ಮುಸ್ಲಿಂ, ಯಾದವರ ಬಗ್ಗೆ ಜೆಡಿಯು ಸಂಸದರ ಹೇಳಿಕೆ ವಿರುದ್ಧ ಗುಡುಗಿದ ಮಿಸಾ ಭಾರತಿ

|

Updated on: Jun 18, 2024 | 12:29 PM

ಜೆಡಿಯು ಸಂಸದ ದೇವೇಶ್​ ಚಂದ್ರ ಠಾಕೂರ್​ ಮುಸ್ಲಿಮರು ಹಾಗೂ ಯಾದವರ ವಿರುದ್ಧ ನೀಡಿರುವ ಹೇಳಿಕೆ ಕುರಿತು ಸಂಸದೆ ಮಿಸಾ ಭಾರತಿ ಮಾತನಾಡಿದ್ದಾರೆ.

ಮುಸ್ಲಿಂ, ಯಾದವರ ಬಗ್ಗೆ ಜೆಡಿಯು ಸಂಸದರ ಹೇಳಿಕೆ ವಿರುದ್ಧ ಗುಡುಗಿದ ಮಿಸಾ ಭಾರತಿ
ಮಿಸಾ ಭಾರತಿ
Follow us on

ಮುಸ್ಲಿಂ ಹಾಗೂ ಯಾದವರ ಬಗ್ಗೆ ಜೆಡಿಯು ಸಂಸದ ದೇವೇಶ್​ ಚಂದ್ರ ಠಾಕೂರ್​ ನೀಡಿದ ಹೇಳಿಕರ ವಿರುದ್ಧ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್ ಪುತ್ರಿ ಹಾಗೂ ಸಂಸದೆ ಮಿಸಾ ಭಾರತಿ(Misa Bharti) ಕಿಡಿಕಾರಿದ್ದಾರೆ. ಇವರು ಮಾತುಗಳಿಂದ ಜನರಿಗೆ ಯಾವ ರೀತಿಯ ಸಂದೇಶವನ್ನು ತಲುಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದು ಈ ತಮ್ಮ ಕ್ಷೇತ್ರದ ಜನರನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ, ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೆ ಜನರಿಗೆ ನಿಮ್ಮ ಮೇಲೆ ನಂಬಿಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಸಬ್​ ಕಾ ಸಾಥ್​, ಸಬ್​ಕಾ ವಿಕಾಸ್ ಎನ್ನುವ ಘೋಷಣೆಯನ್ನು ಇವರು ಮರೆತಂತಿದೆ. ಪ್ರಧಾನಿ ಮೋದಿಯವರ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮಿತ್ರಪಕ್ಷಗಳಾಗಿವೆ.

ಮತ್ತಷ್ಟು ಓದಿ: ನನಗೆ ಮತ ಹಾಕದ ಮುಸ್ಲಿಮರು, ಯಾದವರಿಗಾಗಿ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ

ದಿವೇಶ್​ ಚಂದ್ರ ಠಾಕೂರ್​ ಏನು ಹೇಳಿದ್ದರು?
ನನಗೆ ಮತ ಹಾಕದ ಮುಸ್ಲಿಮರು, ಯಾದವರ ಪರವಾಗಿ ನಾನು ಕೆಲಸ ಮಾಡುವುದಿಲ್ಲ ಎಂದು ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರು ಮತ್ತು ಯಾದವ ಸಮುದಾಯದ ಜನರು ತಮಗೆ ಮತ ನೀಡದ ಕಾರಣ ಅವರ ಯಾವುದೇ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬಿಹಾರದ ಸೀತಾಮರ್ಹಿ ಲೋಕಸಭಾ ಕ್ಷೇತ್ರದಲ್ಲಿ ಠಾಕೂರ್ ಅವರು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಭ್ಯರ್ಥಿ ಅರ್ಜುನ್ ರೈ ವಿರುದ್ಧ 51,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಜೆಡಿಯು ಸಂಸದ ಸೀತಾಮರ್ಹಿಯ ಯಾದವ ಮತ್ತು ಮುಸ್ಲಿಂ ಸಮುದಾಯಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬರಲು ಬಯಸುವವರು ಬರಬಹುದು, ಚಹಾ ಮತ್ತು ತಿಂಡಿಗಳನ್ನು ಸೇವಿಸಿ ನಂತರ ಹೋಗಬಹುದು, ಆದರೆ ಯಾವುದೇ ಸಹಾಯವನ್ನು ನಿರೀಕ್ಷಿಸಬೇಡಿ ಎಂದಿದ್ದಾರೆ. ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ನನ್ನ ಬಳಿಗೆ ಯಾವುದೋ ಕೆಲಸದ ನಿಮಿತ್ತ ಬಂದಿದ್ದರು, ಅವರು ಮೊದಲ ಬಾರಿಗೆ ಬಂದಿದ್ದರು ಹಾಗಾಗಿ ನಾನು ಸ್ಪಷ್ಟವಾಗಿ ಅರ್ಥವಾಗುವಂತೆ ಹೇಳಿದ್ದೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:26 pm, Tue, 18 June 24