ಗಣರಾಜ್ಯೋತ್ಸವ ವಿಶೇಷ | ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ನಾರೀಶಕ್ತಿ

|

Updated on: Jan 26, 2021 | 2:24 PM

ಮೊದಲ ಸಂವಿಧಾನ ರಚನಾ ಸಭೆಯ 299 ಸದಸ್ಯರಲ್ಲಿ 15ಮಂದಿ ಮಹಿಳೆಯರಾಗಿದ್ದರು. ರಾಜಕೀಯ, ಅಧಿಕಾರದಿಂದ ಮಹಿಳೆಯರು ಒಂದು ಹೆಜ್ಜೆ ಹಿಂದೆ ನಿಲ್ಲುತ್ತಿದ್ದ ಕಾಲದಲ್ಲಿ ಬದಲಾವಣೆಯ ಬೆಳಕು ಹರಿಸಿದ ನಾರೀಶಕ್ತಿಯ ಪರಿಚಯ ಇಲ್ಲಿದೆ

ಗಣರಾಜ್ಯೋತ್ಸವ ವಿಶೇಷ | ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ನಾರೀಶಕ್ತಿ
ಸಂವಿಧಾನ ರಚನೆ ಸಮಿತಿಯಲ್ಲಿದ್ದ ಮಹಿಳೆಯರು (ಕೃಪೆ CWDS archieve)
Follow us on

ಸಂವಿಧಾನ ರಚನಾ ಸಮಿತಿಯಲ್ಲಿ ಮಹಿಳೆಯರಿಗೂ ಸ್ಥಾನ ಕಲ್ಪಿಸಿದ ಮೊದಲ ದೇಶ ಭಾರತ. ಇದು ನಮ್ಮ ಹಕ್ಕು ಎಂದು ಕೇಳದೆ, ಸಮಾನತೆ ಬೇಕು ಎಂದು ಹೇಳುವ ಮುನ್ನವೇ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ ದೇಶ ನಮ್ಮದು. ಮೊದಲ ಸಂವಿಧಾನ ರಚನಾ ಸಭೆಯ 299 ಸದಸ್ಯರಲ್ಲಿ 15 ಮಂದಿ ಮಹಿಳೆಯರಾಗಿದ್ದರು. ರಾಜಕೀಯ, ಅಧಿಕಾರದಿಂದ ಮಹಿಳೆಯರು ಒಂದು ಹೆಜ್ಜೆ ಹಿಂದೆ ನಿಲ್ಲುತ್ತಿದ್ದ ಕಾಲದಲ್ಲಿ ಬದಲಾವಣೆಯ ಬೆಳಕು ಹರಿಸಿದ ನಾರೀಶಕ್ತಿಯ ಪರಿಚಯ ಇಲ್ಲಿದೆ

ಆನಿ ಮಸ್ಕ್ರೀನ್

ಆ್ಯನಿ ಮಸ್ಕ್ರೀನ್

ಸ್ವಾತಂತ್ರ್ಯ ಹೋರಾಟಗಾರ್ತಿ, ಸಂಸತ್ ಸದಸ್ಯೆ. ಕೇರಳದ ತಿರುವನಂತಪುರಂನಲ್ಲಿ ಜನನ. ಸರ್ ಸಿ.ಪಿ.ರಾಮಸ್ವಾಮಿ ಅಯ್ಯರ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದವರು. ಕೇರಳದಿಂದ ಸಂಸತ್​ಗೆ ಆಯ್ಕೆಯಾದ ಮೊದಲ ಮಹಿಳೆ.

ದಾಕ್ಷಾಯಿಣಿ ವೇಲಾಯುಧನ್

ದಾಕ್ಷಾಯಿಣಿ ವೇಲಾಯುಧನ್

ಸಮಿತಿಯಲ್ಲಿದ್ದ ಏಕೈಕ ದಲಿತ ಮಹಿಳೆ ಮತ್ತು ಕಿರಿಯ ಸದಸ್ಯೆ. ಕೊಚ್ಚಿಯಿಂದ ಆಯ್ಕೆಯಾಗಿದ್ದ ಸಂಸತ್ ಸದಸ್ಯೆ. ಪದವಿ ಶಿಕ್ಷಣ ಪೂರೈಸಿದ ಮೊದಲ ದಲಿತ ಮಹಿಳೆ

ಮಾಲತಿ ಚೌಧರಿ

ಮಾಲತಿ ಚೌಧರಿ

ಒಡಿಶಾದಿಂದ ಆಯ್ಕೆಯಾದ ಸಂಸತ್ ಸದಸ್ಯೆ. ರವೀಂದ್ರನಾಥ್ ಟಾಗೋರರ ಶಿಷ್ಯೆ. ಉತ್ಕಲ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ. ಮಹಿಳೆ ಮತ್ತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು.

ರಾಜಕುಮಾರಿ ಅಮೃತಾ ಕೌರ್

ರಾಜಕುಮಾರಿ ಅಮೃತಾ ಕೌರ್

ಭಾರತದ ಮೊದಲ ಆರೋಗ್ಯ ಸಚಿವೆ. ಆರೋಗ್ಯ, ಶಿಕ್ಷಣ ವಲಯದಲ್ಲಿ ಬದಲಾವಣೆಗಳನ್ನು ತಂದಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸದಸ್ಯೆ ಮತ್ತು ರಾಜ್ಯಸಭಾ ಸದಸ್ಯೆ

ಹಂಸಾ ಮೆಹ್ತಾ

ಹಂಸ ಮೆಹ್ತಾ

ಬರೋಡಾ ದಿವಾನ್ ಆಗಿದ್ದ ಮನುಭಾಯ್ ಮೆಹ್ತಾರ ಮಗಳು. ಬಾಂಬೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸದಸ್ಯೆ. ಮೂಲಭೂತ ಹಕ್ಕುಗಳ ಬಗ್ಗೆ ರಚನೆಗೆ ಮಹತ್ತರ ಕೊಡುಗೆ ನೀಡಿದ್ದರು. ಬರೋಡಾ ವಿಶ್ವವಿದ್ಯಾಲಯದ ಉಪ ಕುಲಪತಿ. ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಸದಸ್ಯೆ ಮತ್ತು ಯುನೆಸ್ಕೊ ಸದಸ್ಯೆಯಾಗಿದ್ದರು.

ಅಮ್ಮು ಸ್ವಾಮಿನಾಥನ್

ಅಮ್ಮು ಸ್ವಾಮಿನಾಥನ್ (ಮಧ್ಯದಲ್ಲಿರುವವರು)

1894ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಜನನ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ 1945ರಲ್ಲಿ ಮದ್ರಾಸ್ ವಿಧಾನಸಭೆಯಲ್ಲಿ ಶಾಸಕಿ ಆಗಿದ್ದರು. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಾಗಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿದ್ದರು.

ಬೇಗಂ ಯಜಾಜ್ ರಸೂಲ್

ಬೇಗಂ ಯಜಾಜ್ ರಸೂಲ್

ಸಂವಿಧಾನ ರಚನಾ ಸಮಿತಿಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ. ಮುಸ್ಲಿಂ ಲೀಗ್ ಪಕ್ಷದ ಕಾರ್ಯಕರ್ತೆ. ಉತ್ತರಪ್ರದೇಶವನ್ನು ಪ್ರತಿನಿಧಿಸಿದ್ದ ಸಂಸತ್ ಸದಸ್ಯೆ.

ದುರ್ಗಾಬಾಯಿ ದೇಶ್ ಮುಖ್

ದುರ್ಗಾಬಾಯಿ ದೇಶಮುಖ್

ಆಂಧ್ರ ಪ್ರದೇಶದ ರಾಜಮಂಡ್ರಿ ಮೂಲದ ವಕೀಲೆ, ಸ್ವಾತಂತ್ರ ಹೋರಾಟಗಾರ್ತಿ. ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಸಮಿತಿಯಲ್ಲಿದ್ದ ಏಕೈಕ ಮಹಿಳೆ. ಸಾಮಾಜಿಕ ಅಭಿವೃದ್ಧಿಯ ಬಗ್ಗೆ ನಿಯಮ ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದವರು ಇವರು.

ಸುಚೇತಾ ಕೃಪಲಾನಿ

ಸುಚೇತಾ ಕೃಪಲಾನಿ

ಸಾರೇ ಜಹಾಂಸೇ ಅಚ್ಚಾ ಹಾಡಿನ್ನು ಸಂಸತ್ ನಲ್ಲಿ ಗಟ್ಟಿಯಾಗಿ ಹಾಡಿದ ಮಹಿಳೆ. ಭಾರತದ ಮೊದಲ ಮುಖ್ಯಮಂತ್ರಿ. ಉತ್ತರಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ಕಮಲಾ ಚೌಧರಿ
54ನೇ ಇಂಡಿಯಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ. ಲಖನೌನಿಂದ ಲೋಕಸಭೆಗೆ ಚುನಾಯಿತರಾಗಿದ್ದರು.

ಲೀಲಾ ರಾಯ್

ಲೀಲಾ ರಾಯ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಪ್ತೆ. ರಾಜ್ಯಸಭಾ ಸದಸ್ಯೆ. ಫಾರ್ವರ್ಡ್ ಬ್ಲಾಕ್​ನ ಮೊದಲ ಅಧ್ಯಕ್ಷೆ

ಪೂರ್ಣಿಮಾ ಬ್ಯಾನರ್ಜಿ
ಅಲಹಾಬಾದ್ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ. ಉತ್ತರ ಪ್ರದೇಶದ ಶಾಸಕಿ. ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮತ್ತು ಕೃಷಿ ಹೋರಾಟಗಳಿಗೆ ನೇತೃತ್ವ ನೀಡಿದ್ದರು. ಟ್ರೇಡ್ ಯೂನಿಯನ್ ನಾಯಕಿ.

ರೇಣುಕಾ ರೇ

ರೇಣುಕಾ ರೇ

ಸ್ವಾತಂತ್ರ್ಯ ಹೋರಾಟಗಾರ್ತಿ. ಆಲ್ ಇಂಡಿಯಾ ವುಮೆನ್ ಕಾನ್ಫರೆನ್ಸ್ ಅಧ್ಯಕ್ಷೆ.

ಸರೋಜಿನಿ ನಾಯ್ಡು

ಸರೋಜಿನಿ ನಾಯ್ಡು

ಭಾರತದ ಕೋಗಿಲೆ. ಕವಯತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ವಾಸ ಅನುಭವಿಸಿದ್ದರು

ವಿಜಯಲಕ್ಷ್ಮಿ ಪಂಡಿತ್

ವಿಜಯಲಕ್ಷ್ಮೀ ಪಂಡಿತ್

ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ. ಜವಾಹರ್ ಲಾಲ್ ನೆಹರೂ ಅವರ ಸಹೋದರಿ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಮಹಿಳಾ ಅಧ್ಯಕ್ಷೆ. ಲೋಕಸಭಾ ಸದಸ್ಯೆ.

ಗಣರಾಜ್ಯೋತ್ಸವ ವಿಶೇಷ | ವಿಜಯ್ ಚೌಕ್​ನಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್​ಗೆ ಇದೆ ಶತಮಾನಗಳ ಇತಿಹಾಸ

 

Published On - 1:33 pm, Tue, 26 January 21