ನಾಳೆ ತಮಿಳುನಾಡಿಗೆ ಎಂಟ್ರಿ ಬೆನ್ನಲ್ಲೇ ಶಶಿಕಲಾಗೆ ಬಿಗ್ ಶಾಕ್: ನಾಯಕಿ ಆಪ್ತೆ ಇಳವರಸಿ, ಸುಧಾಕರನ್ ಆಸ್ತಿ ಮುಟ್ಟುಗೋಲು
ಶಶಿಕಲಾ ಆಪ್ತೆ ಇಳವರಸಿ ಹಾಗೂ ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿದೆ. ಸುಧಾಕರನ್, ಇಳವರಸಿಗೆ ಸೇರಿದ 6 ಆಸ್ತಿಗಳನ್ನು 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಮುಟ್ಟುಗೋಲು ಹಾಕಿದೆ.
ಚೆನ್ನೈ: ನಾಳೆ ಶಶಿಕಲಾ ತಮಿಳುನಾಡಿಗೆ ಎಂಟ್ರಿ ಕೊಡುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕಿಗೆ ಬಿಗ್ ಶಾಕ್ ಸಿಕ್ಕಿದೆ. ಶಶಿಕಲಾ ನಟರಾಜನ್ಗೆ ತಮಿಳುನಾಡು ಸರ್ಕಾರ ಶಾಕ್ ಕೊಟ್ಟಿದೆ.
ಹೌದು, ಶಶಿಕಲಾ ಆಪ್ತೆ ಇಳವರಸಿ ಹಾಗೂ ಸುಧಾಕರನ್ ಆಸ್ತಿಗೆ ಸರ್ಕಾರ ಮುಟ್ಟುಗೋಲು ಹಾಕಿದೆ. ಸುಧಾಕರನ್, ಇಳವರಸಿಗೆ ಸೇರಿದ 6 ಆಸ್ತಿಗಳನ್ನು 2017ರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರ ಮುಟ್ಟುಗೋಲು ಹಾಕಿದೆ.
ಶಶಿಕಲಾ ಅಕ್ರಮ ಆಸ್ತಿ ಸಂಪಾದನೆ ಕೇಸ್ನಲ್ಲಿ ಶಿಕ್ಷೆ ಅನುಭವಿಸಿ ರಿಲೀಸ್ ಆಗಿದ್ದಾರೆ. ಜೊತೆಗೆ, ಅವರ ಆಪ್ತೆ ಇಳವರಸಿ ಸಹ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆದರೆ, ಶಶಿಕಲಾ ಸೋದರಳಿಯ ಸುಧಾಕರನ್ ಇನ್ನೂ ಜೈಲಲ್ಲಿದ್ದಾರೆ.
Published On - 8:18 pm, Sun, 7 February 21