AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್ ವಾಲಾ; ಚಹಾದ ರುಚಿಗೆ ಫಿದಾ ಆದ ಪ್ರವಾಸಿಗರು

ಡಾಲಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆ(dolly_ki_tapri_nagpur)ಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ 52ಮಿಲಿಯನ್​​ ಅಂದರೆ 5ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

Viral Video: ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್ ವಾಲಾ; ಚಹಾದ ರುಚಿಗೆ ಫಿದಾ ಆದ ಪ್ರವಾಸಿಗರು
ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್ ವಾಲಾ
ಅಕ್ಷತಾ ವರ್ಕಾಡಿ
|

Updated on:Jun 18, 2024 | 12:22 PM

Share

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇತ್ತೀಚಿಗಷ್ಟೇ ನಾಗ್ಪುರದ ಸ್ಟಾರ್ ಚಹಾ ಮಾರಾಟಗಾರ ಡಾಲಿ ಚಾಯ್ ವಾಲಾ ಅವರ ಚಹಾಗಾಡಿಯ ಮುಂದೆ “ಒನ್​​ ಚಾಯಿ ಪ್ಲೀಸ್”​​​​​ ಅಂತ ಚಹಾ ಕೇಳಿ ಪಡೆದು ಕುಡಿದಿದ್ದರು. ಇದಲ್ಲದೇ ಇದನ್ನು ತಮ್ಮ ಸೋಶಿಯಲ್​​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಫುತ್​​ ಪಾತ್​​ನಲ್ಲಿ ಚಹಾ ಮಾರುತ್ತಿದ್ದ ಡಾಲಿ ಚಾಯ್ ವಾಲಾನ ಇಡೀ ಪ್ರಪಂಚಕ್ಕೆ ಪರಿಚಯವಾಗಿದ್ದ. ಇದೀಗ ಡಾಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದು, ತನ್ನ ಚಹಾ ಮಾಡುವ ಶೈಲಿ ಹಾಗೂ ರುಚಿಯ ಮೂಲಕ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಪ್ರವಾಸಿಗರನ್ನು ಬೆರಗುಗೊಳಿಸಿದ್ದಾನೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಡಾಲಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್​​​ ಖಾತೆ(@dolly_ki_tapri_nagpur)ಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡು ದಿನಗಳಲ್ಲಿ 52ಮಿಲಿಯನ್​​ ಅಂದರೆ 5ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ 3,092,366 ಜನರು ವಿಡಿಯೋ ಲೈಕ್ಸ್​​ ಮಾಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮಗಳೊಂದಿಗೆ ‘NEET’ ಪರೀಕ್ಷೆ ಬರೆದ ಅಪ್ಪ; ಮೊದಲ ಪ್ರಯತ್ನದಲ್ಲೇ ತೇರ್ಗಡೆ

ವೈರಲ್​​​ ಆಗಿರುವ ವಿಡಿಯೋದಲ್ಲಿ ಡಾಲಿ ಮಾಲ್ಡೀವ್ಸ್‌ನಲ್ಲಿ ಚಹಾ ಮಾಡುತ್ತಿರುವುದನ್ನು ಕಾಣಬಹುದು. ಸಮುದ್ರತೀರದಲ್ಲಿ ಚಹಾ ಮಾಡುತ್ತಿರುವುದನ್ನು ಕಂಡು ಅಲ್ಲಿಗೆ ಬಂದಿದ್ದ ಪ್ರವಾಸಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಬಳಿಕ ಪ್ರವಾಸಿಗರು ಚಹಾವನ್ನು ಕುಡಿದು ಆನಂದಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:22 pm, Tue, 18 June 24