ಹುಟ್ಟುವಾಗಲೇ ಪ್ರಧಾನಿ ಮೋದಿ ಹಿಂದುಳಿದ ವರ್ಗದವರಾಗಿರಲಿಲ್ಲ ಎಂದ ಸಿಎಂ ರೇವಂತ್ ರೆಡ್ಡಿ; ಬಿಜೆಪಿ ಟೀಕೆ

ಪ್ರಧಾನಿ ನರೇಂದ್ರ ಮೋದಿ "ಹುಟ್ಟಿನಿಂದಲೇ ಹಿಂದುಳಿದ ವರ್ಗದವರಲ್ಲ". ಅವರು ಕಾನೂನಾತ್ಮಕವಾಗಿ ಹಿಂದುಳಿದ ವರ್ಗಕ್ಕೆ ಮತಾಂತರವಾದವರು ಎಂದು ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಬಿಜೆಪಿ ಟೀಕಿಸಿದ್ದು, ಇದು ಬೇಜವಾಬ್ದಾರಿಯುತ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ತೆಲಂಗಾಣ ಮುಖ್ಯಮಂತ್ರಿ ಸುದ್ದಿಯಲ್ಲಿರುವ ಸಲುವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ ಹೇಳಿದ್ದಾರೆ.

ಹುಟ್ಟುವಾಗಲೇ ಪ್ರಧಾನಿ ಮೋದಿ ಹಿಂದುಳಿದ ವರ್ಗದವರಾಗಿರಲಿಲ್ಲ ಎಂದ ಸಿಎಂ ರೇವಂತ್ ರೆಡ್ಡಿ; ಬಿಜೆಪಿ ಟೀಕೆ
Revanth Reddy With Pm Modi

Updated on: Feb 15, 2025 | 6:27 PM

ಹೈದರಾಬಾದ್: ತೆಲಂಗಾಣದಲ್ಲಿ ಜಾತಿ ಸಮೀಕ್ಷೆಯ ಬಗ್ಗೆ ನಡೆದ ಗದ್ದಲದ ನಡುವೆ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಹುಟ್ಟಿನಿಂದಲೇ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಅವರು “ಕಾನೂನುಬದ್ಧವಾಗಿ ಮತಾಂತರಗೊಂಡ ಹಿಂದುಳಿದ ವರ್ಗ”ಕ್ಕೆ ಸೇರಿದವರು ಎಂದು ಹೇಳಿದ್ದಾರೆ. 2001ರಲ್ಲಿ ಬಿಜೆಪಿ ನಾಯಕರಾಗಿದ್ದ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಗುಜರಾತ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಜಾತಿಯನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಈ ಹೇಳಿಕೆ ಬಳಿಕ ರೇವಂತ್ ರೆಡ್ಡಿ ಅವರನ್ನು ಟೀಕಿಸಿದ ಬಿಜೆಪಿ, ತೆಲಂಗಾಣ ಮುಖ್ಯಮಂತ್ರಿ ಯಾವುದೇ ಕೆಲಸ ಮಾಡದ ಕಾರಣ ಮತ್ತು ತೆಲಂಗಾಣ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಲು ಬಯಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ‘ನರೇಂದ್ರ ಮೋದಿ ಒಬಿಸಿ ಆದದ್ದು ಹೇಗೆ?’; ಜಾತಿ ಗಣತಿ ಪರ ಮತ್ತೆ ರಾಹುಲ್ ಗಾಂಧಿ ಬ್ಯಾಟಿಂಗ್

ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, “ಪ್ರಧಾನಿ ಮೋದಿ ಅವರು ಹಿಂದುಳಿದ ವರ್ಗದಿಂದ ಬಂದವರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಹುಟ್ಟಿನಿಂದ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ಅವರು ಕಾನೂನುಬದ್ಧವಾಗಿ ಮತಾಂತರಗೊಂಡ ಹಿಂದುಳಿದ ವರ್ಗಕ್ಕೆ ಸೇರಿದವರು. ನಾನು ನನ್ನ ಮಾತುಗಳನ್ನು ಎಚ್ಚರಿಕೆಯಿಂದಲೇ ಹೇಳುತ್ತಿದ್ದೇನೆ. 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗುವವರೆಗೂ ಮೋದಿ ಮುಂದುವರಿದ ಜಾತಿಯಲ್ಲಿಯೇ ಇದ್ದರು. ಅವರು ಮುಖ್ಯಮಂತ್ರಿಯಾದ ನಂತರ ಕಾನೂನು ಜಾರಿಗೆ ತರುವ ಮೂಲಕ ತಮ್ಮ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದರು.” ಎಂದು ಹೇಳಿದ್ದಾರೆ.


“ಅವರು ಹಿಂದುಳಿದ ವರ್ಗವಾಗಿ ಕುರ್ಚಿಯಲ್ಲಿದ್ದಾರೆ ಎಂದು ಹೇಳುತ್ತಾರೆ. ಅವರು ಹಿಂದುಳಿದ ವರ್ಗವಾಗಿ ಜಾತಿ ಪ್ರಮಾಣಪತ್ರವನ್ನು ಹೊಂದಿರಬಹುದು. ಆದರೆ ಅವರ ಮನಸ್ಥಿತಿ ಹಿಂದುಳಿದ ವರ್ಗಕ್ಕೆ ವಿರುದ್ಧವಾಗಿದೆ” ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ