AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವಕ್ಕೆ ಕುತ್ತು ತಂದ ರೀಲ್ಸ್, ರಿವರ್ಸ್​ ಗೇರ್​ನಲ್ಲಿದ್ದಾಗ ಎಕ್ಸಲೇಟರ್​ ಒತ್ತಿದ ಪರಿಣಾಮ ಕಂದಕಕ್ಕೆ ಬಿದ್ದ ಕಾರು, ಯುವತಿ ಸಾವು

ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್​ ಮಾಡುವ ಕ್ರೇಜ್ ಯುವಜನತೆಯಲ್ಲಿ ಹೆಚ್ಚುತ್ತಿದೆ, ಲೈಕ್‌ಗಳು ಮತ್ತು ಕಮೆಂಟ್‌ಗಳಿಗಾಗಿ ಜನರು ಏನು ಬೇಕಾದರೂ ಮಾಡುತ್ತಾರೆ. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ರೀಲುಗಳಿಂದ ಜನರು ಪ್ರಾಣವನ್ನೇ ಪಣಕ್ಕಿಟ್ಟ ಪರಿಣಾಮ ಸಾವು-ನೋವು ಸಂಭವಿಸುತ್ತಿವೆ.ಇಂತಹ ಭಯಾನಕ ಪ್ರಕರಣವೊಂದು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ನಡೆದಿದೆ.

ಜೀವಕ್ಕೆ ಕುತ್ತು ತಂದ ರೀಲ್ಸ್, ರಿವರ್ಸ್​ ಗೇರ್​ನಲ್ಲಿದ್ದಾಗ ಎಕ್ಸಲೇಟರ್​ ಒತ್ತಿದ ಪರಿಣಾಮ ಕಂದಕಕ್ಕೆ ಬಿದ್ದ ಕಾರು, ಯುವತಿ ಸಾವು
ಕಾರು ಅಪಘಾತ
ನಯನಾ ರಾಜೀವ್
|

Updated on:Jun 18, 2024 | 11:46 AM

Share

ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ ಪರಿಣಾಮ ಕಾರು ಕಂದಕಕ್ಕೆ ಬಿದ್ದು ಆಕೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದಲ್ಲಿ 23 ವರ್ಷದ ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾಳೆ.

ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.

ಸುಲಿಭಂಜನ್ ಪ್ರದೇಶದಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಯುವತಿಯನ್ನು ಶ್ವೇತಾ ಸುರ್ವಾಸೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ.

ಶ್ವೇತಾಗೆ ಕಾರು ಓಡಿಸುವಾಗ ರೀಲ್‌ಗಳನ್ನು ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಕೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು ಮತ್ತು ಶ್ವೇತಾ ಎಕ್ಸಲೇಟರ್ ಅನ್ನು ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

ಮತ್ತಷ್ಟು ಓದಿ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ; ಸಿನಿಮಾ ಸ್ಟೈಲ್​ಲ್ಲಿ ಕೆರೆಗೆ ಹಾರಿದ ಕಾರು!

ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ಚಾಲನೆ ಮಾಡುವಾಗ ಆಕೆಯ ಸ್ನೇಹಿತ ಶಿವರಾಜ್​ ಎಂಬಾತ ವಿಡಿಯೋ ಮಾಡುತ್ತಿದ್ದ, ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಆಕ್ಸಲರೇಟರ್ ಒತ್ತಿದ್ದರಿಂದ ಈ ಅವಘಡ ಸಂಭವಿಸಿದೆ.

ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ, ಆಕೆ ಸಾವನ್ನಪ್ಪಿದ್ದಾಳೆ. ಒಂದೊಮ್ಮೆ ಕಾರು ರಿವರ್ಸ್​ ಗೇರ್​ನಲ್ಲಿರುವಾಗ ಆಕ್ಸಲರೇಟರ್​ ಒತ್ತಿದರೆ ಕಾರು ನಾವಂದುಕೊಂಡಿದ್ದಕ್ಕಿಂತ ವೇಗವಾಗಿ ಚಲಿಸುವ ಸಾಧ್ಯತೆ ಇರುತ್ತದೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:45 am, Tue, 18 June 24