ಗಣರಾಜ್ಯೋತ್ಸವ ವಿಶೇಷ | ವಿಜಯ್ ಚೌಕ್​ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್​ಗೆ ಇದೆ ಶತಮಾನಗಳ ಇತಿಹಾಸ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 29, 2021 | 5:26 PM

ನಾಲ್ಕು ದಿನಗಳ ಕಾಲ ನಡೆಯುವ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದ ಕೊನೆಯ ದಿನ ಅಂದರೆ ಜನವರಿ 29ರಂದು ವಿಜಯ್ ಚೌಕ್​ನಲ್ಲಿ  ನಡೆಯುವ ಸೇನಾಪಡೆಯ ಬೀಟಿಂಗ್ ರಿಟ್ರೀಟ್ ಅತಿ ಮನೋಹರವಾದುದು.

ಗಣರಾಜ್ಯೋತ್ಸವ ವಿಶೇಷ | ವಿಜಯ್ ಚೌಕ್​ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್​ಗೆ ಇದೆ ಶತಮಾನಗಳ ಇತಿಹಾಸ
ಬೀಟಿಂಗ್ ರಿಟ್ರೀಟ್ ತಾಲೀಮು
Follow us on

ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಕೊನೆ ದಿನ ಅಂದರೆ ಜನವರಿ 29ರಂದು ವಿಜಯ್ ಚೌಕ್​ ನಲ್ಲಿ  ನಡೆಯುವ  ಸೇನಾಪಡೆಯ ಬೀಟಿಂಗ್ ರಿಟ್ರೀಟ್ ಅತಿ ಮನೋಹರವಾದುದು.

ಏನಿದು ಬೀಟಿಂಗ್ ರಿಟ್ರೀಟ್
ಪ್ರತಿವರ್ಷವೂ ವಿಜಯ್ ಚೌಕ್​ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಸೂರ್ಯ ಮುಳುಗುವ ಹೊತ್ತಿಗೆ ಸೈನಿಕರು ಯುದ್ಧಭೂಮಿಯಿಂದ ಮರಳುವಾಗ ಇದೇ ರೀತಿಯ ಗೀತೆಗಳನ್ನು ಸೇನಾ ಬ್ಯಾಂಡ್ ನುಡಿಸುತ್ತಿತ್ತು. ಹಾಗಾಗಿ ಇದಕ್ಕೆ ಶತಮಾನಗಳ ಇತಿಹಾಸವಿದೆ. 17ನೇ ಶತಮಾನದಲ್ಲಿ ಬ್ರಿಟನ್ ರಾಜ್ 2ನೇ ಜೇಮ್ಸ್​ ಅಧಿಕಾರವಧಿಯಲ್ಲಿ ಯುದ್ಧ ಮುಗಿದ ಕೊನೆಯ ದಿನ ಧ್ವಜವನ್ನು ಕೆಳಗಿಳಿಸಿ ಸೇನಾಪಡೆ ಡ್ರಮ್ ಬಾರಿಸಿ ಪರೇಡ್ ನಡೆಸುವ ಸಂಪ್ರದಾಯ ಆರಂಭವಾಗಿತ್ತು. ಯುದ್ಧ ಮುಗಿಸಲು ಕಹಳೆ ಊದಿ ಸೂಚನೆ ನೀಡುತ್ತಿದ್ದಂತೆ ಸೇನಾಪಡೆಗಳು ಯುದ್ಧವನ್ನು ನಿಲ್ಲಿಸಿ, ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಯುದ್ಧಭೂಮಿಯಿಂದ ಮರಳುತ್ತಿದ್ದವು.  1950ರಲ್ಲಿ ಭಾರತದ ಸೇನಾಪಡೆಯ ಮೇಜರ್ ರಾಬರ್ಟ್ ಬ್ಯಾಂಡ್ ಪರೇಡ್ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭ ಮಾಡಿದ್ದರು.

ಬೀಟಿಂಗ್ ರಿಟ್ರೀಟ್ ಎಂಬುದು ಸೇನಾಪಡೆಯ ಹಳೇ ಸಂಪ್ರದಾಯ. ಸೇನಾಪಡೆ ಯುದ್ಧ ಮುಗಿಸಿ, ಯುದ್ಧಭೂಮಿಯಿದ ಮರಳುವ ಹೊತ್ತಿಗೆ ಈ ಕಾರ್ಯಕ್ರಮ ನಡೆಯುತ್ತದೆ. ಬಣ್ಣ, ಪುಷ್ಪ ವರ್ಷ ಮಾಡಿ ಧ್ವಜವನ್ನು ಕೆಳಗಿಳಿಸಲಾಗುತ್ತದೆ. ಇದು ಹಳೇ ಸಂಪ್ರದಾಯವನ್ನು ಮತ್ತೆ ನೆನಪಿಸುವ ಕಾರ್ಯಕ್ರಮ ಎಂದು ರಕ್ಷಣಾ ಇಲಾಖೆ ಕಳೆದ ವರ್ಷ ಹೇಳಿಕೆ ನೀಡಿತ್ತು. ಬೆಂಗಾವಲು ವಾಹನದೊಂದಿಗೆ ರಾಷ್ಟ್ರಪತಿ ವಿಜಯ್ ಚೌಕ್​ಗೆ ಆಗಮಿಸುವ ಮೂಲಕ ಕಾರ್ಯಕ್ರಮ ಆರಂಭವಾಗುತ್ತದೆ. ಪ್ರಧಾನಿಯವರು ವಿಜಯ್ ಚೌಕ್​ನಲ್ಲಿ ನೆರದಿರುವ ಸಭಿಕರತ್ತ ಕೈಬೀಸಿ ಸಾಗುವಲ್ಲಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

2021ರ ಬೀಟಿಂಗ್ ರಿಟ್ರೀಟ್​ ಇಲ್ಲಿ ನೋಡಿ

 

ಬೀಟಿಂಗ್ ರೀಟ್ರಿಂಗ್ ಹೇಗಿರಲಿದೆ?
1971ರ ಭಾರತ-ಪಾಕ್​ ಯುದ್ಧದಲ್ಲಿ ಭಾರತ ಗೆದ್ದು ಇದು 50ನೇ ವರ್ಷ. ಇದರ ಸ್ಮರಣಾರ್ಥ ಈ ಬಾರಿಯ ಬೀಟಿಂಗ್ ರಿಟ್ರೀಟ್​ನಲ್ಲಿ ‘ಸ್ವರ್ಣಿಂ ವಿಜಯ್’ ಎಂಬ ವಿಶೇಷ ಹಾಡು ನುಡಿಸಲಿದ್ದಾರೆ. ಕಳೆದ ವರ್ಷ ಸಶಸ್ತ್ರಪಡೆ, ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಯ 26 ಬ್ಯಾಂಡ್, 15 ಮಿಲಿಟರಿ ಬ್ಯಾಂಡ್, 16 ವಾದ್ಯ ಮತ್ತು ಡ್ರಮ್ ತಂಡಗಳು ಭಾಗವಹಿಸಿದ್ದವು. ಅಭಿಯಾನ್, ನೃತ್ಯ ಸರಿತ, ಗಂಗಾ ಜಮುನಾ ಹಾಡಿನ ಸಂಗೀತವನ್ನು ಬೀಟಿಂಗ್ ರಿಟ್ರೀಟ್​​ನಲ್ಲಿ ನುಡಿಸಲಾಗಿತ್ತು.

ಮಹಾತ್ಮ ಗಾಂಧಿಯ ಅಬೈಡ್ ವಿದ್ ಮೀ ಹಾಡು ಇರಲ್ಲ
ಮಹಾತ್ಮ ಗಾಂಧಿ ಅವರ ಇಷ್ಟದ ಹಾಡು ಅಬೈಡ್ ವಿದ್ ಮೀ. 1950ರಿಂದ ಬೀಟಿಂಗ್ ರಿಟ್ರೀಟ್​ನಲ್ಲಿ ನುಡಿಸುತ್ತಿದ್ದ ಈ ಹಾಡನ್ನು ಕಳೆದ ವರ್ಷ ಕೈ ಬಿಡಲಾಗಿದೆ. ವಿದೇಶಿ ಹಾಡುಗಳ ಬದಲು ಹೆಚ್ಚು ಭಾರತೀಯ ಸಂಗೀತಗಳನ್ನು ಬಳಸಬೇಕು ಎಂಬ ಉದ್ದೇಶದಿಂದ ಈ ಹಾಡನ್ನು ಕೈ ಬಿಡಲಾಗಿತ್ತು ಎಂದು ಸೇನಾ ಪಡೆ ಪ್ರತಿಕ್ರಿಯಿಸಿತ್ತು. 19ನೇ ಶತಮಾನದಲ್ಲಿ ಸ್ಕಾಟಿಷ್ ಕವಿ ಹೆನ್ರಿ ಫ್ರಾನ್ಸಿಸ್ ಲಾಯಿಟ್ ಬರೆದ ಹಾಡಿಗೆ ಮಿಲಿಯಂ ಹೆನ್ರಿ ಮೋಂಕ್ ಸಂಗೀತ ಸಂಯೋಜನೆ ಮಾಡಿದ ಹಾಡಾಗಿದ್ದು ಅಬೈಡ್ ವಿದ್ ಮಿ.

ಕಳೆದ ವರ್ಷದ ಬೀಟಿಂಗ್ ರಿಟ್ರೀಟ್​ ಹೀಗಿತ್ತು..

ಬೀಟಿಂಗ್ ರಿಟ್ರೀಟ್​ನಲ್ಲಿ ಅಬೈಡ್​ ವಿದ್ ಮಿ ನುಡಿಸಾಣಿಕೆ

ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

 

Published On - 6:26 pm, Mon, 25 January 21