ದೆಹಲಿ: ಕೊರೊನಾ ಕೊರೊನಾ ಕೊರೊನಾ. ಹೀಗೆ ಎಲ್ಲಿ ಕೇಳಿದ್ರು ಕಿವಿಗೆ ಪ್ರತಿಧ್ವನಿಸುವ ಒಂದೇ ಪದವೆಂದ್ರೆ ಡೆಡ್ಲಿ ಕೊರೊನಾ. ಚೀನಿಯರ ಗಿಫ್ಟ್ ‘ಕೊರೊನಾ’ ಸೋಂಕಿನ ಸಂಕಟದಿಂದ ಇಡೀ ಜಗತ್ತು ಕುಸಿದು ಬಿದ್ದಿದೆ. ಈ ಹೊತ್ತಲ್ಲೇ ಕೊರೊನಾ ಬಗ್ಗೆ ಧೈರ್ಯ ತುಂಬುವ ಮಾತುಗಳು ಆಗಾಗ ಕೇಳಿಬರ್ತಿವೆ. ಆದರೆ ತಜ್ಞರು ಈಗ ಹೊಸದಾಗಿ ನೀಡಿರುವ ಮಾಹಿತಿ ನಿಮ್ಮನ್ನು ಬೆಚ್ಚಿಬೀಳಿಸುವಂತಿದೆ.
ಕೊರೊನಾ ಸಾಮಾನ್ಯ ಸೋಂಕು, ಬಂದು ಹೋಗುತ್ತೆ. ಆದರೆ ಸ್ವಲ್ಪ ಎಚ್ಚರವಾಗಿದ್ದರೆ ಸಾಕು ಅಂತಾ ಎಲ್ಲರೂ ಧೈರ್ಯ ತುಂಬುತ್ತಿದ್ದಾರೆ. ಆದರೆ ಈ ನಡುವೆ ಬಯಲಾಗುತ್ತಿರುವ ಹೊಸ ಅಧ್ಯಯನಗಳ ರಿಪೋರ್ಟ್ಗಳು ಬೇರೆಯ ಕಥೆಯನ್ನೇ ಹೇಳುತ್ತಿವೆ. ಈಗ ಕೂಡ ದಪ್ಪಗಿರುವ ಜನರಿಗೆ ಸಂಶೋಧಕರು ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ.
ತೂಕ ಹೆಚ್ಚಾದಷ್ಟು ‘ಕೊರೊನಾ’ ಅಪಾಯ ಜಾಸ್ತಿ!
ಕೊರೊನಾ ಸೋಂಕಿಗೆ ಸಂಬಂಧಿಸಿ ಹಲವು ಆಯಾಮದಲ್ಲಿ ತಜ್ಞರು ಅಧ್ಯಯನಗಳನ್ನ ನಡೆಸ್ತಿದ್ದಾರೆ. ಈ ಬಾರಿ ಅಧಿಕ ತೂಕ ಮತ್ತು ಅತಿಯಾದ ಬೊಜ್ಜಿರುವ ವ್ಯಕ್ತಿಗಳ ಸರದಿ. ಅತಿಯಾದ ಬೊಜ್ಜಿರುವ ವ್ಯಕ್ತಿಗಳಿಗೆ ಈ ವೈರಸ್ನಿಂದ ಅಪಾಯ ಹೆಚ್ಚೆಂದು ಹೊಸ ಅಧ್ಯಯನ ತಿಳಿಸಿದೆ. ಬ್ರಿಟಿಷ್ ಆರೋಗ್ಯ ಇಲಾಖೆಯ ಕಾರ್ಯನಿರ್ವಾಹಕ ಸಂಸ್ಥೆಯ ಪಬ್ಲಿಕ್ ಹೆಲ್ತ್ ವಿಭಾಗ ಈ ಅಧ್ಯಯನ ವರದಿ ಬಿಡುಗಡೆ ಮಾಡಿದೆ.
ತೂಕ ಹೆಚ್ಚಾಗಿದ್ರೆ ಡೇಂಜರ್!
ಅಧಿಕ ತೂಕ ಇರುವವರಲ್ಲಿ ಹೆಚ್ಚಿನವರಿಗೆ ಐಸಿಯು ಬೇಕು ಬೇಕು ಅಂತಾ ವರದಿಯಲ್ಲಿ ಹೇಳಲಾಗಿದೆ. ಇನ್ನು ತೂಕ ಹೆಚ್ಚಾಗಿದ್ದರೆ ಕೊರೊನಾ ವಿರುದ್ಧ ಗೆಲುವು ಕೂಡ ಅಸಾಧ್ಯವಾಗಿರುತ್ತದೆ. 94 ಸೆಂಟಿ ಮೀಟರ್ಗೂ ಹೆಚ್ಚು ಸೊಂಟದ ಸುತ್ತಳತೆ ಇರುವ ಪುರುಷರು ಹಾಗೂ 80 ಸೆಂಟಿ ಮೀಟರ್ಗೂ ಹೆಚ್ಚು ಸುತ್ತಳತೆ ಇರುವ ಮಹಿಳೆಯರಿಗೆ ಕೊರೊನಾ ಸಮಸ್ಯೆ ಎದುರಾಗಬಹುದು. ಇನ್ನು ಇವರಲ್ಲಿ ಉಸಿರಾಟದ ಸಮಸ್ಯೆ ಎದುರಾದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ನಲ್ಲಿ ದಪ್ಪಗೆ ಇರುವವರು ಈ ವರದಿಯಿಂದಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಕೊರೊನಾ ಹರಡದಂತೆ ತಮ್ಮ ಜೀವ ರಕ್ಷಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕಿದೆ. ಯಾಕಂದ್ರೆ ಡೆಡ್ಲಿ ‘ಕೊರೊನಾ’ ಈಗ ಹಳ್ಳಿ ಹಳ್ಳಿಗಳಲ್ಲೂ ಎಂಟ್ರಿಕೊಟ್ಟು ಸ್ಥಳೀಯರ ಎದೆಬಡಿತ ಏರುಪೇರಾಗುವಂತೆ ಮಾಡಿದೆ.
Published On - 3:03 pm, Tue, 28 July 20