ಉತ್ತರಾಖಂಡದಲ್ಲಿ ಸಂಪೂರ್ಣ ಕೊಚ್ಚಿ ಹೋದ ಋಷಿಗಂಗಾ ಜಲ ವಿದ್ಯುತ್ ಶಕ್ತಿ​ ಯೋಜನೆ

|

Updated on: Feb 07, 2021 | 9:56 PM

ಇಂದು ಸಂಭವಿಸಿದ ಹಿಮಸ್ಫೋಟದಿಂದ ಋಷಿಗಂಗಾ  ನದಿ ಉಕ್ಕಿ ಹರಿದಿತ್ತು. ಪರಿಣಾಮ ಋಷಿಗಂಗಾ  ಸಣ್ಣ ವಿದ್ಯುತ್​ ಯೋಜನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.

ಉತ್ತರಾಖಂಡದಲ್ಲಿ ಸಂಪೂರ್ಣ ಕೊಚ್ಚಿ ಹೋದ ಋಷಿಗಂಗಾ ಜಲ ವಿದ್ಯುತ್ ಶಕ್ತಿ​ ಯೋಜನೆ
ನಾಶವಾದ ವಿದ್ಯುತ್​ ಶಕ್ತಿ ಯೋಜನೆ
Follow us on

ನವದೆಹಲಿ: ಇಂದು ಉತ್ತರಾಖಂಡದಲ್ಲಿ ಸಂಭವಿಸಿದ ಭಯಾನಕ ಹಿಮಸ್ಫೋಟಕ್ಕೆ ಋಷಿಗಂಗಾ ನದಿಗೆ ಅಡ್ಡಲಾಗಿ ಸ್ಥಾಪನೆ ಮಾಡಲಾಗಿದ್ದ 13.2 ಮೆಗಾವ್ಯಾಟ್​ನ ಸಣ್ಣ ಜಲ ವಿದ್ಯುತ್​ ಯೋಜನೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಸಂಭವಿಸಿದ ಹಿಮಸ್ಫೋಟದಿಂದ ಋಷಿಗಂಗಾ  ನದಿ ಉಕ್ಕಿ ಹರಿದಿತ್ತು. ಪರಿಣಾಮ ಋಷಿಗಂಗಾ  ಸಣ್ಣ ವಿದ್ಯುತ್​ ಯೋಜನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಇನ್ನು, ಹೈಡ್ರೋ ಪ್ರಾಜೆಕ್ಟ್​​ನ ಸುರಂಗದಲ್ಲಿದ್ದವರನ್ನು ಇಂಡೋ-ಟಿಬೆಟ್​ ಗಡಿ ಪೊಲೀಸ್​ ರಕ್ಷಣೆ ಮಾಡಿದ್ದಾರೆ. ಇನ್ನೂ ಅನೇಕರು ಇಲ್ಲಿ ಸಿಕ್ಕಿ ಬಿದ್ದಿರುವ ಸಾಧ್ಯತೆ ಇದ್ದು ಅವರನ್ನು ರಕ್ಷಿಸುವ ಕಾರ್ಯ ಸಾಗಿದೆ. ತಪೋವನದಲ್ಲಿರುವ ಅಲಕಾನಂದ ನದಿಯ ಉಪನದಿ ಧೌಲಿಗಂಗಾಗೆ ಕಟ್ಟಲಾದ ಎನ್​ಟಿಪಿಸಿ ಹೈಡ್ರೋ ಪ್ರಾಜೆಕ್ಟ್​ ಕೂಡ ಹಾನಿಗೆ ತುತ್ತಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ವ್ಯಾಪಕ ಹಿಮಪಾತ ಉಂಟಾಗಿತ್ತು. ಹಿಮಸ್ಪೋಟಕ್ಕೆ ತುತ್ತಾಗಿ ಹಲವು ಕಾರ್ಮಿಕರು ಕೊಚ್ಚಿಹೋಗಿರುವ ಬಗ್ಗೆ ಅನುಮಾನ ಉಂಟಾಗಿದೆ. ಸ್ಥಳಕ್ಕೆ ಎಸ್‌ಡಿಆರ್‌ಎಫ್, ಐಟಿಬಿಪಿ ಸಿಬ್ಬಂದಿ‌ ಆಗಮಿಸಿದ್ದಾರೆ. ನದಿಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಘಟನಾ ಸ್ಥಳಕ್ಕೆ ತೆರಳುತ್ತಿದ್ದಾರೆ. ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕರ್ಣಪ್ರಯಾಗ ಮತ್ತು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಹೈಅಲರ್ಟ್‌ ಘೋಷಣೆಯಾಗಿದೆ.

ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ: ಉತ್ತರಾಖಂಡ ಹಿಮಕುಸಿತದ ತೀವ್ರತೆ ವಿವರಿಸಿದ ಸ್ಥಳೀಯ