NEET UG 2024: ಮಗಳೊಂದಿಗೆ ‘NEET’ ಪರೀಕ್ಷೆ ಬರೆದ ಅಪ್ಪ; ಮೊದಲ ಪ್ರಯತ್ನದಲ್ಲೇ ತೇರ್ಗಡೆ

''ನೀಟ್ ಪರೀಕ್ಷೆ ಬರೆಯುವ ಮುನ್ನ ನನ್ನ ವಯಸ್ಸಿನ ಬಗ್ಗೆ ನನಗೆ ಮೊದಲ ಅನುಮಾನಗಳಿದ್ದವು. ಆದರೆ 2021 ರಲ್ಲಿ ಒಡಿಶಾದಲ್ಲಿ 60 ವರ್ಷದ ವ್ಯಕ್ತಿ ಕೂಡ ನೀಟ್‌ಗೆ ಅರ್ಹತೆ ಪಡೆದಿದ್ದರು ಎಂದು ನನಗೆ ತಿಳಿಯಿತು. ಅದರಿಂದಲೇ ಮಗಳ ಜೊತೆಯಲ್ಲಿ ಪರೀಕ್ಷೆ ಬರೆಯಲು ತಯಾರಿ ನಡೆಸಿದೆ" ಎಂದು ವಿಕಾಸ್ ಮಂಗೋತ್ರ ಹೇಳಿದ್ದಾರೆ.

NEET UG 2024: ಮಗಳೊಂದಿಗೆ 'NEET' ಪರೀಕ್ಷೆ ಬರೆದ ಅಪ್ಪ; ಮೊದಲ ಪ್ರಯತ್ನದಲ್ಲೇ  ತೇರ್ಗಡೆ
NEET UG 2024
Follow us
ಅಕ್ಷತಾ ವರ್ಕಾಡಿ
|

Updated on: Jun 18, 2024 | 10:50 AM

ದೆಹಲಿ: ವಿಕಾಸ್ ಮಂಗೋತ್ರ(50) ದೆಹಲಿಯಲ್ಲಿ ಕಾರ್ಪೊರೇಟ್ ಉದ್ಯೋಗಿ. ಅವರ ಮಗಳು ಮೀಮಾಂಸಾ ಮಂಗೋತ್ರ (18) ಈ ವರ್ಷ ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆಕೆಗೆ ಅನುಮಾನ ಬಂದಿತ್ತು. ತಕ್ಷಣ ಅಪ್ಪನ ಬಳಿ ಬಂದು ಕೇಳಿದಾಗ ಸರಳವಾಗಿ ಹೇಳಿಕೊಟ್ಟಿದ್ದಾರೆ. ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ಅತ್ಯಂತ ಸುಲಭವಾಗಿ ವಿವರಿಸುತ್ತಿದ್ದ ತಂದೆಯನ್ನು ನೋಡಿ ಮಗಳಿಗೆ ಆಶ್ಚರ್ಯವಾಗಿದೆ. ಆದ್ದರಿಂದ ತಂದೆಯನ್ನೂ ಕೂಡ NEET ಪರೀಕ್ಷೆ ಬರೆಯುವಂತೆ ಮಗಳು ಒತ್ತಾಯಿಸಿದ್ದಾಳೆ. ಅದರಂತೆ ಇಬ್ಬರೂ ಸೇರಿ ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಂತರ ಇಬ್ಬರೂ ದೆಹಲಿ ಎನ್‌ಸಿಆರ್‌ನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದ್ದಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾದ NEET UG ಫಲಿತಾಂಶದಲ್ಲಿ ಇಬ್ಬರೂ ಒಂದೇ ಪ್ರಯತ್ನದಲ್ಲಿ ಅರ್ಹತೆ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ವಿಕಾಸ್ ಮಂಗೋತ್ರ ಮತ್ತು ಮಗಳು ಮೀಮಾಂಸಾ ಮಂಗೋತ್ರ

ವಾಸ್ತವವಾಗಿ, ಜಮ್ಮುವಿನ ಮಂಗೋತ್ರ ಅವರು NEET 2022 ರಲ್ಲಿ ಅರ್ಹತೆ ಪಡೆದಿದ್ದರು. 90 ರ ದಶಕದ ಆರಂಭದಲ್ಲಿ ರಾಜ್ಯದ ಪಿಎಂಟಿಗೆ ಹಾಜರಾಗಿ ಮತ್ತು MBBS ಮಾಡಲು ಬಯಸಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯಲು ಸಾಕಷ್ಟು ಅಂಕಗಳಿದ್ದರೂ, ಕೆಲವು ವೈಯಕ್ತಿಕ ಸಮಸ್ಯೆಗಳಿಂದಾಗಿ ಅದನ್ನು ಬಿಟ್ಟು ಮರುವರ್ಷ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಕೊಂಡರು. ಇದೀಗ ಮತ್ತೆ 2024ರಲ್ಲಿ ಪರೀಕ್ಷೆ ಬರೆದಿದ್ದು, ತನ್ನ ಮಗಳನ್ನು ಪ್ರೇರೇಪಿಸಲು ಮತ್ತು ಅವಳ ಬೋಧನಾ ಕೌಶಲ್ಯವನ್ನು ಸುಧಾರಿಸಲು 2024 ರಲ್ಲಿ ಎರಡನೇ ಬಾರಿಗೆ NEET ಪರೀಕ್ಷೆಯನ್ನು ಬರೆದಿದ್ದೇನೆ ಎಂದು ಮಂಗೋತ್ರ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”… ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

”ನೀಟ್ ಪರೀಕ್ಷೆ ಬರೆಯುವ ಮುನ್ನ ನನ್ನ ವಯಸ್ಸಿನ ಬಗ್ಗೆ ನನಗೆ ಮೊದಲ ಅನುಮಾನಗಳಿದ್ದವು. ಆದರೆ 2021 ರಲ್ಲಿ ಒಡಿಶಾದಲ್ಲಿ 60 ವರ್ಷದ ವ್ಯಕ್ತಿ ಕೂಡ ನೀಟ್‌ಗೆ ಅರ್ಹತೆ ಪಡೆದಿದ್ದರು ಎಂದು ನನಗೆ ತಿಳಿಯಿತು. ಇದರೊಂದಿಗೆ ಮಗಳ ಜೊತೆಯಲ್ಲಿ ಪರೀಕ್ಷೆ ಬರೆಯಲು ತಯಾರಿ ನಡೆಸಿದೆ” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್