ChatGPT ಅಲ್ಲ, ಇದು Chai GPT; ಸಖತ್ ವೈರಲ್ ಆಗುತ್ತಿದೆ ಚಹಾ ಅಂಗಡಿ ಹೆಸರು
ನೀವು ಸಾಮಾನ್ಯವಾಗಿ ChatGPT ಕೇಳಿರುತ್ತೀರಿ, ಆದರೆ ಎಂದಾದರೂ Chai GPT ಕೇಳಿದ್ದೀರಾ? ಈ ಹೆಸರು ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ನೀವು ಸಾಮಾನ್ಯವಾಗಿ ChatGPT ಕೇಳಿರುತ್ತೀರಿ, ಆದರೆ ಎಂದಾದರೂ Chai GPT ಕೇಳಿದ್ದೀರಾ? ಈ ಹೆಸರು ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಒಂದು ಕಪ್ ಬೇಡ, ಕೇವಲ ಒಂದು ಸಿಪ್ ಟೀ ಸಿಕ್ಕಿದ್ರೆ ಸಾಕು, ಇಲ್ಲದಿದ್ದರೆ ನನ್ನ ದಿನವೇ ಪ್ರಾರಂಭ ಆಗಲ್ಲ ಅನ್ನೋರೇ ಹೆಚ್ಚು. ಹೌದು ಟೀ ಎಂದರೆ ಬಹುತೇಕರಿಗೆ ಅಚ್ಚು ಮೆಚ್ಚು. ಅದರಂತೆ ಅಂತರಾಷ್ಟ್ರೀಯ ಚಹಾ ದಿನ(ಮೇ 21)ದಂದು Chai GPT ಹೆಸರು ಎಲ್ಲೆಡೇ ಭಾರೀ ಸದ್ದು ಮಾಡುತ್ತಿದೆ. ಏನಿದು Chai GPT? ಇಲ್ಲಿದೆ ಮಾಹಿತಿ.
Chai GPT ಚಹಾ ವ್ಯಾಪಾರಿಯೊಬ್ಬರು ತಮ್ಮ ಚಹಾ ಅಂಗಡಿಗೆ ಕ್ರಿಯಾತ್ಮಕವಾಗಿ ಇಟ್ಟಿರುವ ಹೆಸರು. ಈ ರೀತಿಯ ವಿಭಿನ್ನ ಕ್ರಿಯಾತ್ಮಕ ಹೆಸರುಗಳಿಂದಲೇ ಜನರನ್ನು ತಮ್ಮ ವ್ಯಾಪಾರದತ್ತ ಸೆಳೆದುಕೊಳ್ಳುತ್ತಿದೆ. ಸ್ವಟ್ಕಟ್ ಎಂಬ ಟ್ವಿಟರ್ ಬಳಕೆದಾರರು ಈ ಚಹಾ ಅಂಗಡಿಯ ಬೋರ್ಡ್ನ ಪೋಟೋ ಹಂಚಿಕೊಂಡಿದ್ದು, ಸಿಲಿಕಾನ್ ವ್ಯಾಲಿ: ನಮ್ಮಲ್ಲಿ ಅತ್ಯುತ್ತಮ ಸ್ಟಾರ್ಟ್-ಅಪ್ ಐಡಿಯಾಗಳು ಎಂದು ಕ್ಯಾಪ್ಟನ್ ಹಾಕಲಾಗಿದೆ. ಆದರೆ, ಸ್ಟಾಲ್ ಇರುವ ಸ್ಥಳವನ್ನು ಬಳಕೆದಾರರು ಬಹಿರಂಗಪಡಿಸಿಲ್ಲ. ಇದೀಗಾ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Silicon valley : we have the best start-up ideas
Indian tea shops : hold my tea pic.twitter.com/1j5WtBHowF
— SwatKat? (@swatic12) May 17, 2023
ಇದನ್ನೂ ಓದಿ: ಅಂತರರಾಷ್ಟ್ರೀಯ ಚಹಾ ದಿನದ ಇತಿಹಾಸ, ದಿನಾಂಕ ಹಾಗೂ ಮಹತ್ವದ ಕುರಿತು ಮಾಹಿತಿ ಇಲ್ಲಿದೆ
ವಿಶ್ವದಾದ್ಯಂತ ತಂತ್ರಜ್ಞಾನ ಲೋಕದಲ್ಲಿ ಇತ್ತೀಚಿಗೆ ಹರಿದಾಡುತ್ತಿರುವ ಹಾಗೂ ಭಾರೀ ಸಂಚಲನ ಮೂಡಿಸುತ್ತಿರುವ ವಿಷಯ ಎಂದರೆ ‘ಚಾಟ್ ಜಿಟಿಪಿ’.ಈ ಚಾಟ್ ಜಿಟಿಪಿ ಮೂಲಕ ಬಳಕೆದಾರರು ತಮ್ಮೆಲ್ಲಾ ಪ್ರಶ್ನೆಗಳಿಗೆ ಕ್ಷಣದಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಕೃತಕ ತಂತ್ರಜ್ಞಾನದ ಈಗಾಗಲೇ ತಿಳಿದಿರುವ ವಿಷಯ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: