Viral Video: UPSC ಪರೀಕ್ಷೆಗೆ ತಡವಾಗಿ ಬಂದ ಯುವತಿ, ಮಗಳ ಭವಿಷ್ಯವೇ ಹಾಳಾಯಿತೆಂದು ಗೋಳಾಡಿದ ಪೋಷಕರು
ನಿನ್ನೆ (ಜೂನ್ 16) ದೇಶಾದ್ಯಂತ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ ನಡೆದಿದೆ. ಈ ಪರೀಕ್ಷೆ ಆರಂಭವಾಗುವ 30 ನಿಮಿಷಗಳ ಮುನ್ನ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಬರಬೇಕು ಎಂಬ ಕಟ್ಟುನಿಟ್ಟಾದ ಮಾರ್ಗಸೂಚಿಯೂ ಇದೆ. ಪರೀಕ್ಷೆ ಆರಂಭಕ್ಕೂ ಮುನ್ನ ಬೆಳಗ್ಗೆ ಸರಿಯಾಗಿ 9 ಗಂಟೆಗೆ ಪರೀಕ್ಷಾ ಕೇಂದ್ರಗಳ ಗೇಟ್ಗಳನ್ನು ಮುಚ್ಚಲಾಗುತ್ತದೆ. ಆದರೆ ಇಲ್ಲೊಂದು ಅಭ್ಯರ್ಥಿ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಆಕೆ ತಡವಾಗಿ ಬಂದಳೆಂದು ಪರೀಕ್ಷೆ ಬರೆಯಲು ನಿರಾಕರಿಸಲಾಗಿದೆ. ಇದರಿಂದ ಆಘಾತಕ್ಕೊಳಗಾದ ಆಕೆಯ ಪೋಷಕರು ದಯವಿಟ್ಟು ನನ್ನ ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಪರೀಕ್ಷಾ ಕೊಠಡಿಯ ಮುಂದೆ ಗೋಳಾಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯನ್ನು ದೇಶದಲ್ಲಿಯೇ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಎಂದು ಹೇಳಲಾಗುತ್ತದೆ. ಈ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿ ಆಗಬೇಕು, ಐಪಿಎಸ್ ಅಧಿಕಾರಿ ಆಗಬೇಕೆಂಬುದು ಅದೆಷ್ಟೋ ವಿದ್ಯಾರ್ಥಿಗಳ ಕನಸು. ಈ ಪರೀಕ್ಷೆಯಲ್ಲಿ ಗೆಲ್ಲಬೇಕು ಎಂಬ ಹಂಬಲದಿಂದ ಪ್ರತೀ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಯು.ಪಿ.ಎಸ್.ಸಿ ಪರೀಕ್ಷೆ ಸಿದ್ಧತೆ ನಡೆಸುತ್ತಿರುತ್ತಾರೆ. 2024 ನೇ ಸಾಲಿನ ಯುಪಿಎಸ್ಇ ಪರೀಕ್ಷೆ ನಿನ್ನೆ (ಜೂನ್ 16) ರಂದು ನಡೆದಿದ್ದು, ಅದೆಷ್ಟೋ ಅಭ್ಯರ್ಥಿಗಳು ಸಾವಿರಾರು ಕನಸುಗಳನ್ನು ಹೊತ್ತು ಪರೀಕ್ಷೆ ಬರೆದಿದ್ದಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿಯು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದಳೆಂದು ಆಕೆಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದ್ದು, ಮಗಳ ಕನಸು ನುಚ್ಚು ನೂರಾಯಿತೆಂದು ಆಕೆಯ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಹೆತ್ತವರ ಗೋಳಾಟದ ಈ ಮನಕಲಕುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ನಿನ್ನೆ ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಯು.ಪಿ.ಎಸ್.ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ತಡವಾಗಿ ಬಂದ ಕಾರಣ ಅಭ್ಯರ್ಥಿಯೊಬ್ಬರಿಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿದೆ. ಪರೀಕ್ಷೆ 9.30 ಕ್ಕೆ ಆರಂಭವಾದರೆ 9 ಗಂಟೆಯ ಒಳಗಾಗಿ ಅಭ್ಯರ್ಥಿಗಳೆಲ್ಲರೂ ಪರೀಕ್ಷಾ ಕೊಠಡಿಯಲ್ಲಿರಬೇಕು ಎಂಬ ನಿಯಮವೇ ಇದೆ. ಆದರೆ ಈ ಅಭ್ಯರ್ಥಿ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದು, ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಇದರಿಂದ ಆಘಾತಕ್ಕೊಳಗಾದ ಆಕೆಯ ಹೆತ್ತವರು ದಯವಿಟ್ಟು ನನ್ನ ಮಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಪರೀಕ್ಷಾ ಕೇಂದ್ರದ ಗೇಟ್ ಬಳಿ ನಿಂದತು ಗೋಳಾಡಿದ್ದಾರೆ. ಈ ಮನಕಲಕುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Heartbreaking video.💔🥲 Condition of Parents who came along with their daughter for the UPSC Prelims exam today, as their daughter was not allowed for being late. Exam starts at 9: 30 am, and they were at the gate at 9 am but were not allowed in by the principal of S.D. Adarsh… pic.twitter.com/2yZuZlSqMZ
— Sakshi (@333maheshwariii) June 16, 2024
ಸಾಕ್ಷಿ (@333maheshwariii) ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪರೀಕ್ಷಾ ಕೇಂದ್ರದ ಹೊರಗಡೆ ವಿದ್ಯಾರ್ಥಿನಿಯ ತಾಯಿ ಕುಸಿದು ಬಿದ್ದಿರುವಂತಹ ದೃಶ್ಯವನ್ನು ಕಾಣಬಹುದು. ಕೊಂಚ ತಡವಾಗಿ ಬಂದರೆ ಯಾಕೀ ಈ ಶಿಕ್ಷೆ. ದಯವಿಟ್ಟು ನನ್ನ ಮಗಳಿಗೆ ಪರೀಕ್ಷೆ ಬರೆಯಲು ಒಂದು ಅವಕಾಶ ನೀಡಿ, ಇದು ಆಕೆಯ ಭವಿಷ್ಯದ ಪ್ರಶ್ನೆ ಎಂದು ಗೇಟ್ ಮುಂದೆ ವಿದ್ಯಾರ್ಥಿನಿಯ ಹೆತ್ತವರು ಗೋಳಾಡಿದ್ದಾರೆ.
ಇದನ್ನೂ ಓದಿ: ಸಪ್ತಪದಿಗೂ ಮುನ್ನ ವಧುವಿನ ಮುಖ ನೋಡಿ ಮದುವೆ ಬೇಡ ಎಂದ ವರ
ಜೂನ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಹಲವರು ನಿಜಕ್ಕೂ ಇದು ಬೇಸರದ ಸಂಗತಿ, ಆದರೆ ಮಾರ್ಗಸೂಚಿಯ ಪ್ರಕಾರ ಆ ಅಭ್ಯರ್ಥಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕಿದ್ದು ಆಕೆಯ ಕರ್ತವ್ಯವಾಗಿತ್ತು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: