ತನಗೆ ಹಾವು ಕಚ್ಚಿದ್ದರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯೆ

ವೈದ್ಯೆಯೊಬ್ಬರು ತಮಗೆ ಹಾವು ಕಚ್ಚಿದ್ದರೂ ಕೂಡ ರಜೆ ತೆಗೆದುಕೊಳ್ಳದೆ ಆಸ್ಪತ್ರೆಗೆ ಬಂದು ರೋಗಿಗಳ ಸೇವೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ತನಗೆ ಹಾವು ಕಚ್ಚಿದ್ದರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯೆ
ವೈದ್ಯೆImage Credit source: Tv9 Bangla
Follow us
ನಯನಾ ರಾಜೀವ್
|

Updated on: Jun 18, 2024 | 1:59 PM

ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತು ಅಕ್ಷರಶಃ ಸತ್ಯ, ಇಲ್ಲೊಬ್ಬ ವೈದ್ಯೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳ ಪ್ರಾಣ ಉಳಿಸುವ ಪಣತೊಟ್ಟಿದ್ದಾರೆ.  ತನಗೆ ಹಾವು ಕಚ್ಚಿದ್ದರೂ ವೈದ್ಯೆಯೊಬ್ಬರು ಆಸ್ಪತ್ರೆಗೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಿ ಮಾನವೀಯತೆ ಮೆರೆದಿದ್ದಾರೆ. ಹಿಂದಿನ ದಿನ ರಾತ್ರಿಯೇ ವೈದ್ಯೆಗೆ ಹಾವು ಕಚ್ಚಿತ್ತು, ದೇಹದಾದ್ಯಂತ ನೋವು, ಉರಿ ಎಲ್ಲವೂ ಆಗುತ್ತಿದ್ದರೂ ತಾನು ಡ್ರಿಪ್ಸ್​ ಹಾಕಿಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಹಾವು ಕಚ್ಚಿದ್ದ ಪರಿಣಾಮ ಇಡೀ ಮೈಕೈ ಎಲ್ಲಾ ನೋವು, ಒಂದೆಡೆ ಕೈಯಲ್ಲಿ ಸೂಜಿ, ಡ್ರಿಪ್ಸ್​ ಏರಿಸಿಕೊಂಡ ವೈದ್ಯೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ರೋಗಿಗಳಿಗೆ ಚಿಕಿತ್ಸೆ ನಿಡಿದ್ದಾರೆ,ಎದ್ದು ಓಡಾಡಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ.

ಈ ಘಟನೆ ಪಶ್ಚಿಮ ಬಂಗಾಳದ ಧುಪಗುರಿಯಲ್ಲಿ ನಡೆದಿದೆ, ವೈದ್ಯೆಯ ಹೆಸರು ಶ್ರೀಜಿತಾ. ಧುಪಗುರಿ ಗ್ರಾಮೀಣ ಆಸ್ಪತ್ರೆಯು ಇತ್ತೀಚೆಗಷ್ಟೇ ಉಪ-ಜಿಲ್ಲಾ ಆಸ್ಪತ್ರೆಯ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದರೂ ವೈದ್ಯರ ಸಂಖ್ಯೆ ಕಡಿಮೆ ಇದೆ ಎಂಬುದು ಜನರ ದೂರು.

ಮತ್ತಷ್ಟು ಓದಿ: ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

ನಿತ್ಯ ರೋಗಿಗಳ ಸಂಖ್ಯೆ ಕಡಿಮೆ ಇದ್ದು ಬೆರಳೆಣಕೆಯಷ್ಟು ವೈದ್ಯರಿರುವ ಕಾರಣ ವೈದ್ಯರು ತಮಗೆ ಆರೋಗ್ಯ ಸರಿ ಇಲ್ಲದಿದ್ದರೂ ಸೇವೆಗೆ ಹಾಜರಾಗುವುದು ಅನಿವಾರ್ಯವಾಗಿದೆ. ವೈದ್ಯೆಗೆ ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ, ಆದರೆ ರೋಗಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಆ ಸ್ಥಿತಿಯಲ್ಲೂ ಸೇವೆ ಮುಂದುವರೆಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ