AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಬಾಬು ನಾಯ್ಡು ಗೆದ್ದ ಖುಷಿಯಲ್ಲೇ ಐದು ವರ್ಷದ ಬಳಿಕ ಮನೆಗೆ ಮರಳಿದ ಮಹಿಳೆ

ಜಗನ್​ಮೋಹನ್ ರೆಡ್ಡಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನೆ ಬಿಟ್ಟು ಹೋಗಿದ್ದ ಮಹಿಳೆ ಚಂದ್ರಬಾಬು ನಾಯ್ಡು ಬಂದ ಖುಷಿಯಲ್ಲಿ ವಾಪಸ್ ಮರಳಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಚಂದ್ರಬಾಬು ನಾಯ್ಡು ಗೆದ್ದ ಖುಷಿಯಲ್ಲೇ ಐದು ವರ್ಷದ ಬಳಿಕ ಮನೆಗೆ ಮರಳಿದ ಮಹಿಳೆ
ವಿಜಯಲಕ್ಷ್ಮೀImage Credit source: TV9 Telugu
ನಯನಾ ರಾಜೀವ್
|

Updated on: Jun 17, 2024 | 3:20 PM

Share

ಕ್ರಿಕೆಟ್​ ಬೆಟ್ಟಿಂಗ್​ನಷ್ಟೇ ಚುನಾವಣಾ ಬೆಟ್ಟಿಂಗ್ ಕೂಡ ಚಾಲ್ತಿಯಲ್ಲಿದೆ. ಯಾವ ಪಕ್ಷ ಗೆಲ್ಲುತ್ತೆ ಎನ್ನುವುದರ ಬಗ್ಗೆ ಬೆಟ್ಟಿಂಗ್ ಕಟ್ಟುವುದು ಸಾಮಾನ್ಯ ಅದಕ್ಕೆ ತಕ್ಕಂತೆ ಹಣವನ್ನು ಬಿಟ್ಟಿಂಗ್ ಮೇಲೆ ಸುರಿಯುತ್ತಾರೆ. ಆದರೆ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿತ್ತು. 2019ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕುಟುಂಬದಲ್ಲಿ ಇಬ್ಬರು ಬೆಟ್ಟಿಂಗ್ ಕಟ್ಟಿದ್ದರು.

ಖಮ್ಮಂ ಜಿಲ್ಲೆಯ ಕುಸುಮಂಚಿ ಮಂಡಲದ ಕೇಶ್ವಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ನೆಚ್ಚಿನ ನಾಯಕ ಗೆಲ್ಲುತ್ತಾರೆ ಎಂದು ಒಂದೇ ಕುಟುಂಬದ ಇಬ್ಬರ ನಡುವೆ ಬಾಜಿ ಕಟ್ಟಲಾಗಿತ್ತು. ತಮ್ಮ ನಾಯಕ ಯಶಸ್ವಿಯಾಗದಿದ್ದರೆ, ತನ್ನ ನಾಯಕ ಯಶಸ್ವಿಯಾಗುವವರೆಗೂ ತಾನು ಹಳ್ಳಿಗೆ ಕಾಲಿಡುವುದಿಲ್ಲ ಎಂದು ವಿಜಯಲಕ್ಷ್ಮೀ ಶಪಥ ಮಾಡಿದ್ದರು.

ವಿಜಯಲಕ್ಷ್ಮೀ ಹಾಗೂ ಕುಟುಂಬದ ನಡುವೆ ನಡೆದ ಬೆಟ್ಟಿಂಗ್​ನಲ್ಲಿ ಒಂದೊಮ್ಮೆ ಚಂದ್ರಬಾಬು ನಾಯ್ಡು ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೆ ತಾನು ಊರು ಬಿಟ್ಟು ಹೋಗುವುದಾಗಿ ಶಪಥ ಮಾಡಿದ್ದರು. ಅದಾದ ಬಳಿಕ ಜಗನ್​ಮೋಹನ್ ರೆಡ್ಡಿ ಗೆದ್ದಿದ್ದರು, ವಿಜಯಲಕ್ಷ್ಮೀ ಊರು ಬಿಟ್ಟು ಹೋಗಿದ್ದರು, ಯಾವುದೇ ಕಾರ್ಯಕ್ರಮಕ್ಕೂ ಊರಿಗೆ ಬಂದಿರಲಿಲ್ಲ.

ಮತ್ತಷ್ಟು ಓದಿ: AP CM Swearing in Ceremony: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು

ಇದೀಗ ಚಂದ್ರಬಾಬು ನಾಯ್ಡು ಗೆದ್ದ ಖುಷಿಯಲ್ಲೇ ಊರಿಗೆ ಮರಳಿದ್ದಾರೆ. ಕುಟುಂಬದವರೂ ಆಕೆಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಮತ್ತೆ ಕೇಶವಪುರಕ್ಕೆ ಬಂದಿದ್ದರಿಂದ ಗ್ರಾಮಸ್ಥರು ವಿಜಯಲಕ್ಷ್ಮಿ ಕುಟುಂಬದವರು ಶಾಲು ಹೊದಿಸಿ, ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಐದನೇ ವರ್ಷದ ಬಳಿಕ ಮನೆಗೆ ಬಂದಿದ್ದಕ್ಕೆ ವಿಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದರು.

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ