ಆಂಧ್ರದ ಮಾಜಿ ಸಿಎಂ ಜಗನ್ ಮನೆಗೆ ಬಿಗಿ ಭದ್ರತೆ, 30ಕ್ಕೂ ಅಧಿಕ ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆ
ಆಂಧ್ರದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮನೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪೊಲೀಸ್ ಭದ್ರತೆಯು ಅವರು ಅಧಿಕಾರ ಕಳೆದುಕೊಂಡ ಬಳಿಕ ಹಿಂಪಡೆಯಲಾಗಿದೆ.

ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿರುವ ವೈಎಸ್‌ಆರ್‌ಸಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Jagan Mohan Reddy)ಅವರ ನಿವಾಸದಲ್ಲಿ 30ಕ್ಕೂ ಹೆಚ್ಚು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪೊಲೀಸ್ ಭದ್ರತೆಯನ್ನು ಅವರು ಅಧಿಕಾರ ಕಳೆದುಕೊಂಡ ಬಳಿಕ ಹಿಂಪಡೆಯಲಾಗಿದೆ.
ಜಗನ್ ಮೋಹನ್ ರೆಡ್ಡಿ ಅವರ ಪಕ್ಷವು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಡಿಮೆ ಸಂಖ್ಯೆಯ ಶಾಸಕ ಸ್ಥಾನಗಳನ್ನು ಪಡೆದಿದ್ದರಿಂದ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಂಡಿದ್ದರಿಂದ, ರಾಜ್ಯ ಸರ್ಕಾರ ಅವರಿಗೆ ಶಾಸಕರ ಸಮಾನ ಭದ್ರತೆಯನ್ನು ನೀಡುತ್ತಿದೆ. ಬೂದು ಬಣ್ಣದ ಸಫಾರಿ ಡ್ರೆಸ್ ಧರಿಸಿದ್ದ ಜಗನ್ ಅವರ ಮನೆಯೊಳಗೆ ಸೋಮವಾರದಿಂದಲೇ ಖಾಸಗಿ ಭದ್ರತೆಗೆ ಅವಕಾಶ ಕಲ್ಪಿಸಲಾಗಿತ್ತು.
ವಿಧಾನಸಭೆಯಲ್ಲಿ ಎರಡನೇ ಅತಿದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗಳಿಸಿದ ನಂತರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಸ್ಥಾನಮಾನವನ್ನು ನೀಡಲಾಗುತ್ತದೆ. ಔಪಚಾರಿಕ ಮಾನ್ಯತೆ ಪಡೆಯಲು ಪಕ್ಷವು ವಿಧಾನಸಭೆಯ ಒಟ್ಟು ಸದಸ್ಯತ್ವದ ಕನಿಷ್ಠ ಶೇ.10ರಷ್ಟು ಹೊಂದಿರಬೇಕು.
ಮತ್ತಷ್ಟು ಓದಿ: ಚಂದ್ರಬಾಬು ನಾಯ್ಡು ಗೆದ್ದ ಖುಷಿಯಲ್ಲೇ ಐದು ವರ್ಷದ ಬಳಿಕ ಮನೆಗೆ ಮರಳಿದ ಮಹಿಳೆ
ಚುನಾವಣೆಯ ನಂತರ ತೆಲುಗು ದೇಶಂ ಪಕ್ಷ 135 ಸ್ಥಾನಗಳನ್ನು ಗೆದ್ದುಕೊಂಡಿತ್ತು ಆದರೆ ಜನಸೇನೆ 21 ಸ್ಥಾನಗಳನ್ನು ವೈಎಸ್‌ಆರ್‌ಸಿಪಿ 11 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 8 ಸ್ಥಾನಗಳನ್ನು ಪಡೆದಿತ್ತು. ವೈಎಸ್‌ಆರ್‌ಸಿಪಿ ಸಾಕಷ್ಟು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾದ ಕಾರಣ ಸರ್ಕಾರವು ಅವರಿಗೆ ಶಾಸಕರ ಸಮಾನವಾದ ಭದ್ರತೆಯನ್ನು ಮಾತ್ರ ನೀಡುತ್ತಿದೆ.
ಮೊದಲು ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಜನ ಸಾಮಾನ್ಯರು ಹೋಗದಂತೆ ಪೊಲೀಸರು ತಡೆದಿದ್ದರು. ಹೊಸದಾಗಿ ಬಂದಿರುವ ಚಂದ್ರಬಾಬು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಜಗನ್ ಮನೆ ಮುಂಭಾಗದ ರಸ್ತೆಗೆ ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಉಂಡವಳ್ಳಿಯಿಂದ ಮಂಗಳಗಿರಿಗೆ ಹೋಗಲು ಈ ರಸ್ತೆ ಅನುಕೂಲವಾಗಿದೆ.
ಜಗನ್ ನಿವಾಸದ ಪೊಲೀಸ್ ಭದ್ರತೆಯನ್ನೂ ಸರ್ಕಾರ ತೆಗೆದುಹಾಕಿದ್ದರಿಂದ ಖಾಸಗಿ ಭದ್ರತಾ ಏಜೆನ್ಸಿಯ ಮೊರೆ ಹೋಗಿದ್ದಾರೆ, ಜಗನ್ ನಿವಾಸದಲ್ಲಿ ಸುಮಾರು 30 ಹೊಸ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Tue, 18 June 24




