AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 

ಪ್ರೀತಿ ಕುರುಡು, ಪ್ರೀತಿಗೆ ಜಾತಿ-ಧರ್ಮ, ವಯಸ್ಸು ಯಾವುದೂ ಅಡ್ಡಿಯಾಗುವುದಿಲ್ಲ ಅಂತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ಚೀನಾದಲ್ಲಿ ವಿಚಿತ್ರ ಪ್ರೇಮ ವಿವಾಹವೊಂದು ನಡೆದಿದ್ದು, 23 ರ ಹರೆಯದ ಯುವತಿಯೊಬ್ಬಳು 70 ವರ್ಷದ ವೃದ್ಧನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.  ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.

Viral News: 80ರ ವೃದ್ಧನನ್ನು ಪ್ರೀತಿಸಿ ಮದುವೆಯಾದ 23ರ ಯುವತಿ, ಅಪರೂಪದ ಲವ್ ಸ್ಟೋರಿ 
ವೈರಲ್​​ ಸುದ್ದಿ
ಮಾಲಾಶ್ರೀ ಅಂಚನ್​
| Edited By: |

Updated on: Jun 17, 2024 | 4:49 PM

Share

ಪ್ರೀತಿಗೆ ಕಣ್ಣಿಲ್ಲ. ಈ ಪ್ರೀತಿ ಯಾವಾಗ ಹುಟ್ಟುತ್ತೆ ಅನ್ನೋದು ಗೊತ್ತಿಲ್ಲ. ಪ್ರೀತಿ ಹುಟ್ಟುವಾಗ   ಜಾತಿ, ಧರ್ಮ, ಅಂತಸ್ತು, ವಯಸ್ಸು ಯಾವುದೂ ಗಮನಕ್ಕೆ ಬರಲ್ಲ. ಹೀಗೆ ಜಾತಿ, ಅಂತಸ್ತು, ವಯಸ್ಸಿನ ಅಂತರವನ್ನೂ ಮೀರಿ ಅದೆಷ್ಟೋ ಜೋಡಿಗಳು ಪ್ರೇಮ ವಿವಾಹವಾಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಯುವತಿಯರು ತಮಗಿಂತ 15 ರಿಂದ 20 ವರ್ಷ ಹೆಚ್ಚಿನ ವಯಸ್ಸಿನವರನ್ನು ಮದುವೆಯಾಗುವ ಕೆಲವೊಂದು ಸುದ್ದಿಗಳು ಕೇಳಿ ಬರುತ್ತಿರುತ್ತವೆ. ಅದೇ ರೀತಿ ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಇಲ್ಲೊಬ್ಬಳು 23 ವರ್ಷದ ಯುವತಿ 80 ರ ವೃದ್ಧನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.

ಈ ಅಪರೂಪದ ಘಟನೆ ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದ್ದು, 23 ವರ್ಷದ ಯುವತಿಯೊಬ್ಬಳು ವೃದ್ಧಾಶ್ರಮದಲ್ಲಿನ 80 ವರ್ಷದ ವೃದ್ಧನೊಂದಿಗೆ ಪ್ರೀತಿಯಲ್ಲಿ ಬಿದ್ದು ಆತನನ್ನೇ ಮದುವೆಯಾಗಿದ್ದಾಳೆ. ಹೆಬೈ ಪ್ರಾಂತ್ಯದ ವೃದ್ಧಾಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬಾಕೆ ಅಲ್ಲಿ ಲೀ ಎಂಬ 80 ರ ವೃದ್ಧನ ಪರಿಚಯವಾಗುತ್ತದೆ. ಆ ವೃದ್ಧನ ಪ್ರಬುದ್ಧತೆ, ಬುದ್ಧಿವಂತಿಕೆಗೆ ಆಕರ್ಷಿತಳಾದ ಕ್ಸಿಯಾಫಾಂಗ್ ಆತನ ಪ್ರೀತಿಯಲ್ಲಿ ಬೀಳುತ್ತಾಳೆ. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಈ ಬಗ್ಗೆ ಕ್ಸಿಯಾಫಾಂಗ್ ತನ್ನ ಕುಟುಂಬದವರ ಬಳಿ ಹೇಳಿದಾಗ ಅವರು ಈಕೆಯ ಈ ನಿರ್ಧಾರಕ್ಕೆ ಒಪ್ಪಲಿಲ್ಲ. ನನಗೆ ಲೀ ಅವರೇ ಬೇಕೆಂದು ಹಠ ಹಿಡಿದ ಕ್ಸಿಯಾಫಾಂಗ್ ತನ್ನ ಕುಟುಂಬದೊಂದಿಗಿನ ಎಲ್ಲಾ ಸಂಬಂಧವನ್ನು ಮುರಿದು ಕೊನೆಗೆ ಲೀ ಅವರನ್ನು ವಿವಾಹವಾಗಿದ್ದಾಳೆ.

ಇದನ್ನೂ ಓದಿ: “ಶ್ರೀ ಕೃಷ್ಣ ಗೋವಿಂದ ಹರೇ ಮುರಾರೇ”… ಸಿಸೇರಿಯನ್ ಹೆರಿಗೆಯ ವೇಳೆ ಕೃಷ್ಣ ಸ್ತೋತ್ರ ಪಠಿಸಿದ ತಾಯಿ

ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಈ ಇಬ್ಬರೂ ಇತ್ತೀಚಿಗೆ ಸರಳವಾಗಿ ವಿವಾಹವಾಗಿದ್ದು, ಇಬ್ಬರ ಕುಟುಂಬದವರೂ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಚೀನಾದ ಸ್ಥಳೀಯ ಸುದ್ದಿ ಸಂಸ್ಥೆಗಳು  ವರದಿ ಮಾಡಿದೆ. ಈ ನವ ದಂಪತಿಗಳ ಪ್ರೇಮ ಕಥೆ  ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವರು ಈ ಯುವತಿ ವೃದ್ಧನನ್ನು ಹಣಕ್ಕಾಗಿ ಮದುವೆಯಾಗಿದ್ದಾಳೆ ಎಂದು ಹೇಳಿದರೇ ಇನ್ನೂ ಕೆಲವರು ಆಕೆಯ ನಿಷ್ಕಲ್ಮಶ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​