ಇವತ್ತು ದೇಶದೆಲ್ಲೆಲ್ಲಾ ಹಬ್ಬದ ರಂಗು.. ಭಾರತದ ಸಂವಿಧಾನಕ್ಕೆ ಅಂಗೀಕಾರ ಸಿಕ್ಕ ದಿನದ ಸಂಭ್ರಮವನ್ನ ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ದೇಶದಲ್ಲಿಂದು 73ನೇ ಗಣರಾಜೋತ್ಸವವನ್ನ ಸಂಭ್ರಮಿಸಲಾಗುತ್ತಿದೆ. ಹೀಗಾಗಿ, ರಾಷ್ಟ್ರ ರಾಜಧಾನಿಯಲ್ಲಿಂದು ಐತಿಹಾಸಿಕ ಗಣಾರಾಜ್ಯೋತ್ಸವದ ಪರೇಡ್ ನಡೆಯಿತು. ಇದೇ ಮೊದಲ ಬಾರಿಗೆ ರಾಜ್‌ಪಥ್‌ನಲ್ಲಿ ನೃತ್ಯ ಪ್ರದರ್ಶನ ಮಾಡಿದರು. ಈ ಬಾರಿಯ ಪರೇಡ್ ಸಾಕಷ್ಟು ವಿಶೇಷತೆಗಳನ್ನೂ ಒಳಗೊಂಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ಮಾಡಿದರು. ಇನ್ನು ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಜ್‌ಪಥ್‌ನಿಂದ ತೆರಳಿದರು.
ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಗಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿ ರಾಷ್ಟ್ರಪತಿ ಕೋವಿಂದ್ ತೆರಳಿದರು. ರಾಷ್ಟ್ರಪತಿ ಭವನದತ್ತ ರಾಮನಾಥ ಕೋವಿಂದ್ ತೆರಳಿದರು.
ರಾಜ್‌ಪಥ್‌ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು. ರಾಜ್‌ಪಥ್‌ನಿಂದ ರಾಷ್ಟ್ರಪತಿ ಕೋವಿಂದ್ ತೆರಳಿದರು.
ಇಂದು ದೇಶಕ್ಕೆ ಪವಿತ್ರವಾದ ದಿನ. ಜನವರಿ 26 ರಂದು ಸಂವಿಧಾನವನ್ನ ಜಾರಿಗೊಳಿಸಲಾಯ್ತು. ಎಲ್ಲಾ ವರ್ಗದವರಿಗೂ ಸಮಾನತೆ ಕಲ್ಪಿಸಲು ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಂರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದ್ದಂತೆ.
ಆದ್ರೆ ಇಡೀ ಭಾರತಕ್ಕೆ ಸಂವಿಧಾನ ಇದೆ. ನೆಹರೂ ಅವರು ಎಲ್ಲಾ ದೇಶಗಳ ಜೊತೆ ಉತ್ತಮ ಭಾಂಧವ್ಯ ಇಟ್ಕೊಂಡಿದ್ದರು. ಆದ್ರೆ ಇಂದು ನಮ್ಮ ದೇಶದ ಜೊತೆ ಭಾಂಧವ್ಯ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರದ ಗಡಿಯನ್ನ ಕಾಪಾಡಿಕೊಳ್ಳಲು ಆಗುತ್ತಿಲ್ಲ. ನಾನು ಇಲ್ಲಿ ರಾಜಕೀಯ ಭಾಷಣ ಮಾಡೋಕ್ಕೆ ಬಂದಿಲ್ಲ. ಬೇರೇ ದೇಶಗಳಿಗೆ ನಮ್ಮ ದೇಶದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಶೈಕ್ಷಣಿಕವಾಗಿ ಭಾರತ ತನ್ನದೇ ಆದ್ದಂಥ ಸ್ಥಾನ ಪಡೆದುಕೊಂಡಿದೆ. ಆದ್ರೆ ಇಂದು ಆ ಶಿಕ್ಷಣ ಸರಿಯಿಲ್ಲ ಎಂದು ಬೇರೆ ಶಿಕ್ಷಣ ನೀತಿ ತರಲು ಹೊರಟ್ಟಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮೇಘಲಯಾ – ಮಹಿಳೆಯರ ಸ್ವ ಸಹಾಯ ಸಂಘದ ಸ್ತಬ್ಧ ಚಿತ್ರ
ಗುಜರಾತ್-ಆದಿವಾಸಿ ಸ್ವತಂತ್ರ ಹೋರಾಟದ ಸ್ತಬ್ಧ ಚಿತ್ರ
ಗೋವಾ – ಗೋವಾ ಪರಂಪರೆಯ ಸ್ತಬ್ಧ ಚಿತ್ರ
ಹರಿಯಾಣ – ಕ್ರೀಡಾ ಕ್ಷೇತ್ರದ ಸಾಧನೆಯ ಸ್ತಬ್ಧ ಚಿತ್ರ
ಉತ್ತರಖಂಡ – ಉತ್ತರಖಂಡ ಅಭಿವೃದ್ಧಿಯ ಸ್ತಬ್ಧ ಚಿತ್ರ
ಅರುಣಾಂಚಲ ಪ್ರದೇಶ – ಆಂಗ್ಲೋ ಅಬ್ರೋರ್ ಯುದ್ಧ ಸ್ತಬ್ಧ ಚಿತ್ರ
ಕರ್ನಾಟಕ – ಸಾಂಪ್ರದಾಯಿಕ ಕರಕುಶಲ ತೊಟ್ಟಿಲು ಸ್ತಭ್ದ ಚಿತ್ರ
ಜಮ್ಮು ಮತ್ತು ಕಾಶ್ಮೀರ – ಬದಲಾಗುತ್ತಿರುವ ಜಮ್ಮು ಮತ್ತು ಕಾಶ್ಮೀರ ಸ್ತಬ್ಧ ಚಿತ್ರ
ಛತ್ತೀಸಘಡ್ – ನ್ಯಾಯ ಯೋಜನೆಯ ಸ್ತಬ್ಧ ಚಿತ್ರ
ಉತ್ತರಪ್ರದೇಶ – ಒಂದು ಜಿಲ್ಲೆ ಒಂದು ಉತ್ಪನ್ನ ಮತ್ತು ಕಾಶಿ ವಿಶ್ವನಾಥ ಧಾಮ ಸ್ತಬ್ಧ ಚಿತ್ರ
ಪಂಜಾಬ್ – ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ ಕೊಡುಗೆ ಸ್ತಬ್ಧ ಚಿತ್ರ
ಮಹಾರಾಷ್ಟ್ರ – ಜೀವ ವೈವಿದ್ಯತೇಯ ಸ್ತಬ್ಧ ಚಿತ್ರ
ಕೇಂದ್ರ ಸಂಸ್ಕ್ರತಿಯ ಇಲಾಖೆ – ಶ್ರೀ ಅರವಿಂದ 150ನೇ ವರ್ಷಾಚರನೆಯ ಸ್ತಬ್ಧ ಚಿತ್ರ
ಕೇಂದ್ರ ಶಿಕ್ಷಣ ಇಲಾಖೆ – ರಾಷ್ಟ್ರೀಯ ಶಿಕ್ಷಣ ನೀತಿಯ ಸ್ತಬ್ಧ ಚಿತ್ರ
ಅಂಚೆ ಇಲಾಖೆ – 75 ನೇ ವರ್ಷಾಚರಣೆಯ ಮಹಿಳಾ ಶಸಕ್ತಿಕರಣದ ಸ್ತಬ್ಧ ಚಿತ್ರ
ಕೇಂದ್ರ ಜವಳಿ ಇಲಾಖೆ – ಭವಿಷ್ಯದೆಡೆಗೆ ಹೆಜ್ಜೆ ಸ್ತಬ್ಧ ಚಿತ್ರ
ನಾಗರಿಕ ವಿಮಾನಯಾನ ಇಲಾಖೆ – ಉಡಾನ್ ಯೋಜನೆ ಸ್ತಬ್ಧ ಚಿತ್ರ
ಸಿಆರ್ಪಿಎಫ್ – ಶೌರ್ಯ ತ್ಯಾಗದ ಸ್ತಬ್ಧ ಚಿತ್ರ
ಕೇಂದ್ರ ಜಲಶಕ್ತಿ ಇಲಾಖೆ – ಜಲ ಜೀವನ್ ಮಿಷಿನ್ ಸ್ತಬ್ಧ ಚಿತ್ರ
ಕಾನೂನು ಮತ್ತು ನ್ಯಾಯ ಇಲಾಖೆ – ಲೋಕ್ ಅದಾಲತ್ ಸ್ತಬ್ಧ ಚಿತ್ರ
ರಾಜ್ಯದ 16 ಕರಕುಶಲ ವಸ್ತುಗಳ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಇಳಕಲ್ ಸೀರೆ, ಗುಳೇದಗುಡ್ಡ ಖಣ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸ್ತಬ್ಧಚಿತ್ರ ಸಾಗಲಿದೆ.
ರಾಜ್‌ಪಥ್‌ನಲ್ಲಿ ಪರೇಡ್ ಆರಂಭವಾಗಿದೆ. ಅಶ್ವರೋಹಿ ದಳದಿಂದ ನಡೆಯುತ್ತಿದೆ.
ರಾಜ್‌ಪಥ್‌ನಲ್ಲಿ ಪರೇಡ್ ಇದೀಗ ಆರಂಭವಾಗಿದೆ.
ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಧ್ವಜಾರೋಹಣ ಮಾಡಿದರು.
ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಜ್‌ಪಥ್‌ಗೆ ಆಗಮಿಸಿದರು. ರಾಷ್ಟ್ರಪತಿಯನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.
ಗಣರಾಜ್ಯೋತ್ಸವ ಹಿನ್ನೆಲೆ ದೆಹಲಿಯಲ್ಲಿ ಕೆಲವೇ ಕ್ಷಣಗಳಲ್ಲಿ ಪರೇಡ್ ಆರಂಭವಾಗಲಿದೆ.
ರಾಜ್‌ಪಥ್‌ನತ್ತ ರಾಷ್ಟ್ರಪತಿ ಕೋವಿಂದ್ ತೆರಳಿದರು. ರಾಷ್ಟ್ರಪತಿ ಭವನದಿಂದ ರಾಜ್‌ಪಥ್‌ನತ್ತ ಪ್ರಯಾಣ ಮಾಡುತ್ತಿದ್ದಾರೆ.
ಭಾಷಣದ ವೇಳೆ ಸಚಿವ ಆನಂದ್ ಸಿಂಗ್ ಎಡವಟ್ಟು ಮಾಡಿದ್ದಾರೆ. 23ನೇ ಗಣರಾಜ್ಯೋತ್ಸವ ಎಂದ ಸಚಿವ ಆನಂದ್ ಸಿಂಗ್, ತಪ್ಪು ಸರಿಪಡಿಸಿಕೊಳ್ಳದೆ ಭಾಷಣ ಮಾಡಿದ್ದಾರೆ, ಕೊಪ್ಪಳದಲ್ಲಿ ಗಣರಾಜ್ಯೋತ್ಸವ ಭಾಷಣ ವೇಳೆ ಈ ಎಡವಟ್ಟಾಗಿದೆ.
ರಾಜ್‌ಪಥ್‌ನತ್ತ ಪ್ರಧಾನಿ ನರೇಂದ್ರ ಮೋದಿ ತೆರಳಿದರು. ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ರಾಜ್‌ಪಥ್‌ನತ್ತ ಮೋದಿ ತೆರಳಿದರು.
ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮೈಸೂರಿನ ಶಕ್ತಿಧಾಮದಲ್ಲಿ ನಟ ಶಿವರಾಜ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಶಕ್ತಿಧಾಮದ ಮಕ್ಕಳ ಜೊತೆ ಕೆಲ ಸಮಯ ಕಳೆದರು.
ಇವತ್ತು ನಮಗೆ ಬಹಳಷ್ಟು ಹಕ್ಕಗಳನ್ನ ಸಂವಿಧಾನ ಕೊಟ್ಟಿದೆ. ಹಕ್ಕು ಮತ್ತು ಕರ್ತವ್ಯ ಜೊತೆ ಜೊತಗೆ ಹೋಗಬೇಕು. ಕರ್ನಾಟಕ ಭಾರತದ ಒಕ್ಕೂಟದಲ್ಲಿ ಪ್ರಬಲವಾದ ರಾಜ್ಯ. ಗ್ರಾಮ ಒನ್ ಯೋಜನೆ ಇಂದು ಉದ್ಘಾಟನೆಯಾಗಲಿದೆ ಅಂತ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ 73ನೇ ಗಣರಾಜ್ಯೋತ್ಸವ ಹಿನ್ನೆಲೆ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ.
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಿದರು.
ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಾಥ್ ನೀಡಿದರು.
ಇವತ್ತು ನಮಗೆ ಬಹಳಷ್ಟು ಹಕ್ಕಗಳನ್ನ ಸಂವಿಧಾನ ಕೊಟ್ಟಿದೆ. ಹಕ್ಕು ಮತ್ತು ಕರ್ತವ್ಯ ಜೊತೆ ಜೊತಗೆ ಹೋಗಬೇಕು. ಕರ್ನಾಟಕ ಭಾರತದ ಒಕ್ಕೂಟದಲ್ಲಿ ಪ್ರಬಲವಾದ ರಾಜ್ಯ. ಗ್ರಾಮ ಒನ್ ಯೋಜನೆ ಇಂದು ಉದ್ಘಾಟನೆಯಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಗಣರಾಜ್ಯೋತ್ಸವ ಭಾಷಣದ ವೇಳೆ ತಿಳಿಸಿದ್ದಾರೆ.
73 ನೇ ಗಣರಾಜ್ಯೋತ್ಸವ ಎನ್ನುವ ಬದಲು 23 ನೇ ಗಣರಾಜ್ಯೋತ್ಸವ ಎಂದು ಹೇಳಿ ಸಚಿವ ಆನಂದ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ. ಕೊಪ್ಪಳದಲ್ಲಿ ಗಣರಾಜ್ಯೋತ್ಸವ ಭಾಷಣದ ವೇಳೆ ಸಚಿವ ಆನಂದ ಸಿಂಗ್, ಸ್ವಾತಂತ್ರ್ಯ ಭಾರತವು ಗಣರಾಜ್ಯವಾಗಿ 72 ತುಂಬಿ 23 ನೇ ಗಣರಾಜ್ಯೋತ್ಸವವನ್ನು ಇಂದು ಆಚರಿಸುತ್ತಿದ್ದೇವೆ ಎಂದಿದ್ದಾರೆ. 73 ನೇ ಗಣರಾಜ್ಯೋತ್ಸವ ಎನ್ನುವ ಬದಲು 23 ನೇ ಗಣರಾಜ್ಯೋತ್ಸವ ಎಂದು ಹೇಳಿ ತಪ್ಪು ಸರಿಪಡಿಸಿಕೊಳ್ಳದೆ ಮಾತು ಮುಂದುವರಿಸಿದ್ರು.
ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಭಾಷಣದ ಪ್ರತಿಯಲ್ಲಿ ತಪ್ಪು ಮುದ್ರಣ ಮಾಡಲಾಗಿದೆ. 2022 ಜನವರಿ 26 ರ ಬದಲಾಗಿ 26-01-2021 ಎಂದು ಮುದ್ರಣ ಮಾಡಿ ಯಡವಟ್ಟು ಮಾಡಲಾಗಿದೆ. ಭಾಷಣದ ಪ್ರತಿಯ ಮೊದಲ ಪುಟದಲ್ಲಿ ಮುದ್ರಣ ದೋಷ ಕಂಡು ಬಂದಿದೆ.
ಚಿಕ್ಕಮಗಳೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪರಿಂದ ಧ್ವಜಾರೋಹಣ ನೆರವೇರಿದೆ. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಈಶ್ವರಪ್ಪ ಪುಷ್ಪಾರ್ಚನೆ ಮಾಡಿದ್ರು. ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ ರವಿ, ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು.
ಕಾರವಾರ: 73 ನೇ ಗಣರಾಜ್ಯೋತ್ಸವ ಹಿನ್ನೆಲೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಗರದ ಡಿ.ಆರ್.ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣದ ನಂತರ ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ಮಾಡಿದ್ರು. ಇನ್ನು ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್, ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೇರವೇರಿಸಿದ್ರು. ಸಮಾರಂಭದಲ್ಲಿ ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ. ಇನ್ನು ಮತ್ತೊಂದೆಡೆ ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಧ್ವಜಾರೋಹಣ ನೆರವೇರಿಸಿದ್ದಾರೆ.
ಮಂಗಳೂರಿನ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಎಸ್ಪಿ ಹೃಷಿಕೇಷ್ ಸೋನಾವಣೆ ಭಾಗಿಯಾಗಿದ್ದಾರೆ. ಇನ್ನು ವಿಜಯಪುರ ನಗರದ ಹೊರ ಭಾಗದಲ್ಲಿರೋ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ನೂತನ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಧ್ವಜಾರೋಹಣ ನೆರವೇರಿಸಿದ್ದಾರೆ. ಗೌರವ ವಂದನೆ ಸ್ವೀಕರಿಸಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಬಲೇಶ್ವರ ಶಾಸಕ ಎಂಬಿ ಪಾಟೀಲ್, ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಸೇರಿದಂತೆ ಇತರ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮೈಸೂರಿನಲ್ಲಿ 73ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಧ್ವಜಾರೋಹಣ ನೆರವೇರಿಸಿದ್ದಾರೆ. ಮೈಸೂರಿನ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಧ್ವಜಾರೋಹಣ ನೆರವೇರಿದ್ದು ಅಶ್ವಾರೋಹಿ ದಳದಿಂದ ಗೌರವ ವಂದನೆ ಕಾರ್ಯಕ್ರಮ ನಡೆಯುತ್ತಿದೆ. ಎಸ್ ಟಿ ಸೋಮಶೇಖರ್ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದ್ರು. ಕೋವಿಡ್ ಹಿನ್ನಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು ಅಶ್ವಾರೋಹಿ ದಳ, ಪೊಲೀಸ್ ತುಕಡಿಯಿಂದ ಆಕರ್ಷಕ ಪಥಸಂಚಲನ ನಡೆಯಲಿದೆ. ಕೇವಲ 7 ತುಕಡಿ ಮಾತ್ರ ಪಥ ಸಂಚಲನದಲ್ಲಿ ಭಾಗಿಯಾಗಲಿದ್ದು ಸಾರ್ವಜನಿಕರಿಗೆ ಈ ಬಾರಿ ಅವಕಾಶ ಇಲ್ಲ.
ಧ್ವಜಾರೋಹಣ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಗೆಹ್ಲೋಟ್ ಭಾಷಣ ಮಾಡಿದ್ದಾರೆ. ರಾಜ್ಯದ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ. 73ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನನ್ನ ಶುಭ ಕಾಮನೆಗಳು. ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. 2021-22ರಲ್ಲಿ ಜಗತ್ತು ಸವಾಲನ್ನು ನಿಭಾಯಿಸಲು ಹೆಣಗುತ್ತಿರುವಾಗ ನಾವು ಕೋವಿಡ್-19ರ ವಿರುದ್ಧ ಅತ್ಯಂತ ಸಮರ್ಥವಾಗಿ ಹೋರಾಡಿದ್ದೇವೆ. ನಾವು ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ 2022ಕ್ಕೆ ಹೆಜ್ಜೆ ಇರಿಸಿದ್ದೇವೆ.
ನನ್ನ ಸರ್ಕಾರವು, ಕೋವಿಡ್-19 ರ ಪರಿಣಾಮವನ್ನು ತಗ್ಗಿಸಲು ಹಗಲಿರುಳು ಶ್ರಮಿಸಿದೆ ಮತ್ತು ಜನತೆಯ ಸಹಕಾರದೊಂದಿಗೆ ನಾವು ರ ಪರಿಣಾಮವನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಿಕ್ಕಟ್ಟನ್ನು ನಮ್ಮ ಸಾಮರ್ಥ್ಯ ವೃದ್ಧಿಸುವ ಮತ್ತು ಹೆಚ್ಚುವರಿ ಆರೋಗ್ಯ ಮೂಲ ಸೌಕರ್ಯವನ್ನು ಸೃಜಿಸುವ ಹಾಗೂ ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ವೆಂಟಿಲೆಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ಅವಕಾಶವನ್ನಾಗಿ ನಾವು ಬಳಸಿಕೊಂಡಿದ್ದೇವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ದೇವನಹಳ್ಳಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಸದ ಬಿ.ಎನ್.ಬಚ್ಚೇಗೌಡ ಸೇರಿದಂತೆ ಸ್ಥಳೀಯ ಶಾಸಕರು ಭಾಗಿಯಾಗಿದ್ದಾರೆ.
ಬೆಂಗಳೂರಿನಲ್ಲಿ 73ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಟಿ.ಆರ್.ಗೆಹ್ಲೋಟ್‌ರಿಂದ ಧ್ವಜಾರೋಹಣ ನೆರವೇರಿದೆ. ರಾಜ್ಯಪಾಲ ಟಿ.ಸಿ.ಗೆಹ್ಲೋಟ್‌ರಿಂದ ಗೌರವ ರಕ್ಷೆ ಸ್ವೀಕಾರ.
ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಧ್ವಜಾರೋಹಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಎಮ್ಎಲ್ಸಿ ಶರವಣ, ಜೆಡಿಎಸ್ ಮುಖಂಡ ಆರ್.ಪ್ರಕಾಶ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಲಡಾಖ್: 15 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಕೊರೆಯುವ ಚಳಿಯಲ್ಲಿ ಇಂಡೊ-ಟಿಬೆಟಿಯನ್ ಪೊಲೀಸರಿಂದ ಗಣರಾಜ್ಯೋತ್ಸವ ಆಚರಣೆ
ಉತ್ತರಾಖಂಡ್: 11 ಸಾವಿರ ಅಡಿ ಎತ್ತರದ ಪ್ರದೇಶ ಔಲಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ. ಇಂಡೋ ಟಿಬೆಟಿಯನ್ ಪೊಲೀಸರಿಂದ ಗಣತಂತ್ರ ದಿನ ಆಚರಣೆ
#WATCH Indo-Tibetan Border Police 'Himveers' celebrate the 73rd Republic Day at 11,000 feet in minus 20 degrees Celsius at Auli in Uttarakhand pic.twitter.com/1nhbrOWSp3
— ANI (@ANI) January 26, 2022
ಬಳ್ಳಾರಿ: ಗವಿಯಪ್ಪ ಸರ್ಕಲ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು. 16 ವರ್ಷಗಳ ಬಳಿಕ ಜಿಲ್ಲಾ ಉಸ್ತುವಾರಿಯಾಗಿರೋ ರಾಮುಲು 150 ಅಡಿ ಎತ್ತರದ ಧ್ವಜಾರೋಹಣ ನೆರವೇರಿಸಿದ್ದಾರೆ. ದ್ವಜಾರೋಹಣ ಆಗಮನದ ವೇಳೆ ರಾಮುಲು ಕಾಲಿಗೆ ಅಭಿಮಾನಿಗಳು ನಮಸ್ಕಾರ ಮಾಡಿದ್ರು.
ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಧ್ವಜಾರೋಹಣ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಪಾಲಿಕೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ 16,000 ಅಡಿ ಎತ್ತರದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಗಣರಾಜ್ಯೋತ್ಸವ ಆಚರಣೆ ಮಾಡಿದ್ದಾರೆ.
Indo-Tibetan Border Police (ITBP) personnel celebrate #RepublicDay at 16,000 feet in Himachal Pradesh, braving the harsh winter conditions. pic.twitter.com/DjDbLdNCaw
— ANI (@ANI) January 26, 2022
ನಿಮಗೆಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ಜೈ ಹಿಂದ್! ಎಂದು ಟ್ವೀಟ್ ಮಾಡುವ ಮೂಲಕ ದೇಶಕ್ಕೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ.
आप सभी को गणतंत्र दिवस की हार्दिक शुभकामनाएं। जय हिंद!
Wishing you all a happy Republic Day. Jai Hind! #RepublicDay
— Narendra Modi (@narendramodi) January 26, 2022
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಧ್ವಜಾರೋಹಣ ಮಾಡಿದ್ದಾರೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಉಪಸ್ಥಿತಿ ಇದ್ದರು.
ನಮ್ಮ ನಾಡಿನ ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು. ದೇಶದ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ನೀಡಿ, ಅವರೆಲ್ಲರ ರಕ್ಷಣೆಗಾಗಿ ಸಂವಿಧಾನವನ್ನು ಜಾರಿಗೆ ತಂದ ದಿನವಿದು. ಆ ಆಶಯದಂತೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಮತ್ತಷ್ಟು ಬೆಳಗಲಿ, ಎಲ್ಲ ರಂಗಗಳಲ್ಲೂ ದೇಶದ ಕೀರ್ತಿ ಪತಾಕೆ ಹಾರಲಿ ಎಂದು ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಗಣರಾಜ್ಯೋತ್ಸವ ಹಿನ್ನೆಲೆ ತುಮಕೂರಿನ ಕ್ಯಾತ್ಸಂದ್ರ ಬಳಿಯಿರುವ ಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೇರವೇರಿಸಿದ್ದಾರೆ. ಸಿದ್ದಲಿಂಗ ಶ್ರೀ, ಡಿಸಿ ವೈಎಸ್ ಪಾಟೀಲ್, ಎಸ್ಪಿ ರಾಹುಲ್ ಕುಮಾರ್. ಸಿಇಒ ವಿದ್ಯಾಕುಮಾರಿ, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಮಠದ ಮಕ್ಕಳು ಧ್ವಜಾರೋಹಣದಲ್ಲಿ ಭಾಗಿಯಾಗಿದ್ದಾರೆ.
ಕೊಪ್ಪಳಕ್ಕೆ ಇಂದು ಉಸ್ತುವಾರಿ ಸಚಿವ ಆನಂದ್ ಸಿಂಗ್ ಭೇಟಿ ನೀಡಲಿದ್ದಾರೆ. ಬೆಳಗ್ಗೆ 7.30ಕ್ಕೆ ಹೊಸಪೇಟೆಯಿಂದ ಕೊಪ್ಪಳಕ್ಕೆ ಆಗಮಿಸಿ ಬೆಳಗ್ಗೆ 8 ಗಂಟೆಗೆ ಗವಿ ಮಠಕ್ಕೆ ಭೇಟಿ ನೀಡಿ ಬೆಳಗ್ಗೆ 9 ಗಂಟೆಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಸಿಂಗ್‌ರಿಂದ ಧ್ವಜಾರೋಹಣ ನೆರವೇರಲಿದೆ. ಬಳಿಕ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆಗೆ ವಾಪಸಾಗಲಿದ್ದಾರೆ.
ತುಮಕೂರಿನಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಬೆಳಗ್ಗೆ 7.15ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 8 ಗಂಟೆಗೆ RSS ಕಚೇರಿಗೆ ಭೇಟಿ ನೀಡಿ ಬೆಳಗ್ಗೆ 9 ಗಂಟೆಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 12ಕ್ಕೆ ಶಿರಾ ತಾಲೂಕಿನ ಬುಕ್ಕಾಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸಂಜೆ ತುಮಕೂರಿನಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ದೇಶಾದ್ಯಂತ ಇಂದು 73ನೇ ಗಣರಾಜ್ಯೋತ್ಸವದ ಸಂಭ್ರಮ ಹಿನ್ನೆಲೆ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿದ್ಧತೆ ಜೋರಾಗಿದೆ. ಬೆಳಗ್ಗೆ 9ಕ್ಕೆ ರಾಜ್ಯಪಾಲ ಗೆಹ್ಲೋಟ್‌ರಿಂದ ಧ್ವಜಾರೋಹಣ ನೆರವೇರಲಿದೆ.5 ವಾದ್ಯ ವೃಂದ, 4 ಕ್ಯೂಆರ್‌ಡಿ, 2 ಆರ್‌ಐವಿ, 6 ಅಶ್ವದಳ ಸೇರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ 16 ತಂಡಗಳು ಭಾಗಿಯಾಗಲಿವೆ. ಕೊರೊನಾ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಕಾರ್ಯಕ್ರಮಕ್ಕೆ ಇಂದು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನಿತರು, ಸ್ವಾತಂತ್ರ್ಯ ಹೋರಾಟಗಾರರು, BSF ಯೋಧರು ಸೇರಿದಂತೆ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾಣೆಕ್ ಷಾ ಮೈದಾನದ ಸುತ್ತ ಸಿಸಿಕ್ಯಾಮರಾಗಳ ಅಳವಡಿಸಲಾಗಿದೆ. 29 ಅಧಿಕಾರಿಗಳು, 464 ಸಿಬ್ಬಂದಿ ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ. ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು ಮೈದಾನದ ಬಳಿ ಭದ್ರತೆಗಾಗಿ 11 ಡಿಸಿಪಿಗಳು, 20 ಎಸಿಪಿಗಳು
60 ಪೊಲೀಸ್ ಇನ್ಸ್‌ಪೆಕ್ಟರ್ಸ್, 125 ಪಿಎಸ್‌ಐಗಳು ಸೇರಿ ಒಟ್ಟು 1,400 ಪೊಲೀಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ.
Published On - 7:09 am, Wed, 26 January 22