Viral: ಗೋ ಹತ್ಯೆ ಮಾಡುವವರಿಗೆ ಚಿಕಿತ್ಸೆ ನೀಡಬೇಡಿ, ಆಸ್ಪತ್ರೆಯ ಮೇಲೆ ಗುಂಪಿನ ದಾಳಿ, ಕಣ್ಣೀರು ಹಾಕಿದ ವೈದ್ಯರು
ಬಕ್ರೀದ್ ಹಬ್ಬದ ಹಿನ್ನೆಲೆ ಶನಿವಾರ ಶನಿವಾರ (ಜೂನ್ 15) ದಂದು ತೆಲಂಗಾಣದ ಮೇದಕ್ ಪಟ್ಟಣದಲ್ಲಿ ಗೋ ಸಾಗಣೆ ವೇಳೆ ಅಲ್ಲಿನ ಮದರಸಾದ ಮೇಲೆ ಹಿಂದೂ ಸಂಘಟನೆ ದಾಳಿ ನಡೆಸಿತ್ತು. ಈ ಗಲಭೆಯಲ್ಲಿ ಗಾಯಗೊಂಡ ಮುಸ್ಲಿಮರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡಬಾರದೆಂದು ಹಿಂದೂ ಸಂಘಟನೆ ಆಸ್ಪತ್ರೆಯ ಮೇಲೂ ದಾಳಿ ಮಾಡಿತ್ತು. ಇವರ ಈ ನಡವಳಿಕೆಯಿಂದ ಕುಪಿತಗೊಂಡ ವೈದ್ಯರೊಬ್ಬರು ರೋಗಿಗಳನ್ನು ಉಪಚರಿಸುವುದು ಪಾಪವೇ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಮೇದಕ್ ಪಟ್ಟಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬಕ್ರೀದ್ ಹಬ್ಬದ ನಿಮಿತ್ತ ಶನಿವಾರ (ಜೂನ್ 15) ದಂದು ಮುಸ್ಲಿಮರು ಕಸಾಯಿಖಾನೆಗೆ ಗೋ ಸಾಗಣೆ ಮಾಡುತ್ತಿದ್ದ ವೇಳೆ ಇದನ್ನು ವಿರೋಧಿಸಿ ಮೇದಕ್‌ನ ಮಿನ್ಹಾಜ್ ಉಲ್ ಉಲೂಮ್ ಮದರಸಾದ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಗೋ ಸಾಗಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿದೆ. ಈ ಕೋಮು ಘರ್ಷಣೆಯಲ್ಲಿ ಹಲವು ಮುಸ್ಲಿಮರು ಗಾಯಗೊಂಡಿದ್ದು, ಆ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂಘರ್ಷದಲ್ಲಿ ಗಾಯಗೊಂಡ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಗೋ ಹತ್ಯೆ ಮಾಡುವವರಿಗೆ ಯಾವುದೇ ಕಾರಣಕ್ಕೂ ಚಿಕಿತ್ಸೆ ನೀಡಬಾರದೆಂದು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಯ ಮೇಲೆ 150 ರಿಂದ 200 ಜನ ಬಿಜೆಪಿ ಮತ್ತು ಬಿಜೆವೈಎಂ ಕಾರ್ಯಕರ್ತರು ಅದೇ ರಾತ್ರಿ ಮುತ್ತಿಗೆ ಹಾಕಿದ್ದಾರೆ. ನಂತರ ಆಸ್ಪತ್ರೆಯ ಒಳಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಕಿಟಕಿ, ಗಾಜು, ಪೀಠೋಪಕರಣಗಳನ್ನು ಹಾನಿಗೊಳಿಸಿದ್ದಾರೆ. ಈ ಗಲಾಟೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರ ಕಾಲಿನ ಮೂಳೆ ಕೂಡಾ ಮುರಿತವಾಗಿದ್ದು, ವೈದ್ಯರ ಕಾರುಗಳನ್ನು ಜಖಂ ಗೊಳಿಸಿದ್ದಾರೆ. ಈ ಒಂದು ಗಲಭೆಯಿಂದ ಆಘಾತಕ್ಕೊಳಗಾದ ವೈದ್ಯರೊಬ್ಬರು ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಪಾಪವೇ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Doctors are the protectors of humanity. The terror of Hindutva elements forced a doctor to tears. His only fault was admitting an injured Muslim patient to his hospital in Medak Town, Telangana. A mob of 150 to 200 people attacked his hospital and damaged a doctor’s car parked… pic.twitter.com/J20gKMIGuS
— Naseer Giyas (@NaseerGiyas) June 16, 2024
ಈ ಕುರಿತ ವಿಡಿಯೋವೊಂದನ್ನು ನಾಸೀರ್ (@NaseerGiyas) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ವೈದ್ಯರಾದ ಡಾ. ನವೀನ್ ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಾ ನಾವೇನು ತಪ್ಪು ಮಾಡಿದ್ದೇವೆ ಹೇಳಿ, ಆಸ್ಪತ್ರೆಗೆ ಬಂದ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದು ಪಾಪದ ಕೆಲಸವೇ? ಇನ್ನು ಮುಂದೆ ರೋಗಿಗಳಿಗೆ ಚಿಕಿತ್ಸೆ ನೀಡುವ ಮುಂಚೆ ಇತರ ವೈದ್ಯರ ಬಳಿ ಸಲಹೆ ಕೇಳಿ ಅವರಿಗೆ ಚಿಕಿತ್ಸೆ ನೀಡಬೇಕೇ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ ಎಂದು ನೋವಿನ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಡಿಬಾಸ್ ಜೈಲಿಂದ ಹೊರಗಡೆ ಬಂದಿಲ್ಲಾಂದ್ರೆ ನನ್ ಬದುಕಿರೋಲ್ಲ, ದರ್ಶನ್ ಅಭಿಮಾನಿಯ ಹುಚ್ಚಾಟ
ಜೂನ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಒಂದು ಅಮಾನವೀಯ ಕೃತ್ಯವನ್ನು ನೆಟ್ಟಿಗರು ಖಂಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:05 pm, Tue, 18 June 24