Viral Video: “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”…  ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

ಪ್ರಸವ ಎನ್ನುವುದು ಹೆಣ್ಣಿಗೆ ಒಂದು ಪುನರ್ ಜನ್ಮ ಇದ್ದಂತೆ. ಸಾಮಾನ್ಯವಾಗಿ ಹೆರಿಗೆಯ ಸಮಯದಲ್ಲಿ ತಾಯಿಗೆ ಒತ್ತಡ, ಆತಂಕ, ಭಯ ಎಂಬುದು  ಇದ್ದೇ ಇರುತ್ತದೆ. ಹೀಗೆ ಪ್ರಸವ ಸಮಯದಲ್ಲಿನ  ಭಯವನ್ನು ಹೋಗಲಾಡಿಸಲು  ಇಲ್ಲೊಬ್ಬರು ತಾಯಿ ತನ್ನ ಸಿ- ಸೆಕ್ಷನ್ ಡೆಲಿವರಿ ಸಮಯದಲ್ಲಿ ಶ್ರೀಕೃಷ್ಣನ  ಮಂತ್ರವನ್ನು ಪಠಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Viral Video: ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ…  ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2024 | 3:23 PM

ಹಿಂದೂ ಧರ್ಮದಲ್ಲಿ ಮಂತ್ರ ಹಾಗೂ ಜಪಗಳಿಗೆ ಮಹತ್ತರವಾದ ಸ್ಥಾನವಿದೆ. ಮಂತ್ರಗಳಿಗೆ ಅಪಾರ ಶಕ್ತಿಯಿದ್ದು, ಯಾವುದೇ ಪೂಜಾ ವಿಧಿ ಮಂತ್ರಗಳಿಲ್ಲದೆ ಪೂರ್ಣವಾಗುವುದಿಲ್ಲ. ಪ್ರತಿಯೊಂದು ಧಾರ್ಮಿಕ ಆಚರಣೆಗಳಲ್ಲಿಯೂ ಮಂತ್ರಗಳನ್ನು ಪಠಿಸಲಾಗುತ್ತದೆ. ಅಷ್ಟೇ  ಅಲ್ಲದೆ ಮಂತ್ರ ಮನಸ್ಸು ಮತ್ತು ಚೈತ್ಯವನ್ನು ಶುದ್ಧೀಕರಿಸಿ ನಮ್ಮಲ್ಲಿ ಧನಾತ್ಮಕತೆಯನ್ನು ತುಂಬುತ್ತದೆ. ಹೀಗೆ ಕಷ್ಟ ಅಥವಾ ಒತ್ತಡದ ಸಮಯದಲ್ಲಿ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ತಾಯಿ ತನ್ನ ಸಿ-ಸೆಕ್ಷನ್ ಡೆಲಿವರಿಯ ವೇಳೆ ಮನಸ್ಸಿನ ಒತ್ತಡ ಹಾಗೂ ಭಯವನ್ನು  ಕಡಿಮೆ ಮಾಡಲು ಹಾಗೂ ಮಗು ಆರೋಗ್ಯಕರವಾಗಿ ಜನಿಸಲೆಂದು ಶ್ರೀ ಕೃಷ್ಣ ಸ್ತೋತ್ರವನ್ನು ಪಠಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋವನ್ನು rajahmudry_pointofview2.0 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಭಕ್ತಿಯ ಶಕ್ತಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ತನ್ನ ಸಿ ಸೆಕ್ಷನ್ ಡೆಲಿವರಿ ವೇಳೆ ಮಹಿಳೆಯೊಬ್ಬರು ಶ್ರೀ ಕೃಷ್ಣನನ್ನು ಜಪಿಸುತ್ತಿರುವ ದೃಶ್ಯವನ್ನು ಕಾಣಬಹುದು. ತಾಯಿಯು ತಾನು ಹೆರಿಗೆಯ  ಒತ್ತಡದಿಂದ ಹಾಗೂ ಭಯದಿಂದ ಮುಕ್ತಿಯನ್ನು ಪಡೆಯಲು ಹಾಗೂ ಮಗು ಆರೋಗ್ಯಕರವಾಗಿ ಹುಟ್ಟಲು “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ..” ಎಂಬ ಶ್ರೀ ಕೃಷ್ಣನ ಸ್ತೋತ್ರವನ್ನು ಪಠಿಸಿದ್ದಾರೆ. ಹೀಗೆ ಶ್ರೀ ಕೃಷ್ಣನ ಆಶೀರ್ವಾದದಿಂದ ಮುದ್ದಾದ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾರೆ.

ಇದನ್ನೂ ಓದಿ: UPSC ಪರೀಕ್ಷೆಗೆ ತಡವಾಗಿ ಬಂದ ಯುವತಿ, ಮಗಳ ಭವಿಷ್ಯವೇ ಹಾಳಾಯಿತೆಂದು ಗೋಳಾಡಿದ ಪೋಷಕರು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ವಾರದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಅದ್ಭುತ ವಿಡಿಯೋ ದೃಶ್ಯಾವಳಿಯನ್ನು ಕಂಡು ತಾಯಿಯ ಈ ಭಜನೆ ಹಾಡು ನಿಜಕ್ಕೂ ರೋಮಾಂಚನಕಾರಿಯಾಗಿತ್ತು, ಖಂಡಿತ ಆಕೆಯ ಮಗುವಿಗೆ ಕೃಷ್ಣನ ಆಶಿರ್ವಾದ ಇದ್ದೇ ಇರುತ್ತದೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: