು ಇದರೊಂದಿಗೆ ರೈಲ್ವೆ ಮಂಡಳಿ, ಆನ್​ಲೈನ್​ ಮೂಲಕವೂ ಪರೀಕ್ಷೆ ನಡೆಸಲಿದೆ. ಇನ್ನು ಪರೀಕ್ಷಾರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್​ಸೈಟ್  ಭೇಟಿ ಕೊಡಬಹುದು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ಲಭ್ಯವಾಗುತ್ತವೆ.

UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ