AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಭಾರತದ ಬೀದಿ ಬದಿ ಚಹಾ ಮಾಡುವ ಶೈಲಿಗೆ ಮನಸೋತ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್

ಮಹಾರಾಷ್ಟ್ರದ ನಾಗಪುರದ ಡಾಲಿ ಚಾಯ್ವಾಲಾ ತನ್ನ ವಿಶಿಷ್ಟ ಚಹಾ ತಯಾರಿಕೆಯ ಶೈಲಿಯಿಂದಲೇ ಸಾಕಷ್ಟು ಹೆಸರನ್ನು ಗಳಿಸಿದ್ದಾನೆ. ಇದೀಗ ಆತ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಹೌದು ಈತ ಚಹಾ ತಯಾರಿಸುವ ಶೈಲಿಗೆ ಪ್ರಖ್ಯಾತ ಉದ್ಯಮಿ ಹಾಗೂ ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮನಸೋತಿದ್ದು, ಈ ಕುರಿತ ವಿಡಿಯೋವೊಂದನ್ನು ಸ್ವತಃ ಬಿಲ್ ಗೇಟ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಭಾರತದ ಬೀದಿ ಬದಿ ಚಹಾ ಮಾಡುವ ಶೈಲಿಗೆ ಮನಸೋತ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Feb 29, 2024 | 4:03 PM

Share

ಮೈಕ್ರೋಸಾಫ್ಟ್ ನ ಸಹ-ಸಂಸ್ಥಾಪಕ ಹಾಗೂ ಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಅವರ ಬಗ್ಗೆ ತಿಳಿಯದರವರು ಯಾರು ಇಲ್ಲ. ಅವರ ಶ್ರೀಮಂತಿಕೆಯ ಹೊರತಾಗಿ ಬಿಲ್ ಗೇಟ್ಸ್ ತಮ್ಮ ಸರಳತೆಯಿಂದಲೂ ಪ್ರಪಂಚದಾದ್ಯಂತ ಪ್ರಖ್ಯಾತಿಯನ್ನು ಗಳಿಸಿದ್ದಾರೆ. ಇದೀಗ ಭಾರತದ ಪ್ರವಾಸದಲ್ಲಿರುವ ಬಿಲ್ ಗೇಟ್ಸ್ ಅವರು ಇಲ್ಲಿನ ಚಹಾ ಅಂಗಡಿಯೊಂದರ ವಿಶೇಷ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇವರ ಈ ಸರಳತೆಗೆ ನೆಟ್ಟಿಗರು ಮನಸೋತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಬಿಲ್ ಗೇಟ್ಸ್ (@thisbillgates) ಅವರ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಭಾರತದಲ್ಲಿ ನೀವು ತಿರುಗಾಡಿದಲ್ಲೆಲ್ಲಾ ಹೊಸತನವನ್ನು ಕಾಣಬಹುದು; ಸರಳವಾದ ಚಹಾ ತಯಾರಿಕೆಯಲ್ಲಿಯೂ ಸಹ!” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಫೇಮಸ್ ಚಾಯ್ವಾಲಾ ಡಾಲಿ, ಬಿಲ್ ಗೇಟ್ಸ್ ಅವರ ಮುಂದೆ ಸ್ಟೈಲ್ ಆಗಿ ಚಹಾ ತಯಾರಿಸಿ, ನಂತರ ಅವರಿಗೆ ಸರ್ವ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಡಾಲಿ ಚಾಯ್ವಾಲಾನ ಈ ಚಹಾ ಮಾಡುವ ಶೈಲಿಗೆ ಬಿಲ್ ಗೇಟ್ಸ್ ಅವರು ಫುಲ್ ಫಿದಾ ಆಗಿದ್ದಾರೆ.

ಅಷ್ಟಕ್ಕೂ ಈ ಡಾಲಿ ಚಾಯ್ವಾಲಾ ಯಾರು?

ಮಹಾರಾಷ್ಟ್ರದ ಪ್ರಮುಖ ನಗರವಾದ ನಾಗ್ಪುರದಲ್ಲಿ ಡಾಲಿ ಚಾಯ್ವಾಲಾ ಬಹಳ ಪ್ರಸಿದ್ಧಿಯನ್ನು ಪಡೆದಿದ್ದಾನೆ. ಈ ವ್ಯಕ್ತಿಯು 10 ನೇ ತರಗತಿಯ ನಂತರ, ತನ್ನ ಅಧ್ಯಯನವನ್ನು ತೊರೆದು ನಗರದ ಬೀದಿಗಳಲ್ಲಿ ಚಹಾ ಮಾರುವ ಕೆಲಸವನ್ನು ಮಾಡಲು ಶರು ಮಾಡಿದ. ಹೀಗೆ ಕಳೆದ 16 ವರ್ಷಗಳಿಂದ ನಾಗಪುರದ ಸಿವಿಲ್ ಲೈನ್ಸ್ ಬಳಿ ಪುಟ್ಟ ಚಹಾ ಅಂಗಡಿಯನ್ನು ನಡೆಸುತ್ತಿದ್ದಾನೆ. ಈತನ ವಿಭಿನ್ನ ಸ್ಟೈಲ್ ಹಾಗೇನೆ ಈತ ಚಹಾ ಮಾಡುವ ಶೈಲಿ ಮತ್ತು ಚಹಾದ ಟೇಸ್ಟ್ ಗೆ ಹಲವಾರು ಅಭಿಮಾನಿಗಳಿದ್ದಾರೆ. ಈತ ರಜನಿಕಾಂತ್ ಸ್ಟೈಲ್ ಅಲ್ಲಿ ಗ್ರಾಹಕರಿಗೆ ಚಹಾವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ವಿಶಿಷ್ಟ ರೀತಿಯಲ್ಲಿ ಗ್ರಾಹಕರನ್ನು ಸ್ವಾಗತಿಸುತ್ತಾನೆ. ಈ ಚಹಾ ಅಂಗಡಿಗೆ ಹಲವಾರು ಸೆಲೆಬ್ರಿಟಿಗಳೂ ಕೂಡಾ ಭೇಟಿ ನೀಡಿದ್ದು, ಈತ ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಹೆಸರನ್ನು ಗಳಿಸಿದ್ದಾನೆ. ಈತನ ವಿಶಿಷ್ಟ ಶೈಲಿಯ ಚಹಾ ತಯಾರಿಕೆಗೆ ಇದೀಗ ಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಕೂಡಾ ಮನಸೋತಿದ್ದಾರೆ.

ಇದನ್ನೂ ಓದಿ: ಲಡಾಖ್​​​​ನ ಪ್ಯಾಂಗೊಂಗ್ ತ್ಸೋ ಸರೋವರದಲ್ಲಿ ನಡೆದ ವಿಶ್ವದ ಅತ್ಯಂತ ಸವಾಲಿನ ಮ್ಯಾರಥಾನ್

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 29.4 ಮಿಲಿಯನ್ ವೀಕ್ಷಣೆಗಳನ್ನು 2.2 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಅನಿರೀಕ್ಷಿತ ಕಾಲೇಬರೇಷನ್ʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಿಡಿಯೋ ಸೂಪರ್ ಆಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಬಿಲ್ ಗೇಟ್ಸ್ ಅವರ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ